ಸಹೋದರಿ ಮದುವೆಗಾಗಿ.. ಕಳ್ಳತನ ಮಾಡಿದ್ದವರು ಕೊನೆಗೂ ಅರೆಸ್ಟ್​

ಸಹೋದರಿ ಮದುವೆಗಾಗಿ ಕಳ್ಳತನ ಮಾಡಿದ್ದ ಇಬ್ಬರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ MSಪಾಳ್ಯ ಮೂಲದ ಶೇಖ್ ಸಲ್ಮಾನ್‌(30) ಹಾಗೂ ತಬರೇಜ್ ಖಾನ್(34) ಬಂಧಿತ ಆರೋಪಿಗಳು.

ಸಹೋದರಿ ಮದುವೆಗಾಗಿ.. ಕಳ್ಳತನ ಮಾಡಿದ್ದವರು ಕೊನೆಗೂ ಅರೆಸ್ಟ್​
ದಾಬಸ್‌ಪೇಟೆ ಪೊಲೀಸ್ ಠಾಣೆ
Edited By:

Updated on: Jan 07, 2021 | 5:03 PM

ನೆಲಮಂಗಲ: ಸಹೋದರಿ ಮದುವೆಗಾಗಿ ಕಳ್ಳತನ ಮಾಡಿದ್ದ ಇಬ್ಬರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ MS ಪಾಳ್ಯ ಮೂಲದ ಶೇಖ್ ಸಲ್ಮಾನ್‌(30) ಹಾಗೂ ತಬರೇಜ್ ಖಾನ್(34) ಬಂಧಿತ ಆರೋಪಿಗಳು.

ಸಲ್ಮಾನ್​ ಮತ್ತು ತಬರೇಜ್​ ಡಿಸೆಂಬರ್​ 9ರಂದು ಛಾಯಾ ಶಂಕರ್ ಎಂಬುವವರ ಮನೆಯಲ್ಲಿ ಕಳವು ಮಾಡಿದ್ದರು. ಮನೆಯಲ್ಲಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣ, 5 ವಾಚ್​ ಹಾಗೂ 2 ಕ್ಯಾಮರಾವನ್ನು ಹೊತ್ತೊಯ್ದಿದ್ದರು.

ಮನೆ ಸಮೀಪ ಟೀ ಕುಡಿಯುವ ನೆಪ ಮಾಡಿ 4 ದಿನ ಮನೆಯವರ ಚಲನವಲನವನ್ನು ಆರೋಪಿಗಳು ವಾಚ್ ಮಾಡಿದ್ದರು. ಮನೆಯ ಸದಸ್ಯರು ಹಿಂದೂಪುರದ ತಮ್ಮ ಸಂಬಂಧಿಗಳ ಮನೆಗೆ ತೆರಳಿದ್ದಾಗ ಆರೋಪಿಗಳು ಕಳವು ಮಾಡಿದ್ದಾರೆ.

ಕದ್ದಿದ್ದ ಚಿನ್ನವನ್ನ ಶೇಖ್ ಸಲ್ಮಾನ್‌ ತನ್ನ ಸ್ನೇಹಿತ ತಬರೇಜ್ ಮುಖಾಂತರ ಗಿರವಿ ಇಟ್ಟಿದ್ದ. ಬೆಂಗಳೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವು ಕಡೆ ಗಿರವಿ ಇಟ್ಟಿದ್ದ ಎಂದು ತಿಳಿದುಬಂದಿದೆ.

ಪೋಲಿಸರ​ ವಿಚಾರಣೆ ವೇಳೆ ಅರೋಪಿ ಸಲ್ಮಾನ್​ ತನ್ನ ಸಹೋದರಿ ಮದುವೆಗಾಗಿ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನಂತೆ. ಸದ್ಯ, ಆರೋಪಿಗಳಿಂದ ಕಳ್ಳತನವಾದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲದಲ್ಲಿ ಚಿರತೆ ಚರ್ಮ ಮಾರುತ್ತಿದ್ದ ಇಬ್ಬರ ಬಂಧನ