ಚೀನಾ ಮೂಲದ ಟಿಕ್ಟಾಕ್ ಆ್ಯಪ್ ಬ್ಯಾನ್ ಆದ ನಂತರದಲ್ಲಿ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ ರೀಲ್ಸ್ ಪರಿಚಯಿಸಿತ್ತು. ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಹಾಕುವ ಅವಕಾಶವನ್ನು ರೀಲ್ಸ್ ನೀಡುತ್ತದೆ. ಕೆಲವೇ ದಿನಗಳಲ್ಲಿ ರೀಲ್ಸ್ ತುಂಬಾನೇ ಖ್ಯಾತಿ ಪಡೆದುಕೊಂಡಿತ್ತು. ಈಗ ಫೇಸ್ಬುಕ್ ಕೂಡ ಇನ್ಸ್ಟಾಗ್ರಾಂ ಹಾದಿಯನ್ನು ತುಳಿಯುತ್ತಿದೆ. ಅಂದರೆ, ಇನ್ಮುಂದೆ ಫೇಸ್ಬುಕ್ನಲ್ಲೂ ರೀಲ್ಸ್ ಆಯ್ಕೆ ಸಿಗಲಿದೆ.
ಸಾಕಷ್ಟು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳಲು ಫೇಸ್ಬುಕ್ ಉತ್ತಮ ತಾಣವಾಗಿ ಮಾರ್ಪಟ್ಟಿದೆ. ಬಳಕೆದಾರರು ಸಾಕಷ್ಟು ಸಮಯವನ್ನು ಫೇಸ್ಬುಕ್ನಲ್ಲಿ ವಿಡಿಯೋ ನೋಡಲು ಕಳೆಯುತ್ತಿದ್ದಾರೆ. ಇದನ್ನು ಫೇಸ್ಬುಕ್ ಕೂಡ ಒಪ್ಪಿಕೊಂಡಿದೆ. ಈಗ ಫೇಸ್ಬುಕ್ ಸಣ್ಣ ವಿಡಿಯೋಗಳನ್ನು ಪರಿಚಯಿಸುತ್ತಿದೆ. ಇಂದಿನಿಂದ ರೀಲ್ಸ್ ಆಯ್ಕೆಯನ್ನು ತರುವುದಾಗಿ ಫೇಸ್ಬುಕ್ ಹೇಳಿದೆ. ಫೇಸ್ಬುಕ್ನಲ್ಲಿ ರೀಲ್ಸ್ ಮಾಡೋದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
*ಫೇಸ್ಬುಕ್ ಆ್ಯಪ್ ಓಪನ್ ಮಾಡಿಕೊಂಡ ನಂತರ ಅಲ್ಲಿ ರೀಲ್ಸ್ ಅಥವಾ ಶಾರ್ಟ್ ವಿಡಿಯೋ ಎನ್ನುವ ಆಯ್ಕೆ ಸಿಗಲಿದೆ. ಅದನ್ನು ಕ್ಲಿಕ್ ಮಾಡಿ.
* ರೀಲ್ಸ್ ಕ್ಲಿಕ್ ಮಾಡಿದ ನಂತರ ನೀವು ವಿಡಿಯೋ ರೆಕಾರ್ಡ್ ಮಾಡಬಹುದು ಅಥವಾ ನಿಮ್ಮ ಕ್ಯಾಮೆರಾದಲ್ಲಿರುವ ವಿಡಿಯೋಗಳನ್ನು ಬಳಕೆ ಮಾಡಿಕೊಂಡು ಸಣ್ಣ ಸಣ್ಣ ವಿಡಿಯೋಗಳನ್ನು ಸಿದ್ಧಪಡಿಸಬಹುದು.
* ಸಣ್ಣ ವಿಡಿಯೋಗಳನ್ನು ಮಾತ್ರ ಇಲ್ಲಿ ಕ್ರಿಯೇಟ್ ಮಾಡಬಹುದು. ಇದಕ್ಕೆ ಸಮಯ ಮಿತಿಯನ್ನು ಫೇಸ್ಬುಕ್ ವಿಧಿಸಿದೆ.
* ಫೇಸ್ಬುಕ್ ಮ್ಯೂಸಿಕ್ ಲೈಬ್ರರಿಯಿಂದ ಆಡಿಯೋ ಆಯ್ಕೆ ಮಾಡಬಹುದು. ಇಲ್ಲವೇ ನಿಮ್ಮದೇ ಆಡಿಯೋವನ್ನು ಕೂಡ ಹಾಕಬಹುದು.
* ಈ ವಿಡಿಯೋಗೆ ನೀವು ಎಫೆಕ್ಟ್ಗಳನ್ನು ಕೂಡ ಹಾಕಬಹುದು.
* ಆಯ್ಕೆ ಮಾಡಿಕೊಂಡ ವಿಡಿಯೋದ ವೇಗವನ್ನು ಕಡಿಮೆ ಮಾಡಬಹುದು ಇಲ್ಲವೇ ವಿಡಿಯೋದ ವೇಗವನ್ನು ಹೆಚ್ಚಿಸುವ ಆಯ್ಕೆ ಕೂಡ ಇದರಲ್ಲಿ ಸಿಗಲಿದೆ.
* ಸಂಪೂರ್ಣ ಎಡಿಟ್ ಆದ ನಂತರದಲ್ಲಿ ವಿಡಿಯೋವನ್ನು ಶೇರ್ ಮಾಡಬೇಕು. ಇದನ್ನು ಗೆಳೆಯರಿಗಷ್ಟೇ ಕಾಣುವಂತೆ ಹಾಕಬಹುದು. ಪಬ್ಲಿಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ, ಎಲ್ಲರಿಗೂ ಈ ವಿಡಿಯೋ ಕಾಣಿಸಲಿದೆ.
ಇದನ್ನೂ ಓದಿ: Women’s Day 2021: ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ