ಫೇಸ್​ಬುಕ್​ ಸ್ನೇಹಿತನ ಜೊತೆ ಪ್ರೀತಿಗೆ ಬಿದ್ದಿದ್ದ ಯುವತಿ ಅವನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಫೇಸ್​ಬುಕ್​ ಸ್ನೇಹಿತನ ಜೊತೆ ಪ್ರೀತಿಗೆ ಬಿದ್ದಿದ್ದ ಯುವತಿ ಅವನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಅಶ್ವಿನಿ ಮತ್ತು ಸುರೇಶ್

ಎರಡು ವರ್ಷಗಳ ಹಿಂದೆ ಅಶ್ವಿನಿಗೆ ಫೇಸ್‌ಬುಕ್‌ನಲ್ಲಿ ಸುರೇಶ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕ ಅಶ್ವಿನಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುವಾಗ ಆಟೋ ಡ್ರೈವರ್ ಆಗಿದ್ದ ಸುರೇಶ್ ದಿನಲೂ ಆಕೆಯನ್ನು ಕೆಲಸಕ್ಕೆ ಡ್ರಾಪ್ ಮಾಡುತ್ತಿದ್ದ. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಹುಟ್ಟಿತ್ತು...

Ayesha Banu

|

Mar 14, 2021 | 11:58 AM


ದೇವನಹಳ್ಳಿ: ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಎಂ.ವಿ.ಬಡಾವಣೆ ಮನೆಯಲ್ಲಿ ಮಹಿಳೆಯ ಮೃತದೇಹ ಸಿಕ್ಕಿದೆ. ತುಮಕೂರು ಜಿಲ್ಲೆ ಕೊರಟಗೆರೆಯ ಅಶ್ವಿನಿ(23) ಮೃತ ಮಹಿಳೆ. 3 ದಿನಗಳಿಂದೆ ಯುವತಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಅಶ್ವಿನಿಗೆ ಫೇಸ್‌ಬುಕ್‌ನಲ್ಲಿ ಸುರೇಶ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕ ಅಶ್ವಿನಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುವಾಗ ಆಟೋ ಡ್ರೈವರ್ ಆಗಿದ್ದ ಸುರೇಶ್ ದಿನಲೂ ಆಕೆಯನ್ನು ಕೆಲಸಕ್ಕೆ ಡ್ರಾಪ್ ಮಾಡುತ್ತಿದ್ದ. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಹುಟ್ಟಿತ್ತು. 2 ತಿಂಗಳ ಹಿಂದೆ ಸುರೇಶ್ ಆಕೆಯ ಪ್ರಿಯತಮೆ ಅಶ್ವಿನಿಯನ್ನು ಹೊಸಕೋಟೆಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆತಂದಿದ್ದ. ಕೆಲ ದಿನಗಳು ಎಲ್ಲವೂ ಚನ್ನಾಗಿತ್ತು. ಆದ್ರೆ ಇತ್ತೀಚೆಗೆ ಅಶ್ವಿನಿ ಸೂಲಿಬೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿ ಸುರೇಶ್ ವಂಚಿಸಿದ್ದಾನೆಂದು ಸುರೇಶ್ ವಿರುದ್ಧ ಪೊಲೀಸರ ಮೊರೆ ಹೋಗಿದ್ದಳು. ಈ ವೇಳೆ ಸೂಲಿಬೆಲೆ ಪೊಲೀಸರು ಅಶ್ವಿನಿ ಮತ್ತು ಸುರೇಶ್‌ ಜೊತೆ ಮಾತಾನಾಡಿ ಇಬ್ಬರಿಗೂ ರಾಜಿ ಮಾಡಿ ಕಳಿಸಿದ್ದರು.

ಆದ್ರೆ ಇದೀಗ ಅಶ್ವಿನಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿಯನ್ನು ಸುರೇಶ್ ಕೊಲೆ ಮಾಡಿದ್ದಾನೆ ಎಂದು ಅಶ್ವಿನಿ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುರೇಶ್​ಗಾಗಿ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: Facebook Fraud | ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ವಿವಾಹಿತೆಗೆ ವಂಚನೆ.. ಚಿಂತಾಮಣಿಯ ಫೈನಾನ್ಸಿಯರ್ ವಿರುದ್ಧ ದೂರು


Follow us on

Related Stories

Most Read Stories

Click on your DTH Provider to Add TV9 Kannada