ಭರ್ಜರಿ ಪ್ರಚಾರದ ನಂತರ ಭೋಜನ ವಿರಾಮ: ‘ಸಾಮ್ರಾಟ್​’ ಮನೆಯಲ್ಲಿ ಅದ್ದೂರಿ ಔತಣ | Actor Darshan, Amulya lunch at Ashok home

  • TV9 Web Team
  • Published On - 16:39 PM, 30 Oct 2020
ಭರ್ಜರಿ ಪ್ರಚಾರದ ನಂತರ ಭೋಜನ ವಿರಾಮ: ‘ಸಾಮ್ರಾಟ್​’ ಮನೆಯಲ್ಲಿ ಅದ್ದೂರಿ ಔತಣ | Actor Darshan, Amulya lunch at Ashok home

ಬೆಂಗಳೂರು: ಆರ್.ಆರ್.ನಗರದಲ್ಲಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್​, ನಟಿ ಅಮೂಲ್ಯ ಹಾಗೂ ಪಕ್ಷದ ಇತರೆ ರಾಜಕೀಯ ನಾಯಕರಿಗೆ ಕಂದಾಯ ಸಚಿವ ಆರ್ ಅಶೋಕ್ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಾಲಹಳ್ಳಿ ವಿಲೇಜ್ ಸರ್ಕಲ್​ನಲ್ಲಿ ನಟ ದರ್ಶನ್ ಸಾರ್ವಜನಿಕ ಭಾಷಣ ಮುಕ್ತಾಯವಾದ ಬಳಿಕ ಒಂದು ಗಂಟೆಗಳ ಕಾಲ ಭೋಜನ ವಿಶ್ರಾಂತಿ ಪಡೆಯಲಾಗಿದೆ.

ಸದ್ಯ, ಸಚಿವ ಅಶೋಕ್​ ಮನೆಗೆ ತೆರಳಿದ ನಾಯಕರು ಹಾಗೂ ನಟರಿಗೆ ಭೂರಿಭೋಜನವನ್ನೇ ಏರ್ಪಡಿಸಲಾಗಿತ್ತು. ಅಪ್ಪಟ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಪ್ರಚಾರದಿಂದ ದಣಿವರಿದಿದ್ದ ದರ್ಶನ್​ ಮತ್ತು ಎಲ್ಲರಿಗೂ ಚಪಾತಿ- ಪಲ್ಯ, ಮುದ್ದೆ- ಸಾರು ಮತ್ತು ಈರುಳ್ಳಿ ಪಕೋಡಾವನ್ನು ಉಣಬಡಿಸಲಾಯಿತು.

ಭೂರಿ ಭೋಜನ ಸವಿದ ನಟ ದರ್ಶನ್​ ಕೊಂಚ ವಿಶ್ರಾಂತಿ ಪಡೆದ ಬಳಿಕ ಮತ್ತೆ ಪ್ರಚಾರಕ್ಕೆ ಇಳಿದರು. ಇಂದು ಸಂಜೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಪ್ರಚಾರಕ್ಕೆ ಎಂಟ್ರಿ ಕೊಡಲಿದ್ದಾರೆ. ಜಾಲಹಳ್ಳಿ ವಿಲೇಜ್ ಭಾಗದಲ್ಲಿ ಪ್ರಚಾರ ಮಾಡಲಿರೋ ಬೊಮ್ಮಾಯಿ ಮುನಿರತ್ನ ಪರ ಮತಬೇಟೆಯಲ್ಲಿ ಭಾಗಿಯಾಗಲಿದ್ದಾರೆ.