ಕಲಿಯುಗದ ಕರ್ಣನ 2ನೇ ಪುಣ್ಯಸ್ಮರಣೆ: ಅಂಬಿ ನೆನಪಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು

ಮಂಡ್ಯ: ನವೆಂಬರ್ 24 ಕ್ಕೆ ಅಂಬರೀಶ್ ಅವರ 2 ನೇ ವರ್ಷದ ಪುಣ್ಯ ಸ್ಮರಣೆ. ಹೀಗಾಗಿ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಗುಡಿಯೊಂದನ್ನು ಕಟ್ಟಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳಿಂದ ಗುಡಿ ನಿರ್ಮಾಣ ಮಾಡಲಾಗಿದೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನ ಅಭಿಮಾನಿಗಳು ಪುತ್ಥಳಿ ನಿರ್ಮಾಣ […]

ಕಲಿಯುಗದ ಕರ್ಣನ 2ನೇ ಪುಣ್ಯಸ್ಮರಣೆ: ಅಂಬಿ ನೆನಪಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು

Updated on: Nov 15, 2020 | 4:15 PM

ಮಂಡ್ಯ: ನವೆಂಬರ್ 24 ಕ್ಕೆ ಅಂಬರೀಶ್ ಅವರ 2 ನೇ ವರ್ಷದ ಪುಣ್ಯ ಸ್ಮರಣೆ. ಹೀಗಾಗಿ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಗುಡಿಯೊಂದನ್ನು ಕಟ್ಟಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳಿಂದ ಗುಡಿ ನಿರ್ಮಾಣ ಮಾಡಲಾಗಿದೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನ ಅಭಿಮಾನಿಗಳು ಪುತ್ಥಳಿ ನಿರ್ಮಾಣ ಸ್ಥಳದಲ್ಲಿ ಹಾಕಿದ್ದಾರೆ.

ಚಿತಾಭಸ್ಮವನ್ನ ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ಅಭಿಮಾನಿಗಳು ಹಾಕಿದ್ದಾರೆ. ಇದೇ ತಿಂಗಳ 24 ರಂದು ಅಂಬಿ ಪುತ್ಥಳಿಯನ್ನು ಅವರ ಪತ್ನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ. ಅಂಬರೀಶ್ ಬದುಕಿದ್ದಾಗ ಅವರ ಹುಟ್ಟುಹಬ್ಬವನ್ನ ತಮ್ಮದೇ ಗ್ರಾಮದ ಹಬ್ಬ ಎಂಬಂತೆ ಅಭಿಮಾನಿಗಳು ಆಚರಣೆ ಮಾಡ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನ ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

Published On - 3:58 pm, Sun, 15 November 20