‘ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೀವಿ ಪ್ರತಿಭಟನೆ ಶಾಂತಿಯುತವಾಗಿ ನಡೆಸಿ’ ಡಿಸಿಪಿ ಎಚ್ಚರಿಕೆ
ಮೈಸೂರು: ಕೃಷಿ ಕಾಯಿದೆ ವಿರುದ್ಧ ಮಣ್ಣಿನ ಮಕ್ಕಳ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಬಂದ್ ನಡುವೆಯೂ ರಸ್ತೆಗಿಳಿದ ಆಟೋಗಳನ್ನ ಪ್ರತಿಭಟನಾಕಾರರು ತಡೆಯಲು ಮುಂದಾಗಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ವಾಹನ ಸಂಚಾರ ಹಿನ್ನೆಲೆಯಲ್ಲಿ ರೈತರು ಆಟೋ ಚಾಲಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ವಾಹನಗಳನ್ನ ಬಿಟ್ಟಿದ್ದೀರ. ಪೊಲೀಸರಿಗೆ ಕಾಮನ್‌ಸೆನ್ಸ್ ಇಲ್ವ ಎಂದು ರೈತ ಮುಖಂಡ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಆಗಮಿಸಿದ ಡಿಸಿಪಿಯಿಂದ ರೈತ ಮುಖಂಡನಿಗೆ ಕ್ಲಾಸ್. ಮೈಕ್ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ಪ್ರತಿಭಟನೆಗೆ ಅವಕಾಶ […]

ಮೈಸೂರು: ಕೃಷಿ ಕಾಯಿದೆ ವಿರುದ್ಧ ಮಣ್ಣಿನ ಮಕ್ಕಳ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಬಂದ್ ನಡುವೆಯೂ ರಸ್ತೆಗಿಳಿದ ಆಟೋಗಳನ್ನ ಪ್ರತಿಭಟನಾಕಾರರು ತಡೆಯಲು ಮುಂದಾಗಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ವಾಹನ ಸಂಚಾರ ಹಿನ್ನೆಲೆಯಲ್ಲಿ ರೈತರು ಆಟೋ ಚಾಲಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ವಾಹನಗಳನ್ನ ಬಿಟ್ಟಿದ್ದೀರ. ಪೊಲೀಸರಿಗೆ ಕಾಮನ್‌ಸೆನ್ಸ್ ಇಲ್ವ ಎಂದು ರೈತ ಮುಖಂಡ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೂಡಲೇ ಆಗಮಿಸಿದ ಡಿಸಿಪಿಯಿಂದ ರೈತ ಮುಖಂಡನಿಗೆ ಕ್ಲಾಸ್. ಮೈಕ್ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೀವಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ರೈತ ಮುಖಂಡರಿಗೆ ಡಿಸಿಪಿ ಡಾ.ಪ್ರಕಾಶ್‌ಗೌಡ ಎಚ್ಚರಿಕೆ ನೀಡಿದ್ದಾರೆ.

Published On - 8:31 am, Mon, 28 September 20




