ಮನೆಯಲ್ಲೇ ತಾಯಿ ಶವದ ಜೊತೆ 5 ದಿನ ಕಳೆದ ಮಗಳು! ಎಲ್ಲಿ?

|

Updated on: May 19, 2020 | 4:54 PM

ಶಿವಮೊಗ್ಗ: ತಾಯಿ ಶವದ ಜೊತೆ 5 ದಿನ ಮನೆಯಲ್ಲೇ ಮಗಳು ಕಳೆದಿರುವ ಘಟನೆ ನಗರದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ 5 ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದರು. ಶಾಂಭವಿ ಎಂಬುವವರು ತಾಯಿ ಶವದ ಜತೆಯೇ 5 ದಿನ ಇದ್ದಾರೆ. ಸ್ಥಳೀಯರು ಶಾಂಭವಿಯನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ. ಹೆಚ್ಚುದಿನ ಆದ್ದರಿಂದ ಶವ ಕೊಳೆತು ವಾಸನೆ ಬರುತ್ತಿತ್ತು. ಹಾಗಾಗಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು […]

ಮನೆಯಲ್ಲೇ ತಾಯಿ ಶವದ ಜೊತೆ 5 ದಿನ ಕಳೆದ ಮಗಳು! ಎಲ್ಲಿ?
Follow us on

ಶಿವಮೊಗ್ಗ: ತಾಯಿ ಶವದ ಜೊತೆ 5 ದಿನ ಮನೆಯಲ್ಲೇ ಮಗಳು ಕಳೆದಿರುವ ಘಟನೆ ನಗರದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ 5 ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದರು.

ಶಾಂಭವಿ ಎಂಬುವವರು ತಾಯಿ ಶವದ ಜತೆಯೇ 5 ದಿನ ಇದ್ದಾರೆ. ಸ್ಥಳೀಯರು ಶಾಂಭವಿಯನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಿದ್ದಾರೆ. ಹೆಚ್ಚುದಿನ ಆದ್ದರಿಂದ ಶವ ಕೊಳೆತು ವಾಸನೆ ಬರುತ್ತಿತ್ತು. ಹಾಗಾಗಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.