Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಇ-ಪುಸ್ತಕ ದಾಸೋಹ

ವಿಜ್ಞಾನದ ಕುರಿತು ಹೆಚ್ಚು ಜನರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಸುಮಾರು 800ಕ್ಕೂ ಅಧಿಕ ಇ-ಪುಸ್ತಕಗಳನ್ನು ಉಚಿತವಾಗಿ ನೀಡಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಇ-ಪುಸ್ತಕ ದಾಸೋಹ
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಇ-ಪುಸ್ತಕ ದಾಸೋಹಕ್ಕೆ ಚಾಲನೆ
Follow us
Skanda
| Updated By: ಪೃಥ್ವಿಶಂಕರ

Updated on: Jan 23, 2021 | 7:07 AM

ಧಾರವಾಡ: ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಅನೇಕ ವಿಚಾರಗಳಿಂದ ಗಮನ ಸೆಳೆಯುತ್ತಲೇ ಇರುತ್ತದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹುಟ್ಟಿಸಿ, ಅವರಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸುವ ಕೆಲಸವನ್ನು ಅನೇಕ ವರ್ಷಗಳಿಂದ ಈ ಕೇಂದ್ರ ಮಾಡುತ್ತಾ ಬಂದಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೇಂದ್ರ ಅನೇಕ ವಿಷಯಗಳಿಂದಾಗಿ ಹೆಸರು ಪಡೆದಿದೆ. ಇದೀಗ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಇ-ಪುಸ್ತಕ ದಾಸೋಹ ಆರಂಭಿಸಿದೆ.

800 ಇ-ಪುಸ್ತಕಗಳನ್ನು ಉಚಿತವಾಗಿ ನೀಡಲು ನಿರ್ಧಾರ ವಿಜ್ಞಾನದ ಕುರಿತು ಹೆಚ್ಚು ಜನರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಸುಮಾರು 800ಕ್ಕೂ ಅಧಿಕ ಇ-ಪುಸ್ತಕಗಳನ್ನು ಉಚಿತವಾಗಿ ನೀಡಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಮನಃಶಾಸ್ತ್ರ ಸೇರಿದಂತೆ ವಿಜ್ಞಾನದ ಹಲವು ವಿಭಾಗಗಳ ಪುಸ್ತಕಗಳು ಇದರಲ್ಲಿದೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಟ್ರಸ್ಟ್ ಇದಕ್ಕೆ ಸಹಯೋಗ ನೀಡಿದ್ದು, ಇಲ್ಲಿ ಲಭ್ಯವಾಗುವ ಎಲ್ಲಾ ಇ-ಪುಸ್ತಕಗಳನ್ನು ಉಚಿತವಾಗಿಯೇ ನೀಡುವುದು ಕೇಂದ್ರದ ಮಹತ್ವದ ನಿರ್ಧಾರವಾಗಿದೆ.

ಉಚಿತವಾಗಿ ಪಡೆಯುವುದಲ್ಲದೇ ದಾನ ಕೊಡಲೂಬಹುದು ಈ ಯೋಜನೆಯಡಿ ಇ-ಪುಸ್ತಕಗಳನ್ನು ಉಚಿತವಾಗಿ ಪಡೆಯುವ ಜೊತೆಗೆ ತಮ್ಮ ಬಳಿ ಇರುವ ಇ-ಪುಸ್ತಕಗಳನ್ನು ದಾನ ಮಾಡುವುದಕ್ಕೂ ಅವಕಾಶವಿದೆ. ಯಾರು ಬೇಕಾದರೂ ತಮ್ಮಲ್ಲಿರುವ ಡಿಜಿಟಲ್ ಪುಸ್ತಕಗಳನ್ನು ಕೇಂದ್ರಕ್ಕೆ ದಾನವಾಗಿ ನೀಡಬಹುದಾಗಿದ್ದು, ದಾನಿಗಳ ಹೆಸರನ್ನು ಕೇಂದ್ರದ ದಾಖಲೆಗಳಲ್ಲಿ ಸೇರಿಸಲಾಗುತ್ತದೆ. ಸಂತಸದ ಸಂಗತಿ ಅಂದರೆ ಕೋಲಾರದ ವಿ.ಎಸ್‌.ಎಸ್‌. ಶಾಸ್ತ್ರಿ ಅವರು ಅದಾಗಲೇ 750 ಕ್ಕೂ ಅಧಿಕ ಇ-ಪುಸ್ತಕಗಳನ್ನು ನೀಡಿದ್ದಾರೆ.

ಈ ಯೋಜನೆಯಡಿ ಸಂಗ್ರಹಿಸಲಾಗಿರುವ ಇ-ಪುಸ್ತಕಗಳ ಪೈಕಿ ಅನೇಕ ಪುಸ್ತಕಗಳು ಜನರ ಗಮನ ಸೆಳೆಯುತ್ತಿವೆ. ದುಬಾರಿ ಬೆಲೆಯ ಪೆಂಗ್ವಿನ್ ವಿಜ್ಞಾನ ಪಾರಿಭಾಷಿಕ ನಿಘಂಟು ಸಹ ಸಂಗ್ರಹದಲ್ಲಿದೆ. ಹಾಗೆಯೇ 1888ರ ಎಲಿಮೆಂಟರ್ ಥಿಯರಿ ಆಫ್ ಟೈಡ್ಸ್‌ ಎಂಬ ಪುಸ್ತಕದಿಂದ ಹಿಡಿದು ಇತ್ತೀಚಿನ ದಿ ಜಾಯ್ ಆಫ್ ಕೆಮಿಸ್ಟ್ರಿ ಪುಸ್ತಕದವರೆಗೂ ವಿವಿಧ ಬಗೆಯ ಪುಸ್ತಕಗಳು ಸಿಗುತ್ತವೆ. 19, 20 ಹಾಗೂ 21ನೇ ಶತಮಾನದ ಬಹಳಷ್ಟು ಪ್ರಸಿದ್ಧ ವಿಜ್ಞಾನಿಗಳು ಬರೆದ ಹಲವಾರು ಪುಸ್ತಕಗಳು ಕೂಡ ಇದರಲ್ಲಿ ಸೇರಿವೆ. ಬಸವರಾಜ ಹೊರಟ್ಟಿಯವರ ಅವ್ವ ಟ್ರಸ್ಟ್ ಸಹಕಾರ ಈ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲು ಎಂ.ಎಲ್.ಸಿ. ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಟ್ರಸ್ಟ್ ಕಂಪ್ಯೂಟರ್ ಮತ್ತು 2 ಟೆರಾ ಬೈಟ್ ಹಾರ್ಡ್‌ ಡಿಸ್ಕ್‌ ನೀಡಿದೆ. ಕೇಂದ್ರದಲ್ಲಿ ಅದಾಗಲೇ 56 ಗಿಗಾ ಬೈಟ್‌ನಷ್ಟು ಪುಸ್ತಕಗಳ ಸಂಗ್ರಹವಿದ್ದು, ದಾಸೋಹದ ಮೂಲಕ ಕೇಂದ್ರಕ್ಕೆ ಸಲ್ಲುವ ಇನ್ನಷ್ಟು ಪುಸ್ತಕಗಳನ್ನು ಈ ಪಟ್ಟಿಗೆ ಸೇರಿಸುತ್ತಾ ಹೋಗಲಾಗುವುದು ಎಂದು ಸಂಬಂಧಿಸಿದವರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ NCERT ಪುಸ್ತಕಗಳು ಹಾಗೂ ಕರ್ನಾಟಕ ಸರ್ಕಾರದ ಪುಸ್ತಕಗಳೂ ಲಭ್ಯವಿದ್ದು, ತಮಗೆ ಬೇಕಾಗಿರುವ ಇ-ಪುಸ್ತಕವನ್ನು ತೆಗೆದುಕೊಂಡು ಹೋಗಲು ಸರಳ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ಲಭ್ಯವಿರುವ ಇ-ಪುಸ್ತಕಗಳ ಪಟ್ಟಿಯನ್ನು ಕೇಂದ್ರದಲ್ಲಿ ಹಾಕಲಾಗಿದ್ದು, ಆಸಕ್ತರಿಗೆ ಬೇಕಾದ ಇ-ಪುಸ್ತಕವನ್ನು ಅವರು ತಂದ ಪೆನ್‌ಡ್ರೈವ್‌ಗೆ ಹಾಕಿಕೊಡುವ ವ್ಯವಸ್ಥೆ ಇದೆ.

ಈ ಬಗ್ಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಡಾ. ವೀರಣ್ಣಾ ಬೋಳಿಶೆಟ್ಟಿ ಅವರು, ‘ಇಲ್ಲಿ ಇ-ಪುಸ್ತಕ ಪಡೆಯಲು ಹಾಗೂ ನೀಡಲು ಶುಲ್ಕವಿಲ್ಲ. ವಿಜ್ಞಾನದ ಬಗ್ಗೆ ಪ್ರತಿಯೊಬ್ಬರಲ್ಲೂ ಆಸಕ್ತಿ ಮೂಡಿಸುವುದು ಮತ್ತು ಆ ಮೂಲಕ ವೈಜ್ಞಾನಿಕ ಆಲೋಚನೆಯನ್ನು ಬಿತ್ತುವುದು ಈ ಕೇಂದ್ರದ ಕೆಲಸ. ಇಂತಹ ಹೊಸ ಪರಿಕಲ್ಪನೆಯಲ್ಲಿ ಇ-ಪುಸ್ತಕ ಲೋಕ ಅನಾವರಣಗೊಂಡಿದೆ. ಸಂಪನ್ಮೂಲ ಒದಗಿಸಿದರೆ ಅಗತ್ಯ ಇರುವವರು ಬಳಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇವುಗಳು ಕೇಂದ್ರದ ಅಂತರ್ಜಾಲ ತಾಣದ ಮೂಲಕ ಲಭ್ಯವಾಗುವಂತೆ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದ್ದಾರೆ.

SSLC ಮಕ್ಕಳಿಗೆ ವರದಾನ.. ಮಕ್ಕಳಿಗೆ ಗಣಿತ ಕಲಿಸಲು ಮಾಯದಂತಹ ಕ್ಯಾಲೆಂಡರ್​ ತಯಾರಿಸಿದ ಶಿಕ್ಷಕ!

ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ