‘ಹತ್ರಾಸ್‌ ಪೈಶಾಚಿಕ ಘಟನೆ: ಕಾಂಗ್ರೆಸ್​ನದ್ದು ದನ ಸತ್ತರೆ.. ರಣಹದ್ದು ‌ಕಾಯುವ ಮನಃಸ್ಥಿತಿ’

ಚಿಕ್ಕಮಗಳೂರು: ಸೆಪ್ಟೆಂಬರ್14ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಾದ ಯುವತಿ ಮೇಲೆ ಗ್ಯಾಂಗ್‌ರೇಪ್, ಹತ್ಯೆ ಪ್ರಕರಣ ಸಂಬಂಧ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವ ಸರಿಯಲ್ಲ. ಕಾಂಗ್ರೆಸ್​ನದ್ದು ದನ ಸತ್ತರೆ ರಣಹದ್ದು ‌ಕಾಯುವ ರೀತಿ ಮನಸ್ಥಿತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇನೆ. ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಆದರೆ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವನೆ ಸರಿಯಿಲ್ಲ. ಕಾಂಗ್ರೆಸ್ ನದ್ದು ದನ ಸತ್ತರೆ ರಣಹದ್ದುಗಳು ‌ ಕಾಯುವ ರೀತಿಯ ಮನಸ್ಥಿತಿ. ರಾಹುಲ್ ಗಾಂಧಿ […]

‘ಹತ್ರಾಸ್‌ ಪೈಶಾಚಿಕ ಘಟನೆ: ಕಾಂಗ್ರೆಸ್​ನದ್ದು ದನ ಸತ್ತರೆ.. ರಣಹದ್ದು ‌ಕಾಯುವ ಮನಃಸ್ಥಿತಿ’
Edited By:

Updated on: Feb 22, 2021 | 6:38 PM

ಚಿಕ್ಕಮಗಳೂರು: ಸೆಪ್ಟೆಂಬರ್14ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಾದ ಯುವತಿ ಮೇಲೆ ಗ್ಯಾಂಗ್‌ರೇಪ್, ಹತ್ಯೆ ಪ್ರಕರಣ ಸಂಬಂಧ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವ ಸರಿಯಲ್ಲ. ಕಾಂಗ್ರೆಸ್​ನದ್ದು ದನ ಸತ್ತರೆ ರಣಹದ್ದು ‌ಕಾಯುವ ರೀತಿ ಮನಸ್ಥಿತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇನೆ. ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಆದರೆ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವನೆ ಸರಿಯಿಲ್ಲ. ಕಾಂಗ್ರೆಸ್ ನದ್ದು ದನ ಸತ್ತರೆ ರಣಹದ್ದುಗಳು ‌ ಕಾಯುವ ರೀತಿಯ ಮನಸ್ಥಿತಿ. ರಾಹುಲ್ ಗಾಂಧಿ ಸಾಂತ್ವನ ಹೇಳೋದಕ್ಕೆ ಹೊರಟಿರಲಿಲ್ಲ. ಬದಲಾಗಿ ಪ್ರದರ್ಶನ ಮಾಡೋದಕ್ಕೆ ಅವರು ಹೊರಟಿದ್ರು. ಪ್ರದರ್ಶನದ ಮೂಲಕ ಸಾಂತ್ವನ ಹೇಳೋದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Published On - 12:54 pm, Fri, 2 October 20