ಸುಶಾಂತ್‌ ಗೆಳತಿ ವಿರುದ್ಧ ಇಡಿ ಕೇಸ್‌, ಚಕ್ರವ್ಯೂಹದಲ್ಲಿ ನಟಿ ರಿಯಾ ಚಕ್ರವರ್ತಿ

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಹಾರ ಪೊಲೀಸರು ಸುಶಾಂತ್‌ ಮಾಜಿ ಗೆಳತಿ ಹಾಗೂ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಕೇಸ್‌ ದಾಖಲಿಸಿದ ಬೆನ್ನಲ್ಲೇ, ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್‌ ಕೇಸ್‌ ದಾಖಲಿಸಿದೆ. ಹೌದು ಸುಶಾಂತ್‌ ಸಿಂಗ್‌ ರಜಪೂತ್‌ ಸತ್ತಿದ್ದೇ ಬಂತು, ದಿನಕ್ಕೊಂದು ವಿಷಯಗಳು ಹೊರಬರುತ್ತಿವೆ. ಬಾಲಿವುಡ್‌ನಲ್ಲಿನ ನೆಪೋಟಿಸಮ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು ಅಂತಾ ಮೊದ ಮೊದಲು ಕೇಳಿಬಂದಿತ್ತು. ಇದಕ್ಕಾಗಿ ಮುಂಬಯಿ ಪೊಲೀಸರು ಬಾಲಿವುಡ್‌ನ […]

ಸುಶಾಂತ್‌ ಗೆಳತಿ ವಿರುದ್ಧ ಇಡಿ ಕೇಸ್‌, ಚಕ್ರವ್ಯೂಹದಲ್ಲಿ ನಟಿ ರಿಯಾ ಚಕ್ರವರ್ತಿ

Updated on: Jul 31, 2020 | 8:27 PM

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಹಾರ ಪೊಲೀಸರು ಸುಶಾಂತ್‌ ಮಾಜಿ ಗೆಳತಿ ಹಾಗೂ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಕೇಸ್‌ ದಾಖಲಿಸಿದ ಬೆನ್ನಲ್ಲೇ, ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್‌ ಕೇಸ್‌ ದಾಖಲಿಸಿದೆ.

ಹೌದು ಸುಶಾಂತ್‌ ಸಿಂಗ್‌ ರಜಪೂತ್‌ ಸತ್ತಿದ್ದೇ ಬಂತು, ದಿನಕ್ಕೊಂದು ವಿಷಯಗಳು ಹೊರಬರುತ್ತಿವೆ. ಬಾಲಿವುಡ್‌ನಲ್ಲಿನ ನೆಪೋಟಿಸಮ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು ಅಂತಾ ಮೊದ ಮೊದಲು ಕೇಳಿಬಂದಿತ್ತು. ಇದಕ್ಕಾಗಿ ಮುಂಬಯಿ ಪೊಲೀಸರು ಬಾಲಿವುಡ್‌ನ ದಿಗ್ಗಜರ ವಿಚಾರಣೆ ಮಾಡುತ್ತಿದ್ದರು.

ಈ ನಡುವೆ ಬಿಹಾರದ ಪಾಟ್ನಾದಲ್ಲಿ ಸುಶಾಂತ್‌ ತಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರನ್ನು ನಟಿ ಹಾಗೂ ಸುಂಶಾಂತ್‌ರ ಮಾಜಿ ಗೆಳತಿ ರಿಯಾ ವಿರುದ್ಧ ದಾಖಲಿಸಿ ಪ್ರಕರಣಕ್ಕೆ ತಿರುವು ನೀಡಿದ್ದರು.

ಈಗ ಜಾರಿ ನಿರ್ಧೇಶನಾಯದ ಸರದಿ. 15ಕೋಟಿ ರೂ.ಗಳನ್ನು ರಿಯಾ ಸುಶಾಂತ್‌ರಿಂದ ಕಿತ್ತುಕೊಂಡಿದ್ದಾಳೆ ಎನ್ನುವ ಸುದ್ದಿಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್‌ ಕೇಸ್‌ನ್ನು ನಟಿ ರಿಯಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿದ್ದಾರೆ.

 

Published On - 8:27 pm, Fri, 31 July 20