AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧ ಬೆಳೆ ಮಳೆ ಪಾಲಾಗಿದೆ; ಉಳಿದರ್ಧ ಭಾಗ ಕಳ್ಳಕಾಕರ ಪಾಲಾಗಿದೆ: ರೈತನ ಪಾಡೇನು?

ಗದಗ: ಸತತ ಮಳೆಯಿಂದ ರೈತರು ಬೆಳೆದ ಅರ್ಧಕ್ಕಿಂತ ಹೆಚ್ಚು ಬೆಳೆ ಮಳೆರಾಯನ ಪಾಲಾಗಿದೆ. ಹಾಗೋ ಹೀಗೋ ಇನ್ನುಳಿದ ಬೆಳೆಗೆ ಕಳ್ಳರ ಕಣ್ಣು ಬಿದ್ದಿದೆ. ಹೌದು ಗದಗ ಜಿಲ್ಲೆಯಲ್ಲಿ ಈಗ ಬೆಳೆ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಲಿಂಬವ್ವ ಹೊನಗೇರಿ ಎಂಬುವವರ ಜಮೀನಿನಲ್ಲಿ ಸುಮಾರು ಆರು ಕ್ವಿಂಟಲ್​ಗಿಂತಲೂ ಹೆಚ್ಚಿಗೆ ಹಸಿ ಮೆಣಸಿನಕಾಯಿ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿದ ಕಳ್ಳರು ಬೆಳೆದಿರುವ ಮೆಣಸಿನಕಾಯಿ ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಬೇಕಾಬಿಟ್ಟಿಯಾಗಿ ಮೆಣಸಿನಕಾಯಿ ಗಿಡ […]

ಅರ್ಧ ಬೆಳೆ ಮಳೆ ಪಾಲಾಗಿದೆ; ಉಳಿದರ್ಧ ಭಾಗ ಕಳ್ಳಕಾಕರ ಪಾಲಾಗಿದೆ: ರೈತನ ಪಾಡೇನು?
ಆಯೇಷಾ ಬಾನು
ಆಯೇಷಾ ಬಾನು|

Updated on: Nov 03, 2020 | 3:47 PM

Share

ಗದಗ: ಸತತ ಮಳೆಯಿಂದ ರೈತರು ಬೆಳೆದ ಅರ್ಧಕ್ಕಿಂತ ಹೆಚ್ಚು ಬೆಳೆ ಮಳೆರಾಯನ ಪಾಲಾಗಿದೆ. ಹಾಗೋ ಹೀಗೋ ಇನ್ನುಳಿದ ಬೆಳೆಗೆ ಕಳ್ಳರ ಕಣ್ಣು ಬಿದ್ದಿದೆ. ಹೌದು ಗದಗ ಜಿಲ್ಲೆಯಲ್ಲಿ ಈಗ ಬೆಳೆ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಲಿಂಬವ್ವ ಹೊನಗೇರಿ ಎಂಬುವವರ ಜಮೀನಿನಲ್ಲಿ ಸುಮಾರು ಆರು ಕ್ವಿಂಟಲ್​ಗಿಂತಲೂ ಹೆಚ್ಚಿಗೆ ಹಸಿ ಮೆಣಸಿನಕಾಯಿ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿದ ಕಳ್ಳರು ಬೆಳೆದಿರುವ ಮೆಣಸಿನಕಾಯಿ ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಬೇಕಾಬಿಟ್ಟಿಯಾಗಿ ಮೆಣಸಿನಕಾಯಿ ಗಿಡ ಕಿತ್ತು ಬಿಸಾಕಿ ಪರಾರಿಯಾಗಿದ್ದಾರೆ. ಸುಮಾರು ಮೂರು ಕ್ವಿಂಟಲ್​ಗೂ ಅಧಿಕ ಮೆಣಸಿನಕಾಯಿಯನ್ನು ಹೊತ್ತೊಯ್ದಿದ್ದಾರೆ ಎನ್ನಲಾಗ್ತಿದೆ. ಉಳಿದದ್ದನ್ನು ಹೊಲದಲ್ಲಿಯೇ ಬಿಸಾಡಿ ಎಲ್ಲೆಂದರಲ್ಲಿ ಬೆಳೆಯನ್ನ ತುಳಿದು, ಮೆಣಸಿನ ಕಾಯಿ ಗಿಡಗಳನ್ನು ಸಹ ಕಿತ್ತು ಹಾಕಿ ಪರಾರಿಯಾಗಿದ್ದಾರೆ.

ಕಣ್ಣೀರು ತರಿಸುತ್ತಿದೆ ಕಳ್ಳರ ಆಟ: ತಿಮ್ಮಾಪುರ ಗ್ರಾಮದಲ್ಲಿ ಕೇವಲ ಲಿಂಬವ್ವ ಹೊನಗೇರಿ ಇವರಷ್ಟೇ ಅಲ್ಲದೆ ಇನ್ನೊಬ್ಬರಾದ ಚೆನ್ನಪ್ಪ ಹೊನಗೇರಿ ಎಂಬುವರ ಜಮೀನಿನಲ್ಲಿಯೂ ಸಹ ಇದೇ ರೀತಿ ಮೆಣಸಿನಕಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಲಕ್ಷಾಂತರ ಆದಾಯದ ಮೆಣಸಿನಕಾಯಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ ಅಂತ ಜಮೀನು ಮಾಲೀಕರು ಕಣ್ಣೀರು ಹಾಕಿದ್ದಾರೆ. ಇನ್ನು ಹೊಲದಲ್ಲಿ ಬಿದ್ದಿದ್ದ ಮೆಣಸಿನ ಕಾಯಿ ಗಿಡಗಳನ್ನು ನೋಡಿ ರೈತ ಮಹಿಳೆ ಅಂಬವ್ವ ಒಂದು ಕ್ಷಣ ದಿಗಿಲು ಬಡಿದಂತೆ ಕೂತಿದ್ದಾರೆ. ಕಳ್ಳರಗೆ ಹಿಡಿ ಶಾಪ ಹಾಕಿದ್ದಾರೆ. ಏನ್ ಮಾಡಬೇಕು ಅಂತ ದಿಕ್ಕು ದೋಚುತ್ತಿಲ್ಲಾ ಅಂತಿದ್ದಾರೆ. ವರ್ಷಗಟ್ಟಲೆ ಕಷ್ಟ ಪಟ್ಟು ಶ್ರಮ ಪಟ್ಟಿದ್ದ ಆದಾಯ ಕಳ್ಳರ ಪಾಲಾಯ್ತಲ್ಲಾ ಅಂತ ರೈತರು ಕೊರಗುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಇಂತಹ ಬೆಳೆ ಕಳ್ಳರಿಂದ ರೈತರನ್ನ ರಕ್ಷಣೆ ಮಾಡಬೇಕು ಅಂತ ರೈತರು ಒತ್ತಾಯ ಮಾಡ್ತಿದ್ದಾರೆ.

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್