‘ಪ್ರಧಾನಿ ರೈತರ ಖಾತೆಗೆ ದುಡ್ಡು ಹಾಕಿದ್ರೆ ದೊಡ್ಡದಾಗಿ ಮತಾಡ್ತಾರೆ.. ನಾನು ಲಕ್ಷ ಲಕ್ಷ ಸಾಲಮನ್ನಾ ಮಾಡಿದ್ರೂ ಯಾರು ಮಾತಾಡಲ್ಲ’
ಪ್ರಧಾನಿ ಮೋದಿ ರೈತರ ಖಾತೆಗೆ 2 ಸಾವಿರ ದುಡ್ಡು ಹಾಕಿದ್ರೆ BJPಯವರು ದೊಡ್ಡದಾಗಿ ಮತನಾಡುತ್ತಾರೆ. ಆದ್ರೆ ನಾನು ಲಕ್ಷ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೆ. ಅದರ ಬಗ್ಗೆ ಯಾರು ಮಾತಾಡಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ H.D.ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರು: ಪ್ರಧಾನಿ ಮೋದಿ ರೈತರ ಖಾತೆಗೆ 2 ಸಾವಿರ ದುಡ್ಡು ಹಾಕಿದ್ರೆ BJPಯವರು ದೊಡ್ಡದಾಗಿ ಮತನಾಡುತ್ತಾರೆ. ಆದ್ರೆ ನಾನು ಲಕ್ಷ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೆ. ಅದರ ಬಗ್ಗೆ ಯಾರು ಮಾತಾಡಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ H.D.ಕುಮಾರಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ H.D.ಕುಮಾರಸ್ವಾಮಿ ಪಾಲ್ಗೊಂಡರು. ಈ ವೇಳೆ, ಕುಮಾರಸ್ವಾಮಿ ಈ ಹೇಳಿಕೆಯನ್ನು ನೀಡಿದರು.
ಇದಲ್ಲದೆ, 600 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ B.S.ಯಡಿಯೂರಪ್ಪ ಹೇಳುತ್ತಾರೆ. ಆದರೆ, ಬಜೆಟ್‌ನಲ್ಲಿ ಇದಕ್ಕೆ ಎಷ್ಟು ಹಣವನ್ನು ಮೀಸಲಿಟ್ಟಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನೆ ಹಾಕಿದರು. ಜೊತೆಗೆ, ಯಾವ ಟೆಂಡರ್ ಕೂಡ ಕರೆದಿಲ್ಲ ಎಂದು ಸಹ ಹೇಳಿದರು.
ಸರ್ಕಾರದಲ್ಲಿ ಎಷ್ಟು ಹಣ ಇದೆ ಅಂತಾ ಗೊತ್ತು. ಆದರೂ ಈಗ ಹೋಗಿ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಹಿಂದೆ, ಶಾಸಕರಿಗೆ 25 ಕೋಟಿ ರೂಪಾಯಿ ಅನುದಾನ ಕೊಡುತ್ತೀನಿ ಅಂತಾ ಹೇಳಿದರು. ಆಮೇಲೆ, 50 ಲಕ್ಷ ಕೊಡ್ತೀನಿ ಅಂತಾರೆ. ಈ ಬಗ್ಗೆ ಬಹಳಷ್ಟು ವಿಚಾರ ಇದೆ ಚರ್ಚೆ ಮಾಡೋಕೆ ಎಂದು ಕುಮಾರಸ್ವಾಮಿ ಹೇಳಿದರು.
‘ಈ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು’ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಜೆಡಿಎಸ್ ವಿಲೀನವಿಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಸುದ್ದಿಗೋಷ್ಠಿ ವೇಳೆ ಹೇಳಿದರು. ಯಾವುದೇ ರೀತಿ ಒಪ್ಪಂದ ಇಲ್ಲ, ವಿಲೀನವೂ ಇಲ್ಲ. ಈ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು ಎಂದು ಹೇಳಿದರು.
ಬಿಎಸ್‌ವೈ, ಬಿಜೆಪಿ ಬಗ್ಗೆಯೂ ಸಾಫ್ಟ್ ಕಾರ್ನರ್ ಹೊಂದಿಲ್ಲ. ಯಾವ ಪಕ್ಷದ ಜೊತೆಯೂ ವಿಲೀನ ಮಾಡಿಕೊಳ್ಳಲ್. ಸುಮ್ಮನೇ ಈ ಸುದ್ದಿಯನ್ನು ಹಬ್ಬಿಸಿಕೊಂಡು ಹೋಗುತ್ತಿದ್ದಾರೆ. ಇನ್ನೊಬ್ಬರು JDSನಿಂದ ಒಳ ಒಪ್ಪಂದ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.
ಗೌಡರ ನಿರಾಕರಣೆಯಿಂದ ಗುಂಡೂರಾವ್ ಮುಖ್ಯಮಂತ್ರಿ ಆದರು. ಗುಂಡೂರಾವ್ಗೆ ಗೌಡರು ಸಲಹೆ ನೀಡಿದ್ರು. ಗೋಲಿಬಾರ್ ಖಂಡಿಸಿ 9 ದಿನ ಸತ್ಯಾಗ್ರಹ ಮಾಡಿದ್ರು. ಯಾರೂ ಗೌಡರಿಗೆ ಬೆಂಬಲ ಕೊಡಲಿಲ್ಲ. ಇಂತಹ ಇತಿಹಾಸ ಇರುವ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ವಿಚಾರ ಯಾಕೆ ಬಂತು? ಎಂದು ಪ್ರಶ್ನಿಸಿದರು.
2006ರಲ್ಲಿ M.P.ಪ್ರಕಾಶ್ರ ಮನೆಗೆ ಹೋಗಿ ಹೇಳಿ ಬಂದೆ. ನೀವೇ ಸಿಎಂ ಆಗಿ ಎಂದು. ಆದರೆ, ಅವರು ಈಗ ಶಾಸಕರು ನನ್ನ ನಂಬಲ್ಲ ನೀವೇ ಆಗಿ ಎಂದು ಸೂಚಿಸಿದ್ರು. ಈಗಲೂ ಪ್ರಕಾಶ್ ಪತ್ನಿ ಇದ್ದಾರೆ. ಆ ಸಂದರ್ಭದಲ್ಲಿ ಪಕ್ಷ ಉಳಿಸಲು ಬಿಜೆಪಿ ಜೊತೆ ಹೋಗಿದ್ದೆ. ಆದರೆ, ಅಧಿಕಾರಕ್ಕಾಗಿ ಎಂದೂ ರಾಜಿ ಆಗಲಾರೆ ಎಂದು ಹೇಳಿದರು.
‘ಸಂಕ್ರಾಂತಿಯ ಬಳಿಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆಗೆ ಒತ್ತು’ ದತ್ತ ಪೀಠ ಗಲಾಟೆ ವಿಚಾರ ಪ್ರಸ್ತಾಪ ಮಾಡಿದ HDK ಯುವಕರು ಪಕ್ಷದ ಇತಿಹಾಸ ತಿಳಿದುಕೊಳ್ಳಬೇಕು. ಸಂಕ್ರಾಂತಿಯ ಬಳಿಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಬಿಜೆಪಿ ಜೊತೆ ಹೋಗ್ತಾರೆ ಎಂದು ಕಾಂಗ್ರೆಸ್ನವರು ಗೌಡರ ಮನವೊಲಿಸಿ ಸರ್ಕಾರ ರಚನೆ ಮಾಡಿದ್ರು. ಆದರೆ, ಸರ್ಕಾರ ನಮ್ಮದೇ ಆಗಿದ್ರೂ ಯಾವುದೇ ನೇಮಕಾತಿಗೆ ಅವರ ಅನುಮತಿ ಬೇಕಾಗಿತ್ತು ಎಂದು ಮೈತ್ರಿ ಸರ್ಕಾರ ರಚನೆಯ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದರು.
ನಾನು ಸಿಎಂ ಆಗಿದ್ದಾಗ ನಿಮಗೆ ಅಗೌರವ ತೋರಿದ್ದಾರೆ ಎಂಬುದನ್ನು ಮನದಿಂದ ಕಿತ್ತಾಕಿ. 2023ಕ್ಕೆ ಜನತಾ ದಳ ಸರ್ಕಾರ, ಜನ ಪರ ಸರ್ಕಾರ ತರಲು ಸಿದ್ಧನಾಗಿರುವೆ. ಎಲ್ಲಾ ಜೆಡಿಎಸ್ ಘಟಕಗಳನ್ನು ವಿಸರ್ಜನೆ ಮಾಡಿ, ಪುನರ್ ನೇಮಕ ಮಾಡಲು ಸಿದ್ಧನಿದ್ದೇನೆ. 8 ಜನರ ಕೋರ್ ಕಮಿಟಿ ರಚನೆ ಮಾಡಲು ಸಿದ್ಧನಿದ್ದೇನೆ. ಪಕ್ಷದ ತೀರ್ಮಾನ, ಜವಾಬ್ದಾರಿ ಎಲ್ಲರೂ ಹೊರಲು ಸಿದ್ಧರಾಗಿ ಎಂದು ಹೇಳಿದರು.
ಒಂದೊಂದು ಡಿವಿಜನ್ಗೂ ಒಂದು ಟೀಂ ಇರುತ್ತೆ. ಚುನಾವಣೆ ಬಂದಾಗ ಯಾವ ಸೆಕ್ಯೂಲರ್ ಫೋರ್ಸ್ ಕೂಡ ನಡೆಯಲ್ಲ. ಯಾವ ಜಾತಿಯವರು ಹೆಚ್ಚಿದ್ದಾರೋ ಅವರಿಗೆ ಟಿಕೆಟ್ ನೀಡುವ ಪರಂಪರೆ ಎಲ್ಲಾ ಪಕ್ಷಗಳಲ್ಲಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಆಗಿದ್ದ ಮಾತ್ರಕ್ಕೆ ಒಕ್ಕಲಿಗರ ಮತ ಅವರಿಗೆ ಬರುತ್ತಾ? ಡಿಕೆಶಿ ಸಿಎಂ ಆಗುವ ಕನಸು ಕಾಣುತಿದ್ದಾರೆ. ಇತ್ತ, ಮೊನ್ನೆ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡಿದ್ದಾರೆ ಮುಂದಿನ ಸಿಎಂ ನಾನೇ ಎಂದು ಅಂತಾ ಇಬ್ಬರೂ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ನಾವು ಜಮೀನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದೇವೆ.. ನಮಗೆ ಯಾವಾಗ ಕೆಲಸ ಕೊಡುತ್ತೀರಾ? ಸಚಿವ ಶೆಟ್ಟರ್ಗೆ ಯುವಕ ತರಾಟೆ
Published On - 4:25 pm, Thu, 7 January 21