
ಪಾಟ್ನಾ: ಕನ್ನಡ ರಾಜ್ಯೋತ್ಸವದ ಕಂಪು ಬಿಹಾರದಲ್ಲೂ ಪಸರಿಸಿದೆ. ಹೌದು, ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿರೋ ಕರ್ನಾಟಕ ಮೂಲದ CRPF ಯೋಧರು ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
ಎಲ್ಲಾ ಯೋಧರು ತಮ್ಮ ಕಮಾಂಡಿಂಗ್ ಆಫೀಸಿರ್ ಆದ ಬೆಂಗಳೂರು ಮೂಲದ ಅರ್ಚನಾ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಿದರು. ಯೋಧರೆಲ್ಲರೂ ಮೊದಲು ಭುವನೇಶ್ವರಿಯ ಫೋಟೋಗೆ ಪೂಜೆ ಸಲ್ಲಿಸಿ ಬಳಿಕ ಪರಸ್ಪರ ಸಿಹಿ ಹಂಚಿದರು. ನಂತರ ಕನ್ನಡ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ರು.
Published On - 5:19 pm, Sun, 1 November 20