25 ವರ್ಷದ ನಂತರವೂ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ‘ಓಂ’ಕಾರವೇ ಇದೆ!

ಸಾಧು ಶ್ರೀನಾಥ್​

|

Updated on:May 19, 2020 | 6:19 PM

‘ಓಂ’ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ. ಲಾಂಗು.. ರೌಡಿಸಂ ಸಿನಿಮಾಗಳಿಗೆ ಮುಹೂರ್ತವಿಟ್ಟ ಚಿತ್ರ. ಅಷ್ಟೇ ಯಾಕೆ ಶಿವಣ್ಣ ಹಾಗೂ ಉಪೇಂದ್ರ ಕರಿಯರ್​ಗೆ ಹೊಸ ತಿರುವು ಕೊಟ್ಟ ಸಿನಿಮಾ ಇದೇ ‘ಓಂ’. ಈ ಸಿನಿಮಾ ಬಗ್ಗೆ ಇಷ್ಟೆಲ್ಲ ಹೇಳ್ತಿರೋದಕ್ಕೆ ಒಂದು ಕಾರಣವಿದೆ. ಮೇ 19ರಲ್ಲಿ ತೆರೆಕಂಡಿದ್ದ ಓಂ ಇಂದಿಗೆ ಬರೋಬ್ಬರಿ 25 ವರ್ಷಗಳನ್ನ ಪೂರೈಸಿದೆ. ಈ ಸಂದರ್ಭದಲ್ಲಿ ಓಂ ಸಿನಿಮಾದ ಬಗ್ಗೆ ಶಿವಣ್ಣ ಬಿಚ್ಚಿಟ್ಟ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ. ವೆಡ್ಡಿಂಗ್ ಆ್ಯನಿವರ್ಸರಿ ದಿನವೇ ಓಂಗೆ 25 […]

25 ವರ್ಷದ ನಂತರವೂ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ‘ಓಂ’ಕಾರವೇ ಇದೆ!
Follow us

‘ಓಂ’ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ. ಲಾಂಗು.. ರೌಡಿಸಂ ಸಿನಿಮಾಗಳಿಗೆ ಮುಹೂರ್ತವಿಟ್ಟ ಚಿತ್ರ. ಅಷ್ಟೇ ಯಾಕೆ ಶಿವಣ್ಣ ಹಾಗೂ ಉಪೇಂದ್ರ ಕರಿಯರ್​ಗೆ ಹೊಸ ತಿರುವು ಕೊಟ್ಟ ಸಿನಿಮಾ ಇದೇ ‘ಓಂ’. ಈ ಸಿನಿಮಾ ಬಗ್ಗೆ ಇಷ್ಟೆಲ್ಲ ಹೇಳ್ತಿರೋದಕ್ಕೆ ಒಂದು ಕಾರಣವಿದೆ. ಮೇ 19ರಲ್ಲಿ ತೆರೆಕಂಡಿದ್ದ ಓಂ ಇಂದಿಗೆ ಬರೋಬ್ಬರಿ 25 ವರ್ಷಗಳನ್ನ ಪೂರೈಸಿದೆ. ಈ ಸಂದರ್ಭದಲ್ಲಿ ಓಂ ಸಿನಿಮಾದ ಬಗ್ಗೆ ಶಿವಣ್ಣ ಬಿಚ್ಚಿಟ್ಟ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ವೆಡ್ಡಿಂಗ್ ಆ್ಯನಿವರ್ಸರಿ ದಿನವೇ ಓಂಗೆ 25 ವರ್ಷ ಓಂ ಸ್ಯಾಂಡಲ್​ವುಡ್​ನ ಎವರ್​ಗ್ರೀನ್ ಸಿನಿಮಾ. ಇನ್ನೂ 25 ವರ್ಷ ಆದ್ರೂ ಜನ ಮಾನಸದಿಂದ ಮರೆಯಾಗೋದಿಲ್ಲ. ಯಾಕಂದ್ರೆ, ಇದು ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ ಮಾಡಿದ್ದ ಸಿನಿಮಾ. ವಿಶೇಷ ಅಂದ್ರೆ ಶಿವಣ್ಣನ ವಿವಾಹ ವಾರ್ಷಿಕೋತ್ಸವದ ದಿನವೇ ಓಂ ಸಿನಿಮಾ ಬಿಡುಗಡೆಯಾಗಿತ್ತು. ಶಿವಣ್ಣ ಅಂದು 9ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದರು. ಇಂದು ಕೂಡ ಓಂ 25 ವರ್ಷದ ಸಂಭ್ರಮದಲ್ಲಿ ಶಿವಣ್ಣ 34ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ.

https://www.facebook.com/Tv9Kannada/videos/250126562972332/

ಓಂ ಟೈಟಲ್​​ಗೆ ಅಣ್ಣಾವ್ರ ಓಂಕಾರ ಉಪೇಂದ್ರ ನಿರ್ದೇಶಿಸಿದ ಶ್ ಸಿನಿಮಾ ನೋಡಲು ಶಿವಣ್ಣನ ಹೋಗಿದ್ರು. ಆ ವೇಳೆ ಉಪ್ಪಿ ಪರಿಚಯ ಆಗಿತ್ತು. ಹೀಗೊಂದು ದಿನ ಉಪೇಂದ್ರ, ಶಿವಣ್ಣನಿಗೆ ಓಂ ಕಥೆ ಒಪ್ಪಿಸಿದ್ರು. ಬಳಿಕ ಅಣ್ಣಾವ್ರು ಕಥೆ ಕೇಳಿದ್ರು. ರೌಡಿಸಂ ಕಥೆಯಾಗಿದ್ರೂ ಡಾ.ರಾಜ್​ಕುಮಾರ್ ಅವ್ರಿಗೆ ಇದ್ರೊಂದು ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸಿನಿಮಾ ಮಾಡೋಣ ಅಂತ ಗ್ರೀನ್ ಸಿಗ್ನಲ್ ಕೊಟ್ರು. ಆಗ್ಲೇ ಅಣ್ಣಾವ್ರು ಓಂ ಅಂತ ಕೈಯಲ್ಲಿ ಬರೆದರು. ಅದೇ ಟೈಟಲ್ ಆಯ್ತು.

https://www.facebook.com/Tv9Kannada/videos/301170537541946/

ತಲೆ ಕೂದಲು ಮುಟ್ಟಿದ್ದು ಉಪೇಂದ್ರ ಮಾತ್ರ ಶಿವಣ್ಣನಿಗೆ ಯಾರಾದ್ರೂ ತಲೆ ಮೇಲೆ ಕೈಯಾಡಿಸಿದ್ರೆ ಕೋಪ ಬರುತ್ತೆ. ಹಾಗಾಗಿ ಯಾರೂ ಶಿವಣ್ಣ ತಲೆ ಮೇಲೆ ಕೈ ಆಡಿಸೋಕೆ ಹೋಗೋದಿಲ್ಲ. ಆದ್ರೆ ಓಂ ಸಿನಿಮಾ ಮಾಡುವಾಗ ಉಪೇಂದ್ರ ಅವರಿಗೆ ಮಾತ್ರ ಈ ಅಧಿಕಾರವಿತ್ತು. ಶಿವಣ್ಣ ತಮ್ಮ ತಲೆಯನ್ನ ಉಪ್ಪಿಗೆ ಕೊಟ್ಟು ಬಿಟ್ಟಿದ್ದರು.

ಓಂ ಸ್ಟೈಲ್​ನಲ್ಲೇ ಸಿನಿಮಾ ನೋಡಲು ಬಂದ ಫ್ಯಾನ್ಸ್ ಓಂ ಸಿನಿಮಾ ಸೆಟ್ಟೇರಿ, ಮೇ 19, 1995ರಂದು ಬಿಡುಗಡೆ ಆಯ್ತು. ಶಿವಣ್ಣ ಕೂಡ ಫಸ್ಟ್ ಡೇ ಫಸ್ಟ್ ಶೋ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ರು. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನ ಮಾಡುತ್ತಿದ್ದ ಶಿವಣ್ಣ ಪಕ್ಕಾ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಿದ್ದರು. ಆದ್ರೆ ಶಿವಣ್ಣ ಬೀಡಿ ಸೇದುವ ಶೈಲಿ.. ಲಾಂಗ್ ಹಿಡಿಯುವ ಸ್ಟೈಲ್.. ಇವೆಲ್ಲವೂ ಇಷ್ಟ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶಿವಣ್ಣ ಹಾಕಿದ ಜೀನ್ಸ್ ಹಾಗೂ ಶರ್ಟ್ ಅನ್ನೇ ತೊಟ್ಟು ಸಿನಿಮಾ ನೋಡೋಕೆ ಅಭಿಮಾನಿಗಳು ಬಂದಿದ್ರು.

ನೈಜತೆ ತುಂಬಿದ ಸಿನಿಮಾ ಈ ಸಿನಿಮಾದ ಸಾಕಷ್ಟು ದೃಶ್ಯಗಳನ್ನ ನೈಜವಾಗೇ ಸೆರೆಹಿಡಿಯಲಾಗಿದೆ. ತಂಗಿಯಂದಿಯನ್ನ ನೋಡೋಕೆ ದೇವಸ್ಥಾನಕ್ಕೆ ಹೋಗುವ ದೃಶ್ಯವನ್ನ ತುಂಬಿದ ಜನರ ಮಧ್ಯೆನೇ ಚಿತ್ರೀಕರಿಸಲಾಗಿತ್ತು. ನಟಿ ಪ್ರೇಮಾಗೆ ಹ್ಯಾಪಿ ಬರ್ತ್​ಡೇ ಹೇಳುವ ದೃಶ್ಯವನ್ನೂ ಅಷ್ಟೇ ಸುಮ್ಮನೆ ಶಿವಣ್ಣ ಹೇಳಿದನ್ನೇ ಚಿತ್ರೀಸಿಕೊಳ್ಳಲಾಗಿತ್ತು. ಹೀಗೆ ಸಾಕಷ್ಟು ದೃಶ್ಯಗಳನ್ನ ಪೂರ್ವ ತಯಾರಿ ಮಾಡಿಕೊಂಡು ಮಾಡಿದ್ದಲ್ಲ. ಸಂದರ್ಭಗಳಿಗೆ ಅನುಗುಣವಾಗಿ ಚಿತ್ರೀಕರಿಸಲಾಗಿದೆ.

ಓಂ ಒಂದಲ್ಲ ಎರಡಲ್ಲ ಸಾಕಷ್ಟು ಬಾರಿ ರಿಲೀಸ್ ಆಗಿದೆ. ಬಿಡುಗಡೆ ಆದಾಗ್ಲೆಲ್ಲ ಬಾಕ್ಸಾಫೀಸ್ ಅನ್ನ ಚಿಂದಿ ಉಡಾಯಿಸಿದೆ. ಓಂ ಗಳಿಕಯೆಲ್ಲಷ್ಟೇ ಅಲ್ಲ ಬಿಡುಗಡೆಯಲ್ಲೂ ದಾಖಲೆ ಬರೆದಿದೆ. ಇದೇ ಕಾರಣಕ್ಕೆ 25 ವರ್ಷಗಳ ಬಳಿಕವೂ ಸಿನಿಮಾ ಓಂ ಸಿನಿಪ್ರೇಮಿಗಳ ಜನ ಮಾನಸದಲ್ಲಿದೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada