ಈ ಬಾರಿಯ ಲಾಲ್ ಬಾಗ್ Flower Show ಕ್ಯಾನ್ಸಲ್, ಕಾರಣವೇನು ಗೊತ್ತಾ?

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಗರದ ಲಾಲ್ ಬಾಗ್​ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಪ್ರತಿವರ್ಷವೂ ವಿಭಿನ್ನ ರೀತಿಯ ವಿಷಯವನ್ನ ಆಧಾರವಾಗಿಟ್ಟುಕೊಂಡು ಫಲಪುಷ್ಪ ಪ್ರದರ್ಶನವನ್ನು ಲಾಲ್ ಬಾಗ್ ಸಸ್ಯ ತೋಟದ ಆಡಳಿತ ಮಂಡಳಿ ಆಯೋಜನೆ ಮಾಡುತ್ತಿತ್ತು. ಈ  ಪ್ರದರ್ಶನವನ್ನು ಕಣ್ತುಂಬಿಕೊಳ್ಳಲೆಂದು ಬರೀ ಬೆಂಗಳೂರಿಗರೇ ಅಲ್ಲದೆ ರಾಜ್ಯದ ಹಲವೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು.ಆದರೆ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಪ್ರತಿವರ್ಷ ಮೇ ತಿಂಗಳಲ್ಲಿಯೇ Flower showಗೆ ತಯಾರಿ ಮಾಡಿಕೊಳ್ಳುತ್ತಿದ್ದ […]

ಈ ಬಾರಿಯ ಲಾಲ್ ಬಾಗ್ Flower Show ಕ್ಯಾನ್ಸಲ್, ಕಾರಣವೇನು ಗೊತ್ತಾ?
ಸಾಧು ಶ್ರೀನಾಥ್​ Edited By:

Updated on: Aug 02, 2020 | 5:30 PM

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಗರದ ಲಾಲ್ ಬಾಗ್​ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಪ್ರತಿವರ್ಷವೂ ವಿಭಿನ್ನ ರೀತಿಯ ವಿಷಯವನ್ನ ಆಧಾರವಾಗಿಟ್ಟುಕೊಂಡು ಫಲಪುಷ್ಪ ಪ್ರದರ್ಶನವನ್ನು ಲಾಲ್ ಬಾಗ್ ಸಸ್ಯ ತೋಟದ ಆಡಳಿತ ಮಂಡಳಿ ಆಯೋಜನೆ ಮಾಡುತ್ತಿತ್ತು.

ಈ  ಪ್ರದರ್ಶನವನ್ನು ಕಣ್ತುಂಬಿಕೊಳ್ಳಲೆಂದು ಬರೀ ಬೆಂಗಳೂರಿಗರೇ ಅಲ್ಲದೆ ರಾಜ್ಯದ ಹಲವೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು.ಆದರೆ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

ಪ್ರತಿವರ್ಷ ಮೇ ತಿಂಗಳಲ್ಲಿಯೇ Flower showಗೆ ತಯಾರಿ ಮಾಡಿಕೊಳ್ಳುತ್ತಿದ್ದ ತೋಟಗಾರಿಕೆ ಇಲಾಖೆ, ಈ ವರ್ಷ ಆಗಸ್ಟ್ ಬಂದರು ಯಾವುದೇ ರೀತಿಯ ತಯಾರಿಗೆ ಮುಂದಾಗಿಲ್ಲ. ಕೊರೊನಾ ರಾಜ್ಯದಲ್ಲಿ ಹೆಚ್ಚಾಗಿರುವುದರಿಂದ ಹಾಗೂ ಸಾರ್ವಜನಿಕರು ಹೆಚ್ಚಾಗಿ ಸೇರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕೆ ನಿಷೇಧವಿರುವ ಕಾರಣದಿಂದಾಗಿ ಈ ಬಾರಿಯ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಲಾಲ್ ಬಾಗ್​ನ ಉಪನಿರ್ದೇಶಕಿ ಕುಸುಮ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us