ಟ್ರಂಪ್ ವಕೀಲನಿಗೆ ಪಜೀತಿ ತಂದಿಟ್ಟ ಹೇರ್ ಡೈ; ಕೆನ್ನೆಮೇಲೆ ಇಳಿದು ಬಂತು ಡೈ-ಮಿಶ್ರಿತ ಬೆವರು | Dark streaks on Trump Lawyer’s Face during a press conference
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ ಇಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಿಸಬೇಕಾಯಿತು. ಅದಕ್ಕೆ ಕಾರಣ ಅವರ ತಲೆಯ ಬೆವರಿನೊಂದಿಗೆ ಬೆರೆತ ಹೇರ್ ಡೈ ಮುಖದ ಮೇಲೆ ಇಳಿದು ಸೃಷ್ಟಿಸಿದ ಅವಾಂತರ! ಇಂದು ಡೊನಾಲ್ಡ್ ಟ್ರಂಪ್ ಅವರ ಕಾನೂನು ಸಲಹೆಗಾರರ ತಂಡ ಸುದ್ದಿಗೋಷ್ಠಿಯೊದನ್ನು ಕರೆದಿತ್ತು. ಸದರಿ ಗೋಷ್ಠಿಯಲ್ಲಿ ಮಾತನಾಡಿದ ವಕೀಲ ರೂಡಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಮತ್ತು ಎಣಿಕೆಯಲ್ಲಿ ವಂಚನೆ […]

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ ಇಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಿಸಬೇಕಾಯಿತು. ಅದಕ್ಕೆ ಕಾರಣ ಅವರ ತಲೆಯ ಬೆವರಿನೊಂದಿಗೆ ಬೆರೆತ ಹೇರ್ ಡೈ ಮುಖದ ಮೇಲೆ ಇಳಿದು ಸೃಷ್ಟಿಸಿದ ಅವಾಂತರ!
ಇಂದು ಡೊನಾಲ್ಡ್ ಟ್ರಂಪ್
ಅವರ ಕಾನೂನು ಸಲಹೆಗಾರರ ತಂಡ ಸುದ್ದಿಗೋಷ್ಠಿಯೊದನ್ನು ಕರೆದಿತ್ತು. ಸದರಿ ಗೋಷ್ಠಿಯಲ್ಲಿ ಮಾತನಾಡಿದ ವಕೀಲ ರೂಡಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಮತ್ತು ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಿದ್ದರು. ಆದರೆ ಸ್ವಲ್ಪ ಸಮಯದ ನಂತರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡವರ ಗಮನವೆಲ್ಲ ವಕೀಲರ ಮಾತಿನ ಬದಲು ಕೆನ್ನೆಯ ಮೇಲೆಯೇ ನೆಟ್ಟುಬಿಟ್ಟಿತ್ತು. ಯಾಕೆ ಗೊತ್ತಾ?
ರೂಡಿ, ಪ್ರೆಸ್ ಕಾನ್ಫರೆನ್ಸ್ಗೆ ಆಗಮಿಸುವ ಸ್ವಲ್ಪ ಮೊದಲು ಅದಾಗಲೇ ಬೋಳಾಗುತ್ತಿರುವ ತಮ್ಮ ತಲೆಗೆ ಹೇರ್ ಡೈ ಮಾಡಿಸಿಕೊಂಡಿದ್ದರೆಂದು ಕಾಣುತ್ತದೆ. ಗೋಷ್ಠಿ ನಡೆಯುತ್ತಿದ್ದಾಗ ಅವರು ಅದ್ಯಾವ ಒತ್ತಡದಲ್ಲಿದ್ದರೋ? ತಲೆಯ ಮೇಲೆ ಜಿನುಗುತ್ತಿದ್ದ ಬೆವರು ಕಪ್ಪು ಹೇರ್ ಡೈನೊಂದಿಗೆ ಬೆರೆತು ಕೆನ್ನೆಗಳ ಮೇಲೆ ಇಳಿದು ಅವರ ಬೆಳ್ಳಗಿನ ಮುಖವನ್ನು ಕಪ್ಪು ಮಾಡಲಾರಂಭಿಸಿತ್ತು. ಅದನ್ನು ರೂಡಿ ಕೂಡಲೇ ಗಮನಿಸಿದರಾದರೂ ಪ್ರೆಸ್ಸರನ್ನು ಅರ್ಧಕ್ಕೆ ನಿಲ್ಲಿಸ ಹೋಗುವಂತಿರಲಿಲ್ಲವಲ್ಲ?
ತಮ್ಮ ಹ್ಯಾಂಕೀಯಿಂದ ಅವರು ಪದೇಪದೆ ಮುಖ ಒರೆಸಿಕೊಳ್ಳುತ್ತಿದ್ದಿದ್ದು ವೈರಲ್ ಅಗಿಬಿಟ್ಟಿದೆ ಮತ್ತು ಬಗೆಬಗೆಯ ಮೀಮ್ಸ್ಗಳೂ ಸಹ ಸೃಷ್ಟಿಯಾಗಿವೆ.




