ಬೆಳಗಾವಿ ಅಧಿವೇಶನ: ಹಕ್ಕುಚ್ಯುತಿ ಪ್ರಸ್ತಾವನೆ ಮಂಡನೆಯಾದಾಗ ಮಾತಾಡಿದ ಸಚಿವ ಖಂಡ್ರೆ ಮೇಲೆ ಬಿಜೆಪಿ ಶಾಸಕರ ವಾಗ್ದಾಳಿ

ಬೆಳಗಾವಿ ಅಧಿವೇಶನ: ಹಕ್ಕುಚ್ಯುತಿ ಪ್ರಸ್ತಾವನೆ ಮಂಡನೆಯಾದಾಗ ಮಾತಾಡಿದ ಸಚಿವ ಖಂಡ್ರೆ ಮೇಲೆ ಬಿಜೆಪಿ ಶಾಸಕರ ವಾಗ್ದಾಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2023 | 6:26 PM

ಸಚಿವರು ತಮ್ಮ ಸಮಜಾಯಿಷಿ ನೀಡಲಿ ಅಂತ ಸ್ಪೀಕರ್ ಹೇಳಿದಾಗ ಸುನೀಲ್ ಕುಮಾರ್, ಅದಕ್ಕೆ ಅವಕಾಶವಿಲ್ಲ, ನಿಯಮಾವಳಿಗಳ ಪ್ರಕಾರ ಹಕ್ಕುಚ್ಯುತಿ ಮಂಡನೆಯಾದಾಗ ಸಭಾಧ್ಯಕ್ಷರು ತಮ್ಮ ನಿರ್ಣಯ ಹೇಳಬೇಕು ಎಂದು ಹೇಳಿದಾಗ ಬೇರೆ ಬಿಜೆಪಿ ಶಾಸಕರು ಧ್ವನಿಗೂಡಿಸುತ್ತಾರೆ. ಸ್ಪೀಕರ್ ಮತ್ತು ಸಚಿವ ಇಬ್ಬರೂ ಉತ್ತರ ಇಲ್ಲದಂತಾಗುತ್ತಾರೆ.

ಬೆಳಗಾವಿ: ವಿಧಾನ ಮಂಡಲ ಚಳಿಗಾಲದ ಅಧಿವೇಶನದ ಎರಡನೇ ದಿನವಾಗಿದ್ದ ಇಂದು ಸುವರ್ಣ ಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ರಿಸೀವಿಂಗ್ ಎಂಡ್ ನಲ್ಲಿದ್ದರು. ವಿರೋಧ ಪಕ್ಷ ಬಿಜೆಪಿ ಶಾಸಕರಾದ ಸುನೀಲ್ ಕುಮಾರ (Sunil Kumar), ಸುರೇಶ್ ಕುಮಾರ್ (Suresh Kumar) ಮತ್ತು ಪ್ರಭು ಚೌಹಾನ್ (Prabhu Chouhan) ಅವರ ವಾಗ್ದಾಳಿಗೆ ಖಂಡ್ರೆ ಒಂದೆರಡು ಬಾರಿ ನಿರುತ್ತರಾದರು. ವಿಷಯವವೊಂದಕ್ಕೆ ಸಂಬಂಧಿಸಿದಂತೆ, ಮಾಧ್ಯಮಗಳಿಗೆ ಸಚಿವ ಖಂಡ್ರೆ ತಪ್ಪು ಮಾಹಿತಿ ನೀಡಿರುವರೆಂದು ಅವರ ವಿರುದ್ಧ ಸದನದಲ್ಲಿ ಬಿಜೆಪಿ ನಾಯಕರು ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಿದಾಗ ಖಂಡ್ರೆ ಅದಕ್ಕೆ ಸಮಜಾಯಿಷಿ ನೀಡಲು ಎದ್ದು ನಿಂತರು. ಅಗಲೇ ಬಿಜೆಪಿ ಶಾಸಕರು ಅದರಲ್ಲೂ ವಿಶೇಷವಾಗಿ ಸುನೀಲ ಕುಮಾರ್ ಸಚಿವರಿಗೆ ಮಾತಾಡುವ ಅವಕಾಶ ನೀಡಬಾರದು, ಅಂತ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಮನವಿ ಮಾಡಿದರು. ಸಚಿವರು ತಮ್ಮ ಸಮಜಾಯಿಷಿ ನೀಡಲಿ ಅಂತ ಸ್ಪೀಕರ್ ಹೇಳಿದಾಗ ಸುನೀಲ್ ಕುಮಾರ್, ಅದಕ್ಕೆ ಅವಕಾಶವಿಲ್ಲ, ನಿಯಮಾವಳಿಗಳ ಪ್ರಕಾರ ಹಕ್ಕುಚ್ಯುತಿ ಮಂಡನೆಯಾದಾಗ ಸಭಾಧ್ಯಕ್ಷರು ತಮ್ಮ ನಿರ್ಣಯ ಹೇಳಬೇಕು ಎಂದು ಹೇಳಿದಾಗ ಬೇರೆ ಬಿಜೆಪಿ ಶಾಸಕರು ಧ್ವನಿಗೂಡಿಸುತ್ತಾರೆ. ಸ್ಪೀಕರ್ ಮತ್ತು ಸಚಿವ ಇಬ್ಬರೂ ಉತ್ತರ ಇಲ್ಲದಂತಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ