ದೇವಸ್ಥಾನ ಮುಚ್ಚಿದ್ರೂ ಬಾಗಿಲ ಬಳಿಯೇ ಭಕ್ತರ ಪೂಜೆ.. ಏಕೆ?

ಕಲಬುರಗಿ: ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಶರಣಬಸವೇಶ್ವರ ದೇಗುಲ ಬಳಿ ಜನಜಂಗುಳಿ ಕಂಡು ಬಂದಿದೆ. ಜನ ಅಂತರವನ್ನು ಮರೆತು ದೇಗುಲದ ಮುಂದೆ ಜಮಾಹಿಸಿದ್ದಾರೆ. ಇಂದು ಶ್ರಾವಣ ಸೋಮವಾರ ಹೀಗಾಗಿ ದೇವರ ದರ್ಶನ ಪಡೆಯಲು ನೂರಾರು ಜನ ಸೇರಿದ್ದಾರೆ. ಆದರೆ ಕೊರೊನಾ ಭೀತಿಯಿಂದಾಗಿ ಇನ್ನು ದೇಗುಲ ಮುಚ್ಚಿದೆ. ಆದರೂ ಇಲ್ಲಿನ ಜನ ಬಾಗಿಲು ಬಳಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಕೊರೊನಾ ಭೀತಿ ನಡುವೆಯೇ ಸಂಪೂರ್ಣ ನಿರ್ಲಕ್ಷ್ಯವಹಿಸುತ್ತಿದ್ದಾರೆ. ದೇವಾಲಯದ ಬಾಗಿಲ ಬಳಿ ನೂರಾರು ಜನರು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. […]

ದೇವಸ್ಥಾನ ಮುಚ್ಚಿದ್ರೂ ಬಾಗಿಲ ಬಳಿಯೇ ಭಕ್ತರ ಪೂಜೆ.. ಏಕೆ?
ಆಯೇಷಾ ಬಾನು

Updated on: Jul 20, 2020 | 7:37 AM

ಕಲಬುರಗಿ: ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಶರಣಬಸವೇಶ್ವರ ದೇಗುಲ ಬಳಿ ಜನಜಂಗುಳಿ ಕಂಡು ಬಂದಿದೆ. ಜನ ಅಂತರವನ್ನು ಮರೆತು ದೇಗುಲದ ಮುಂದೆ ಜಮಾಹಿಸಿದ್ದಾರೆ.

ಇಂದು ಶ್ರಾವಣ ಸೋಮವಾರ ಹೀಗಾಗಿ ದೇವರ ದರ್ಶನ ಪಡೆಯಲು ನೂರಾರು ಜನ ಸೇರಿದ್ದಾರೆ. ಆದರೆ ಕೊರೊನಾ ಭೀತಿಯಿಂದಾಗಿ ಇನ್ನು ದೇಗುಲ ಮುಚ್ಚಿದೆ. ಆದರೂ ಇಲ್ಲಿನ ಜನ ಬಾಗಿಲು ಬಳಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ.

ಕೊರೊನಾ ಭೀತಿ ನಡುವೆಯೇ ಸಂಪೂರ್ಣ ನಿರ್ಲಕ್ಷ್ಯವಹಿಸುತ್ತಿದ್ದಾರೆ. ದೇವಾಲಯದ ಬಾಗಿಲ ಬಳಿ ನೂರಾರು ಜನರು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಈ ವೇಳೆ ಭಕ್ತರು ದೈಹಿಕ ಅಂತರ, ಮಾಸ್ಕ್​ ಮರೆತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಪುನಸ್ಕಾರದಿಂದ ಸಂಭ್ರಮಿಸುತ್ತಿದ್ದಾರೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us