Dharwad Road Accident ಟೆಂಪೋಗೆ ಟಿಪ್ಪರ್ ಡಿಕ್ಕಿ: ಗೋವಾ ಪ್ರವಾಸಕ್ಕೆ ತೆರಳ್ತಿದ್ದ 11 ಮಂದಿ ಹಳೆ ವಿದ್ಯಾರ್ಥಿಗಳ ದುರ್ಮರಣ
Dharwad Road Accident ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವುವಿಸಿದೆ. ಘಟನೆಯಲ್ಲಿ 11 ಜನ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ: ಟೆಂಪೋ ಟ್ರಾವೆಲರ್ಗೆ ಟಿಪ್ಪರ್ ಡಿಕ್ಕಿ ಹೊಡೆದು 11 ಜನ ಮೃತಪಟ್ಟಿರುವ ಭೀಕರ ಅಪಘಾತವೊಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳ್ತಿದ್ದ ವೇಳೆ ಇಂದು ಬೆಳಗ್ಗೆ 7:30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವುವಿಸಿದೆ. ಘಟನೆಯಲ್ಲಿ ವೀಣಾ, ಮಂಜುಳಾ, ರಾಜೇಶ್ವರಿ, ಡ್ರೈವರ್, ಕ್ಲೀನರ್, 9 ಮಹಿಳೆಯರು ಸೇರಿ 11 ಜನ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳಕ್ಕೆ ಎಸ್‌ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರಿಪ್ಗೆ ಹೋಗುತ್ತಿದ್ದವರು ಮರಳಿ ಬಾರದ ಕಡೆ ಪ್ರಯಾಣ ಬೆಳೆಸಿದ್ರು ಟಿಟಿಯಲ್ಲಿ ಗೋವಾ ಟ್ರಿಪ್ಗೆ ಹೋಗುತ್ತಿದ್ದ ಒಟ್ಟು 16 ಜನರಲ್ಲಿ 14 ಮಹಿಳೆಯರು, ಇಬ್ಬರು ಪುರುಷರಿದ್ರು. ಅಪಘಾತದಲ್ಲಿ 9 ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಗಾಯಗೊಂಡ ಐವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕರು ದಾವಣಗೆರೆ ನಗರದ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಗಳು. 14 ಮಹಿಳೆಯರೂ ದಾವಣಗೆರೆ ನಗರದ ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯ ಒಂದೇ ಬ್ಯಾಚ್ನ ಹಳೆ ವಿದ್ಯಾರ್ಥಿಗಳು. ಇಂದು ಎಲ್ಲರೂ ಸೇರಿ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.
ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ಗೆ ಗಂಭೀರ ಗಾಯ, ಪತ್ನಿ ಸಾವು
Published On - 8:26 am, Fri, 15 January 21