ಆ ರೈತ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದು ಯಾಕೆ ಗೊತ್ತಾ?

ಹಾವೇರಿ: ಗಾಂಜಾ ಬೆಳೆ ಬೆಳೆಯುವುದು ಕಾನೂನು ಪ್ರಕಾರ ಅಪರಾಧ. ಆದರೆ ಅದ್ಹೇಗೋ ಏನೋ ತನ್ನ ಜಮೀನಿನ ಬದುವಿನಲ್ಲಿ ಒಂದು ಗಾಂಜಾ ಗಿಡ ಬೆಳೆದು ರೈತನೋರ್ವ ಪೊಲೀಸರ ಕೈಗೆ ತಗ್ಲಾಕ್ಕೊಂಡ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಯಲ್ಲಾಪುರ ಗ್ರಾಮದ ರೈತ 58 ವರ್ಷದ ಬಸವರಾಜ ಆನವಟ್ಟಿ ತನ್ನ ಜಮೀನಿನಲ್ಲಿ ಬದುವಿನಲ್ಲಿ ಒಂದು ಗಾಂಜಾ ಗಿಡ ಬೆಳೆಸಿದ್ದ. ಗಿಡಕ್ಕೆ ಕಟ್ಟಿಗೆ ನಿಲ್ಲಿಸಿ, ಗಿಡವನ್ನು ಉತ್ತಮವಾಗಿ ಬೆಳೆಯುವ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದ. ಬದುವಿನಲ್ಲಿ ರೈತ ಬಸವರಾಜ ಗಾಂಜಾ […]

ಆ ರೈತ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದು ಯಾಕೆ ಗೊತ್ತಾ?

Updated on: Sep 01, 2020 | 12:46 PM

ಹಾವೇರಿ: ಗಾಂಜಾ ಬೆಳೆ ಬೆಳೆಯುವುದು ಕಾನೂನು ಪ್ರಕಾರ ಅಪರಾಧ. ಆದರೆ ಅದ್ಹೇಗೋ ಏನೋ ತನ್ನ ಜಮೀನಿನ ಬದುವಿನಲ್ಲಿ ಒಂದು ಗಾಂಜಾ ಗಿಡ ಬೆಳೆದು ರೈತನೋರ್ವ ಪೊಲೀಸರ ಕೈಗೆ ತಗ್ಲಾಕ್ಕೊಂಡ ಘಟನೆ ನಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಯಲ್ಲಾಪುರ ಗ್ರಾಮದ ರೈತ 58 ವರ್ಷದ ಬಸವರಾಜ ಆನವಟ್ಟಿ ತನ್ನ ಜಮೀನಿನಲ್ಲಿ ಬದುವಿನಲ್ಲಿ ಒಂದು ಗಾಂಜಾ ಗಿಡ ಬೆಳೆಸಿದ್ದ. ಗಿಡಕ್ಕೆ ಕಟ್ಟಿಗೆ ನಿಲ್ಲಿಸಿ, ಗಿಡವನ್ನು ಉತ್ತಮವಾಗಿ ಬೆಳೆಯುವ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದ. ಬದುವಿನಲ್ಲಿ ರೈತ ಬಸವರಾಜ ಗಾಂಜಾ ಗಿಡ ಬೆಳೆದಿದ್ದು ಹಾನಗಲ್ ಠಾಣೆ ಪೊಲೀಸರಿಗೆ ಮಾಹಿತಿ ದೊರೆತಿತ್ತು.

ಖಚಿತ ಮಾಹಿತಿ ಮೇರೆಗೆ ಹಾನಗಲ್ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ತಹಶೀಲ್ದಾರ ಎರ್ರಿಸ್ವಾಮಿ ಪಿ.ಎಸ್ ನೇತೃತ್ವದಲ್ಲಿ ದಾಳಿ ಮಾಡಿದರು. ದಾಳಿ ಸಮಯದಲ್ಲಿ ರೈತ ಬಸವರಾಜನ ಜಮೀನಿನ ಬದುವಿನಲ್ಲಿ ಗಾಂಜಾ ಗಿಡ ಬೆಳೆಸಿದ್ದು ದೊರೆತಿದೆ. 422 ಗ್ರಾಂ ತೂಕದ ಗಾಂಜಾ ಗಿಡವನ್ನು ಪೊಲೀಸರು ಜಪ್ತಿ ಮಾಡಿ, ಆರೋಪಿ ಬಸವರಾಜನನ್ನು ಬಂಧಿಸಿದ್ದಾರೆ.

ರೈತ ಬಸವರಾಜ ಗಾಂಜಾ ಗಿಡವನ್ನು ಯಾವ ಉದ್ದೇಶಕ್ಕೆ ಬೆಳೆಸಿದ ಮತ್ತು ಎಲ್ಲಿಗೆ ಮಾರಾಟ ಮಾಡಲು ಉದ್ದೇಶಿಸಿದ್ದ ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
-ಪ್ರಭುಗೌಡ ಎನ್. ಪಾಟೀಲ