ಪತ್ನಿ ಜೊತೆ ಹಾಸನಾಂಬೆ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಸನಾಂಬ ದರ್ಶನ ಮಾಡಿದ್ದಾರೆ. ಪತ್ನಿ ಜತೆ ಆಗಮಿಸಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೀಪಾವಳಿ ಹಬ್ಬದ ದಿನವೇ ಇಂದು ಬೆಳ್ಳಂ ಬೆಳಗ್ಗೆ ಪತ್ನಿ ಜೊತೆ ಆಗಮಿಸಿ ಬೆಳಗ್ಗೆ 6.45 ರ ಸುಮಾರಿಗೆ ಡಿಕೆಶಿ ಹಾಸನಾಂಬ ದರ್ಶನ ಮಾಡಿದ್ದಾರೆ. ಇಂದು ಹಾಸನಾಂಬ ದೇವಿಯ ದರ್ಶನದ ಕಡೇ ದಿನ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲಾಗುತ್ತೆ. ನವೆಂಬರ್ 5 ದೇವಾಲಯದ ಬಾಗಿಲು ತೆರೆಯಲಾಗಿತ್ತು. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಹಾಸನಾಂಬೆ […]

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಸನಾಂಬ ದರ್ಶನ ಮಾಡಿದ್ದಾರೆ. ಪತ್ನಿ ಜತೆ ಆಗಮಿಸಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೀಪಾವಳಿ ಹಬ್ಬದ ದಿನವೇ ಇಂದು ಬೆಳ್ಳಂ ಬೆಳಗ್ಗೆ ಪತ್ನಿ ಜೊತೆ ಆಗಮಿಸಿ ಬೆಳಗ್ಗೆ 6.45 ರ ಸುಮಾರಿಗೆ ಡಿಕೆಶಿ ಹಾಸನಾಂಬ ದರ್ಶನ ಮಾಡಿದ್ದಾರೆ. ಇಂದು ಹಾಸನಾಂಬ ದೇವಿಯ ದರ್ಶನದ ಕಡೇ ದಿನ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲಾಗುತ್ತೆ. ನವೆಂಬರ್ 5 ದೇವಾಲಯದ ಬಾಗಿಲು ತೆರೆಯಲಾಗಿತ್ತು. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಸದ್ಯ ಡಿಕೆಶಿ ಇಂದು ತಾಯಿಯ ದರ್ಶನ ಮಾಡಿದ್ದಾರೆ.
ಈ ವೇಳೆ ಡಿಕೆಶಿ ಮಾತನಾಡುತ್ತ ಇದೊಂದು ಪುಣ್ಯಕ್ಷೇತ್ರ, ನಂಬಿಕೆ ಪದಕ್ಕೆ ಪವಿತ್ರ ಕ್ಷೇತ್ರಗಳೇ ಸಾಕ್ಷಿ. ಹಾಸನಾಂಬೆ ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ. ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ನೋವನ್ನು ಪರಿಹರಿಸಲಿ ಎಂದು ದೇವಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ಸಿ.ಟಿ.ರವಿ
ಇತ್ತ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಹಾಸನಾಂಬೆ ದರ್ಶನ ಪಡೆದರು. ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿದ ರವಿ ಹಾಸನದ ಅಧಿದೇವತೆಯ ದರ್ಶನ ಪಡೆದರು.
Published On - 9:21 am, Mon, 16 November 20