5,000 ರೂ. ಕೊಟ್ಟರೆ No ಸಾಂಸ್ಥಿಕ ಕ್ವಾರಂಟೈನ್​.. ಅವ್ಯವಹಾರ ಕಂಡು ಬೇಸತ್ತ ವೈದ್ಯಾಧಿಕಾರಿ

ಬೆಂಗಳೂರು:ಕ್ವಾರಂಟೈನ್ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರದಿಂದ ಬೇಸತ್ತ ವೈದ್ಯಾಧಿಕಾರಿಯೊಬ್ಬರು ಈ ದಂಧೆಗೆ ಕಡಿವಾಣ ಹಾಕಲು ಠಾಣೆಯ ಮೆಟ್ಟಿಲೇರಲು ಸಿದ್ಧರಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ವಿದೇಶದಿಂದ ಬಂದವರಿಗೆ ವೈದ್ಯರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಿದ್ದಾರೆ. ಆದರೆ ಕ್ವಾರಂಟೈನ್​ ಕೇಂದ್ರದ ಬಿಬಿಎಂಪಿ ಸಿಬ್ಬಂದಿ ಹಾಗೂ ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿಸದೆ  ಹಾಗೆ ಬಿಟ್ಟು ಕಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಈ ಅವ್ಯವಹಾರಕ್ಕೆ 5 ರಿಂದ 10 ಸಾವಿರ ರೂಪಾಯಿ ವಸೂಲಿ ಸಹ ಮಾಡುತ್ತಿದ್ದಾರೆ […]

5,000 ರೂ. ಕೊಟ್ಟರೆ No ಸಾಂಸ್ಥಿಕ ಕ್ವಾರಂಟೈನ್​.. ಅವ್ಯವಹಾರ ಕಂಡು ಬೇಸತ್ತ ವೈದ್ಯಾಧಿಕಾರಿ
ಸಾಧು ಶ್ರೀನಾಥ್​ Edited By:

Updated on: Aug 04, 2020 | 5:32 PM

ಬೆಂಗಳೂರು:ಕ್ವಾರಂಟೈನ್ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರದಿಂದ ಬೇಸತ್ತ ವೈದ್ಯಾಧಿಕಾರಿಯೊಬ್ಬರು ಈ ದಂಧೆಗೆ ಕಡಿವಾಣ ಹಾಕಲು ಠಾಣೆಯ ಮೆಟ್ಟಿಲೇರಲು ಸಿದ್ಧರಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ವಿದೇಶದಿಂದ ಬಂದವರಿಗೆ ವೈದ್ಯರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಿದ್ದಾರೆ. ಆದರೆ ಕ್ವಾರಂಟೈನ್​ ಕೇಂದ್ರದ ಬಿಬಿಎಂಪಿ ಸಿಬ್ಬಂದಿ ಹಾಗೂ ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿಸದೆ  ಹಾಗೆ ಬಿಟ್ಟು ಕಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಈ ಅವ್ಯವಹಾರಕ್ಕೆ 5 ರಿಂದ 10 ಸಾವಿರ ರೂಪಾಯಿ ವಸೂಲಿ ಸಹ ಮಾಡುತ್ತಿದ್ದಾರೆ ಎಂದು ವೈದ್ಯಾಧಿಕಾರಿಯ ಆರೋಪಿಸಿದ್ದಾರೆ.

ಈ ಹಿಂದೆ, ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳಿಸಿದರೆ, ಕೇವಲ 2,000 ರೂಪಾಯಿ ಪಡೆದು ಪ್ರಯಾಣಿಕರನ್ನ ಮನೆಗೆ ಕಳಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಯು ಹೇಳಿದ್ದಾರೆ. ಈ ರೀತಿಯ ಹಲವು ಘಟನೆಗಳಿಂದ ಬೇಸತ್ತ ವೈದ್ಯಾಧಿಕಾರಿ ಇದೀಗ ಈ ಅವ್ಯವಹಾರವನ್ನ ಬಯಲಿಗೆಳೆಯಲು ಮುಂದಾಗಿದ್ದು  ಪೊಲೀಸ್ ಠಾಣೆಯ ಮೆಟ್ಟಿಲೇರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಜೊತೆಗೆ, ಈ ಅವ್ಯವಹಾರದ ಆಡಿಯೋ ತುಣುಕೊಂದು ಬಹಿರಂಗವಾಗಿದ್ದು, ಅದರಲ್ಲಿ ಪ್ಯಾಸೆಂಜರ್​ನಿಂದ ಹಣ ಪಡೆದ ನರ್ಸ್ ಒಬ್ಬರು ಯಾವುದೇ ಕಾರಣಕ್ಕೂ ಹಣಪಡೆದಿರುವ ವಿಚಾರವನ್ನು ಯಾರ ಬಳಿಯೂ ಹೇಳಬೇಡಿ ಎಂದು ನುಡಿದಿರುವುದು ಕೇಳಿಬಂದಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us