ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ‘ತಾಂಡವ್’ ಚಿತ್ರತಂಡದ ವಿರುದ್ಧ ಬೆಂಗಳೂರಿನಲ್ಲಿ FIR

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 24, 2021 | 3:50 PM

ತಾಂಡವ್ ವೆಬ್ ಸಿರಿಸ್​ನಲ್ಲಿ ಹಿಂದೂಗಳ ಪೂಜಿಸುವ ಶಿವನನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನಟರು ಕೆಟ್ಟ ಭಾಷೆಯ ಪ್ರಯೋಗ ಮಾಡಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ರೀತಿ ಚಿತ್ರಿಸಲಾಗಿದೆ ಎಂದು ದೂರಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ‘ತಾಂಡವ್’ ಚಿತ್ರತಂಡದ ವಿರುದ್ಧ ಬೆಂಗಳೂರಿನಲ್ಲಿ FIR
ತಾಂಡವ್ ವೆಬ್ ಸಿರೀಸ್​ನ ಒಂದು ದೃಶ್ಯ
Follow us on

ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಆರೋಪದ ಮೇಲೆ ಬೆಂಗಳೂರಿನ ಸಮಾಜ ಸೇವಕರೊಬ್ಬರು ‘ತಾಂಡವ್’ ವೆಬ್​ ಸಿರಿಸ್​ನ ನಿರ್ದೇಶಕ, ನಿರ್ಮಾಪಕ ಮತ್ತು ಪ್ರಮುಖ ನಟರ ಮೇಲೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ತಾಂಡವ್ ವೆಬ್ ಸಿರಿಸ್​ನಲ್ಲಿ ಹಿಂದೂಗಳು ಪೂಜಿಸುವ ಶಿವನನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ತೆರೆಯ ಮೇಲೆ ನಟಿಸಿರುವ ನಟರು ಕೆಟ್ಟ ಭಾಷೆಯ ಪ್ರಯೋಗ ಮಾಡಿದ್ದಾರೆ. ವೆಬ್ ಸಿರಿಸ್​ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಹಾಗೂ ನೋಯಿಸುವ ರೀತಿ ಚಿತ್ರಿಸಲಾಗಿದೆ ಎಂದು ಕಿರಣ್ ಆರಾಧ್ಯ ಎಂಬ ದೂರಿನಲ್ಲಿ ತಿಳಿಸಿದ್ದಾರೆ.

ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರ್ಹಾನ್ ಅಖ್ತರ್, ನಟರಾದ ಸೈಫ್ ಅಲಿ ಖಾನ್, ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಅಪರ್ಣಾ ಪುರೋಹಿತ್​ರ ಹೆಸರಿನಲ್ಲಿ FIR ದಾಖಲಾಗಿದೆ. ‘ವಿವಾದಾತ್ಮಕ ದೃಶ್ಯಗಳನ್ನು ಇತ್ತೀಚೆಗೆ ತೆಗೆದುಹಾಕಲಾಗಿದೆ ಎಂದು ನಮಗೆ ತಿಳಿಸಿದ ನಂತರ ಹೆಚ್ಚಿನ ತನಿಖೆಗಾಗಿ ನಾವು ಕಾನೂನು ತಜ್ಜ್ಞರ ಅಭಿಪ್ರಾಯವನ್ನು ಕೋರಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೂಡ ತಾಂಡವ್ ವೆಬ್ ಸಿರೀಸ್​ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಸಿನಿಮಾ ವಿರುದ್ಧ ಕೇಳಿ ಬಂದಿತ್ತು. ಆಗ ತಾಂಡವ್ ತಂಡ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆಯಾಚಿಸಿತ್ತು.

ಜನರ ಬಳಿ ಬೇಷರತ್ ಕ್ಷಮೆ ಯಾಚಿಸಿದ ತಾಂಡವ್​ ಸಿನಿಮಾ ತಂಡ