ತಮಾಷೆ ಮತ್ತು ನಿಂದನೆ ನಡುವಿನ ಗೆರೆ ದಾಟಿದ ‘ಅಪಹಾಸ್ಯ’ ಕಲಾವಿದ | Stand-up comedian Kunal Kamra again mocks judiciary system
ಇತ್ತೀಚೆಗಷ್ಟೇ ನ್ಯಾಯಾಂಗ ನಿಂದನೆ ಆರೋಪಕ್ಕೆ ಸಿಕ್ಕು ಸುದ್ದಿಯಲ್ಲಿದ್ದ ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಮತ್ತೆ ವಿವಾದಕ್ಕೀಡಾಗಿದ್ದಾರೆ. ಈ ಬಾರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೊಬ್ಬರ ಹೆಸರನ್ನು ಉಲ್ಲೇಖಿಸಿ ಅಸಭ್ಯ ರೀತಿಯಲ್ಲಿ ಟ್ವೀಟ್ ಮಾಡಿರುವ ಅವರು ಮತ್ತೊಮ್ಮೆ ನ್ಯಾಯಾಂಗ ನಿಂದನೆಯ ಆರೋಪ ಎದುರಿಸುವಂತಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿರುವ ಮನವಿಗೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸಮ್ಮತಿ ಸೂಚಿಸಿದ್ದಾರೆ. ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಎರಡು ಬೆರಳುಗಳ ಚಿತ್ರವನ್ನು ಟ್ವೀಟ್ ಮಾಡಿರುವ ಕಮ್ರಾ ಈ ಎರಡು ಬೆರಳುಗಳಲ್ಲಿ […]

ಇತ್ತೀಚೆಗಷ್ಟೇ ನ್ಯಾಯಾಂಗ ನಿಂದನೆ ಆರೋಪಕ್ಕೆ ಸಿಕ್ಕು ಸುದ್ದಿಯಲ್ಲಿದ್ದ ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಮತ್ತೆ ವಿವಾದಕ್ಕೀಡಾಗಿದ್ದಾರೆ. ಈ ಬಾರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೊಬ್ಬರ ಹೆಸರನ್ನು ಉಲ್ಲೇಖಿಸಿ ಅಸಭ್ಯ ರೀತಿಯಲ್ಲಿ ಟ್ವೀಟ್ ಮಾಡಿರುವ ಅವರು ಮತ್ತೊಮ್ಮೆ ನ್ಯಾಯಾಂಗ ನಿಂದನೆಯ ಆರೋಪ ಎದುರಿಸುವಂತಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿರುವ ಮನವಿಗೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸಮ್ಮತಿ ಸೂಚಿಸಿದ್ದಾರೆ.
ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಎರಡು ಬೆರಳುಗಳ ಚಿತ್ರವನ್ನು ಟ್ವೀಟ್ ಮಾಡಿರುವ ಕಮ್ರಾ ಈ ಎರಡು ಬೆರಳುಗಳಲ್ಲಿ ಮಧ್ಯದ ಬೆರಳನ್ನು ‘ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಅವರಿಗೆ ತೋರಿಸುತ್ತಿದ್ದೇನೆ,’ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಕಮ್ರಾ ಟ್ವೀಟ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಲಹಾಬಾದ್ ಹೈಕೋರ್ಟ್ ವಕೀಲ ಅನುಜ್ ಸಿಂಗ್ ವೇಣುಗೋಪಾಲ್ ಅವರಿಗೆ ಸಲ್ಲಿಸಿರುವ ಮನವಿ ಪುರಸ್ಕೃತವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಟಾರ್ನಿ ಜನರಲ್, ಕುನಾಲ್ ಕಮ್ರಾ ಮಾಡಿರುವ ಟ್ವೀಟ್ ಹೇಸಿಗೆ ಹುಟ್ಟಿಸುವಂಥಾಗಿದ್ದು, ಅದು ಭಾರತದ ಸರ್ವೋಚ್ಛ ನ್ಯಾಯಾಲಯವನ್ನೇ ಅವಮಾನಕ್ಕೀಡು ಮಾಡಿದಂತಿದೆ. ಕುನಾಲ್ ಕಮ್ರಾ ತಮಾಷೆ ಮತ್ತು ನಿಂದನೆಯ ನಡುವಿನ ಸೀಮೆ ದಾಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಕುನಾಲ್ ಕಮ್ರಾ ಮೂರ್ನಾಲ್ಕು ಬಾರಿ ನ್ಯಾಯಾಲಯವನ್ನು ಅವಮಾನಿಸುವ ಅರ್ಥದಲ್ಲಿ ಟ್ವೀಟ್ಗಳನ್ನು ಮಾಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದರು. ಆದರೆ ತಪ್ಪು ತಿದ್ದಿಕೊಳ್ಳದ ಕಮ್ರಾ ಅವರ ಪ್ರವೃತ್ತಿ ಮತ್ತು ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನು ಪದೇಪದೆ ಅಪಹಾಸ್ಯ ಮಾಡುವ ಚಾಳಿಯನ್ನು ಈ ಬಾರಿ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆಯೆನ್ನಲಾಗುತ್ತಿದೆ.




