ರೈತ ಪ್ರತಿಭಟನೆಯ ‘ಕಿಚ್ಚು’: ಧರಣಿ ವೇಳೆ ಸ್ವಲ್ಪದರಲ್ಲೇ ತಪ್ಪಿದ ಅಗ್ನಿ ಅನಾಹುತ

  • Publish Date - 11:13 am, Sun, 27 September 20
ರೈತ ಪ್ರತಿಭಟನೆಯ ‘ಕಿಚ್ಚು’: ಧರಣಿ ವೇಳೆ ಸ್ವಲ್ಪದರಲ್ಲೇ ತಪ್ಪಿದ ಅಗ್ನಿ ಅನಾಹುತ

ಬೆಂಗಳೂರು: ನಿನ್ನೆ ನಡೆದ ರೈತರ ಪ್ರತಿಭಟನೆಯ ವೇಳೆ ಅಗ್ನಿ ಅವಘಡವೊಂದು ಸಂಭವಿಸಿದೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ ಮೌರ್ಯ ಸರ್ಕಲ್​ ಬಳಿ ನೆರೆದಿದ್ದ ರೈತರು ಪ್ರತಿಭಟನೆಗೆ ಮುಂದಾದರು. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ‌ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು.

ಈ ವೇಳೆ ರೈತರು ಸರ್ಕಾರದ ಪ್ರತಿಕೃತಿಯ ಶವಯಾತ್ರೆಗೆ ಮುಂದಾದ್ರು. ಕೊನೆಗೆ, ಪ್ರತಿಕೃತಿಗೆ ಚಟ್ಟ ಮಾಡಿ ಬೆಂಕಿ ಹಚ್ಚಲು‌ ಮುಂದಾದರು. ಈ ನಡುವೆ ಮಫ್ತಿಯಲ್ಲಿದ್ದ ಕೆಲವು ಪೊಲೀಸರು ಪ್ರತಿಕೃತಿಯನ್ನು ಕಸಿಯಲು ಮುಂದಾದರು. ಆಗ, ಸ್ಥಳದಲ್ಲೇ ಇದ್ದ ರೈತನೊಬ್ಬ ಗಡಿಬಿಡಿಯಲ್ಲಿ ಚಟ್ಟಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಮುಂದಾದ.

ಚಟ್ಟಕ್ಕೆ ಬೆಂಕಿ ಹಚ್ಚುತ್ತಿದ್ದಂತೆ ಅದು ಇದಕ್ಕಿದಂತೆ ಧಗಧಗನೆ ಹೊತ್ತಿ ಉರಿದು ಅಲ್ಲೇ ಇದ್ದ ರೈತ ಹಾಗೂ ಇನ್​ಸ್ಪೆಕ್ಟರ್ ಒಬ್ಬರ ಕೈಗೆ ಬೆಂಕಿ ತಗುಲಿತು. ಅದೃಷ್ಟವಶಾತ್, ಸ್ಥಳದಲ್ಲಿದವರು ಬಹುಬೇಗ ಅಲ್ಲಿಂದ ದೂರ ಸರಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಕೂಡಲೇ ಸ್ಥಳದಲ್ಲಿದ್ದ ಇತರೆ ರೈತರು ಹಾಗೂ ಪೊಲೀಸರು ಅಲ್ಲಿಗೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಅಗ್ನಿ ಅವಘಡದಲ್ಲಿ ರೈತ ಮತ್ತು ಇನ್​ಸ್ಪೆಕ್ಟರ್​ಗೆ ಸಣ್ಣಪುಟ್ಟ ಗಾಯಗಳಾದವು.

Click on your DTH Provider to Add TV9 Kannada