ಕೊವಿಡ್ ಸೆಂಟರ್‌ನಲ್ಲಿ ನಾಯಿ ಸಾವು: ಕ್ಯಾರೆ ಅನ್ನದ ಆಸ್ಪತ್ರೆ ಸಿಬ್ಬಂದಿ, ಯಾವೂರಲ್ಲಿ?

ಕೊಪ್ಪಳ: ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿಗಳುಯ ದಿವ್ಯ ನಿರ್ಲಕ್ಷ್ಯ ವಹಿಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ನಡೆದಿದೆ. ಕುಷ್ಟಗಿಯ ತಾಲೂಕು ಆಸ್ಪತ್ರೆಯ ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದೆ. ಆದರೂ ಸಹ ಆಸ್ಪತ್ರೆ ಸಿಬ್ಬಂದಿ ನಾಯಿಯ ದೇಹವನ್ನು ಹೊರಗೆ ಹಾಕದೆ ಅಲ್ಲೇ ಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಇದೇ ಟೆಸ್ಟ್ ಸೆಂಟರ್​ಗೆ ಕೋವಿಡ್ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಬರ್ತಿದ್ದಾರೆ. ನಾಯಿ ಮೃತಪಟ್ಟು ದಿನಗಳೇ ಕಳೆದಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಲೆ […]

ಕೊವಿಡ್ ಸೆಂಟರ್‌ನಲ್ಲಿ ನಾಯಿ ಸಾವು: ಕ್ಯಾರೆ ಅನ್ನದ ಆಸ್ಪತ್ರೆ ಸಿಬ್ಬಂದಿ, ಯಾವೂರಲ್ಲಿ?
Edited By: ಸಾಧು ಶ್ರೀನಾಥ್​

Updated on: Nov 20, 2020 | 1:06 PM

ಕೊಪ್ಪಳ: ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿಗಳುಯ ದಿವ್ಯ ನಿರ್ಲಕ್ಷ್ಯ ವಹಿಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ನಡೆದಿದೆ.

ಕುಷ್ಟಗಿಯ ತಾಲೂಕು ಆಸ್ಪತ್ರೆಯ ಕೋವಿಡ್ ಟೆಸ್ಟ್ ಸೆಂಟರ್​ನಲ್ಲಿ ನಾಯಿ ಸತ್ತು ಬಿದ್ದಿದೆ. ಆದರೂ ಸಹ ಆಸ್ಪತ್ರೆ ಸಿಬ್ಬಂದಿ ನಾಯಿಯ ದೇಹವನ್ನು ಹೊರಗೆ ಹಾಕದೆ ಅಲ್ಲೇ ಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಇದೇ ಟೆಸ್ಟ್ ಸೆಂಟರ್​ಗೆ ಕೋವಿಡ್ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಬರ್ತಿದ್ದಾರೆ. ನಾಯಿ ಮೃತಪಟ್ಟು ದಿನಗಳೇ ಕಳೆದಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲೆಲ್ಲಾ ದುರ್ನಾತ ಬೀರುತ್ತಿದ್ರೂ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Published On - 1:06 pm, Fri, 20 November 20

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us