JR NTR​ ಜೊತೆ KGF ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ

ಸಾಧು ಶ್ರೀನಾಥ್​

|

Updated on: May 20, 2020 | 3:22 PM

ಬೆಂಗಳೂರು: ಟಾಲಿವುಡ್​ನ ಯಂಗ್ ಟೈಗರ್ ಜ್ಯೂನಿಯರ್ ಎನ್​ಟಿಆರ್​ಗೆ ಇಂದು ಜನ್ಮದಿನದ ಸಂಭ್ರಮ. ಸದ್ಯ ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಚಿರಂಜೀವಿ ಪುತ್ರ ರಾಮ್​ ಚರಣ್ ಜೊತೆ RRR ಸಿನಿಮಾದಲ್ಲಿ ಜ್ಯೂ.ಎನ್​ಟಿಆರ್​ ಬ್ಯುಸಿಯಾಗಿದ್ದಾರೆ. ಎಲ್ಲಾ ಸರಿಯಾಗಿದ್ದಿದ್ದರೆ ಜ್ಯೂ.ಎನ್​ಟಿಆರ್ ಹುಟ್ಟುಹಬ್ಬದ ಪ್ರಯುಕ್ತ RRRನ ವಿಡಿಯೋ ತುಣುಕು ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದರು. We don't want to release something just for the sake of it and we promise that […]

JR NTR​ ಜೊತೆ KGF ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ
ಪ್ರಶಾಂತ್​​ ನೀಲ್​- ಜೂ.ಎನ್​ಟಿಆರ್​

ಬೆಂಗಳೂರು: ಟಾಲಿವುಡ್​ನ ಯಂಗ್ ಟೈಗರ್ ಜ್ಯೂನಿಯರ್ ಎನ್​ಟಿಆರ್​ಗೆ ಇಂದು ಜನ್ಮದಿನದ ಸಂಭ್ರಮ. ಸದ್ಯ ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಚಿರಂಜೀವಿ ಪುತ್ರ ರಾಮ್​ ಚರಣ್ ಜೊತೆ RRR ಸಿನಿಮಾದಲ್ಲಿ ಜ್ಯೂ.ಎನ್​ಟಿಆರ್​ ಬ್ಯುಸಿಯಾಗಿದ್ದಾರೆ. ಎಲ್ಲಾ ಸರಿಯಾಗಿದ್ದಿದ್ದರೆ ಜ್ಯೂ.ಎನ್​ಟಿಆರ್ ಹುಟ್ಟುಹಬ್ಬದ ಪ್ರಯುಕ್ತ RRRನ ವಿಡಿಯೋ ತುಣುಕು ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದರು.

RRR ಸಿನಿಮಾದ ನಂತರ ಜ್ಯೂ.ಎನ್​ಟಿಆರ್ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಇದೆ. ಈ ಮಧ್ಯೆ ಕೆಜಿಎಫ್​ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು, ಜ್ಯೂ. NTR​ ಜನ್ಮದಿನದಂದು ಅಭಿಮಾನಿಗಳಿಗೆ ಒಂದು ಗಿಫ್ಟ್ ನೀಡಿದ್ದಾರೆ. ತನ್ನ ಮುಂದಿನ ಸಿನಿಮಾಗೆ ಜ್ಯೂನಿಯರ್ ಎನ್​ಟಿಆರ್ ಹೀರೋ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಹೌದು, ಬಳಹ ದಿನಗಳಿಂದಲೂ JR NTR ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದೀಗ NTR ಹುಟ್ಟುಹಬ್ಬದ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ಜ್ಯೂನಿಯರ್ ಎನ್​ಟಿಆರ್ ಅವರನ್ನು ನ್ಯೂಕ್ಲಿಯರ್ ಪ್ಲಾಂಟ್ ಎಂದು ಕರೆದು, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಸಿನಿಮಾದ ಒನ್​ಲೈನ್ ಸ್ಟೋರಿ ಫೈನಲ್ ಆಗಿದ್ದು, KGF 2 ಚಿತ್ರ ತೆರೆಕಂಡ ನಂತರ ಸ್ಕ್ರಿಪ್ಟ್ ಕೆಲಸ ಆರಂಭವಾಗುತ್ತಂತೆ. ಅದಲ್ಲದೆ KGF 2 ಗಿಂತ ದೊಡ್ಡ ಬಜೆಟ್​ನಲ್ಲಿ ಬಹುಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂದೂ ಕೇಳಿ ಬರುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada