CM ಎದುರಲ್ಲೇ ಯಡಿಯೂರಪ್ಪ ಸತ್ತಾನಪ್ಪೋ ಅಂತಾ ಧಿಕ್ಕಾರ ಕೂಗಿದ ರೈತರು
ಬೆಳಗಾವಿ: ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಇಂದು ಸಿಎಂ ಯಡಿಯೂರಪ್ಪ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು. ಈ ವೇಳೆ ನೆರೆ ಪರಿಹಾರ ನೀಡಬೇಕು ಜೊತೆಗೆ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಾಸ್ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಕೆಲ ರೈತರು ಮುಂದಾದರು. ಆದರೆ, ಸಿಎಂ ಯಡಿಯೂರಪ್ಪ ರೈತರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರೈತರು ಪ್ರತಿಭಟನೆಗೆ ಇಳಿದರು. ಸಾಂಬ್ರಾ ವಿಮಾನ ನಿಲ್ದಾಣ ಬಳಿಯಿರುವ ಬೆಳಗಾವಿ-ಬಾಗಲಕೋಟೆ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು […]

ಬೆಳಗಾವಿ: ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಇಂದು ಸಿಎಂ ಯಡಿಯೂರಪ್ಪ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು.

ಈ ವೇಳೆ ನೆರೆ ಪರಿಹಾರ ನೀಡಬೇಕು ಜೊತೆಗೆ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಾಸ್ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಕೆಲ ರೈತರು ಮುಂದಾದರು. ಆದರೆ, ಸಿಎಂ ಯಡಿಯೂರಪ್ಪ ರೈತರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರೈತರು ಪ್ರತಿಭಟನೆಗೆ ಇಳಿದರು. ಸಾಂಬ್ರಾ ವಿಮಾನ ನಿಲ್ದಾಣ ಬಳಿಯಿರುವ ಬೆಳಗಾವಿ-ಬಾಗಲಕೋಟೆ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದರು.
ಸಿಎಂ ಎದುರಲ್ಲೇ ಸಿಎಂ ಯಡಿಯೂರಪ್ಪಗೆ ಧಿಕ್ಕಾರ ಎಂದು ಕೂಗಲು ಆರಂಭಿಸಿದ ರೈತರು ಅಷ್ಟಕ್ಕೇ ಸುಮ್ಮನಾಗದೆ ಯಡಿಯೂರಪ್ಪ ಸತ್ತಾನಪ್ಪೋ ಅಂತಾ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರು ಸಿಎಂ ಭೇಟಿ ಮಾಡಿಸುತ್ತೇವೆ ಅಂತಾ ಕರೆದುಕೊಂಡು ಬಂದು ಇದೀಗ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ತಮ್ಮ ಸಿಟ್ಟು ಹೊರಹಾಕಿದರು.




