ಎಟಿಎಂನಿಂದ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆ ಸೆರೆ
ಶಿವರಾಂ ಕಾರಂತ ನಗರದ ಎಸ್ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದ್ದು, 2 ಎಟಿಎಂಗಳ ಫೈಕಿ ಒಂದು ಎಟಿಎಂಗೆ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ ಸ್ಪೇನ್ ದೇಶದ ಮಹಿಳೆ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ.
ಬೆಂಗಳೂರು: ಎಟಿಎಂನಲ್ಲಿ ಡಿವೈಸ್ ಸೆಟ್ ಮಾಡಿ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂದಿಸಿದ್ದಾರೆ.
ಶಿವರಾಮ ಕಾರಂತ ನಗರದ ಎಸ್ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದ್ದು, 2 ಎಟಿಎಂಗಳ ಫೈಕಿ ಒಂದು ಎಟಿಎಂಗೆ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ ಸ್ಪೇನ್ ದೇಶದ ಮಹಿಳೆ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ.
ವಿದೇಶಿ ಲೇಡಿಯ ಕೈಚಳ ನೋಡಿ ಒಂದು ಕ್ಷಣ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಆಗಿದ್ದು, ಒಂದು ಡಿವೈಸ್ನಿಂದ ಬರೋಬ್ಬರಿ 18 ಲಕ್ಷ ಹಣವನ್ನು ಈ ಖತರ್ನಾಕ್ ಲೇಡಿ ಎಗರಿಸಿದ್ದಾಳೆ. ಸದ್ಯ 1500 ರೂಪಾಯಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕನಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು, ಕೂಡಲೇ ಬ್ಯಾಂಕ್ ಮ್ಯಾನೇಜರ್ಗೆ ಗ್ರಾಹಕ ಮಾಹಿತಿ ನೀಡಿದ್ದಾನೆ. ಗ್ರಾಹಕನ ದೂರಿನ ಮೇರೆಗೆ ಎಟಿಎಂ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾಲೀಕ ಮನೆಯಲ್ಲಿ ಇದ್ದಾಗಲೇ ಕಳ್ಳತನ: ಕಿಟಕಿ ಮೂಲಕ ಪರ್ಸ್ನಲ್ಲಿದ್ದ 50 ಸಾವಿರ ಕದ್ದೊಯ್ದ ಖದೀಮ