AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುತ್ವದ ಬಗ್ಗೆ ಮಾತನಾಡೋರ ಹೃದಯದಲ್ಲಿ ಹಿಂದುತ್ವ ಇದ್ಯಾ? -H.D.ಕುಮಾರಸ್ವಾಮಿ ಪ್ರಶ್ನೆ

HD Kumaraswamy ಎಲ್ಲಿದೆ ಸೆಕ್ಯೂಲರಿಸಂ ? ಎಲ್ಲಿದೆ ಹಿಂದುತ್ವ? ಈಗ ಅಹಿಂದ ಅಂತಿದ್ದಾರಲ್ಲ ಅದರಲ್ಲಿ‌ ಇದ್ಯಾ ಸೆಕ್ಯೂಲರಿಸಂ? ಅಥವಾ ಹಿಂದುತ್ವದ ಬಗ್ಗೆ ಮಾತನಾಡುವವರ ಹೃದಯದಲ್ಲಿ ಹಿಂದುತ್ವ ಇದ್ಯಾ? ಎಂದು ಮಾಜಿ‌ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನೆ‌ ಹಾಕಿದರು.

ಹಿಂದುತ್ವದ ಬಗ್ಗೆ ಮಾತನಾಡೋರ ಹೃದಯದಲ್ಲಿ ಹಿಂದುತ್ವ ಇದ್ಯಾ? -H.D.ಕುಮಾರಸ್ವಾಮಿ ಪ್ರಶ್ನೆ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
KUSHAL V
|

Updated on:Feb 23, 2021 | 8:13 PM

Share

ಮೈಸೂರು: ಉಳ್ಳಾಲದಲ್ಲಿ BJP ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ? ಯಾವ ಸಂಘಟನೆಯನ್ನು ಬ್ಯಾನ್ ಮಾಡಬೇಕು ಅಂತಿದ್ದಾರೋ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನದಲ್ಲಿ ಇಂಥ ವಿಷಯಗಳನ್ನು ಜನರ ಮುಂದೆ ಇಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

2023ಕ್ಕೆ ಜನರು JDS ಪಕ್ಷವನ್ನು ಗುರುತಿಸಬೇಕು. ಅದಕ್ಕೆ ನಿರ್ಧಾರ ಮಾಡಲಾಗಿದೆ. ನಾವು ಹಿಂದುತ್ವ, ಸೆಕ್ಯೂಲರಿಸಂ ಯಾವ ವಿಚಾರದ ಮೇಲೂ ಚುನಾವಣೆ ಎದುರಿಸುವುದಿಲ್ಲ. 224 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಇರುತ್ತಾರೆ. ಮುಂದಿನ ಜಿ.ಪಂ, ತಾ.ಪಂ ಚುನಾವಣೆಯಲ್ಲೂ ನಮ್ಮದೆ ಅಭ್ಯರ್ಥಿ ಇರುತ್ತಾರೆ. ಚುನಾವಣೆಯಲ್ಲಿ ಸೀಟು ಹಂಚಿಕೆ ಹೊಂದಾಣಿಕೆ ಮಾತೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

‘ಎಲ್ಲಿದೆ ಸೆಕ್ಯೂಲರಿಸಂ ? ಎಲ್ಲಿದೆ ಹಿಂದುತ್ವ?’ ಎಲ್ಲಿದೆ ಸೆಕ್ಯೂಲರಿಸಂ ? ಎಲ್ಲಿದೆ ಹಿಂದುತ್ವ? ಈಗ ಅಹಿಂದ ಅಂತಿದ್ದಾರಲ್ಲ ಅದರಲ್ಲಿ‌ ಇದ್ಯಾ ಸೆಕ್ಯೂಲರಿಸಂ? ಅಥವಾ ಹಿಂದುತ್ವದ ಬಗ್ಗೆ ಮಾತನಾಡುವವರ ಹೃದಯದಲ್ಲಿ ಹಿಂದುತ್ವ ಇದ್ಯಾ? ಎಂದು ಮಾಜಿ‌ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನೆ‌ ಹಾಕಿದರು. ಹಿಂದುತ್ವವನ್ನು ಕಾಪಾಡೋರು ಅದನ್ನ ಆಚರಣೆ ಮಾಡ್ತಿದ್ದಾರಾ? ಸೆಕ್ಯೂಲರಿಸಂ ಬಗ್ಗೆ ಮಾತನಾಡೋರು ಅದನ್ನ ಪಾಲಿಸುತ್ತಿದ್ದಾರಾ? ಎಲ್ಲರು ಸುಮ್ಮನೆ ತಮ್ಮ ರಾಜಕೀಯ ಲಾಭಕ್ಕಾಗಿ ಇದನ್ನ ಮಾತನಾಡುತ್ತಾರೆ. ಆದರೆ ಯಾರೊಬ್ಬರು ಈ ಬಗ್ಗೆ ಪ್ರಾಮಾಣಿಕತೆ ಇಟ್ಟುಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಕನಸು ಕಾಣುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ನಾನೇ ಸಿಎಂ ಅಂತಾ ಘೋಷಣೆ ಮಾಡಿಕೊಂಡಿದ್ದಾರೆ. ಇವರು ಹೋದ ಮೇಲೆ ಕಾಂಗ್ರೆಸ್ ಸಂಸ್ಕೃತಿಯೇ ಬದಲಾಗಿದೆ. ಸಿದ್ದರಾಮಯ್ಯ ಹೋದ ಮೇಲೆ ಅವರದ್ದೇ ವೇದ ವಾಕ್ಯವಾಗಿದೆ. ನಮ್ಮ ಪಕ್ಷವನ್ನ ತುಚ್ಛವಾಗಿ ಕಾಣುವ ಇವರ ಜೊತೆ ಏನು ಹೊಂದಾಣಿಕೆ ಮಾಡಿಕೊಳ್ಳೋದು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಈ ಮೀಸಲಾತಿ ವಿಚಾರ ಕವಲುದಾರಿ ಹಿಡಿದಿದೆ’ ಈ ಮೀಸಲಾತಿ ವಿಚಾರ ಕವಲುದಾರಿ ಹಿಡಿದಿದೆ. ಮಿಸಲಾತಿ ಎಂಬ ವಿಷಯದಲ್ಲಿ ದೊಡ್ಡ ಮೀನು ಸಣ್ಣ ಮೀನನ್ನ ನುಂಗಿ ಹಾಕಿದೆ. ಇದರ ಹಿಂದೆ ರಾಜಕಾರಣಿಗಳು ಇದ್ದಾರೆ. ಆದರೆ ಸ್ವಾಮೀಜಿಗಳನ್ನು ಮುಂದೆ ಬಿಟ್ಟಿದ್ದಾರೆ. ಸರ್ಕಾರ ವಾಸ್ತವಾಂಶ ನೋಡಿ ತೀರ್ಮಾನ ಕೈಗೊಳ್ಳಬೇಕು. ಒಕ್ಕಲಿಗ ಸಮುದಾಯಕ್ಕೆ ಯಾವ ರೀತಿ ಮಿಸಲಾತಿ ಬೇಕು ಈಗ?ಈ ವಿಚಾರವಾಗಿ ನನ್ನನ್ನ ಯಾರು ಸಂಪರ್ಕ ಮಾಡಿಲ್ಲ. ನನ್ನ ಅಭಿಪ್ರಾಯವನ್ನು ಕೇಳಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಮಗೆ ಈಗ 4% ಇದೆ. ಅದನ್ನ 10%ಗೆ ಏರಿಕೆ ಮಾಡಬೇಕು ಅಂತಾ ಒಕ್ಕಲಿಗರು ಕೇಳಿದ್ದಾರೆ. 10% ಏರಿಕೆ ಆಗೋದ್ದಕ್ಕೆ ನಾವು ಯಾವುದಕ್ಕೆ ಶಿಫ್ಟ್ ಆಗಬೇಕು? ಕುರುಬರು 15% ಇರೋರು 3%ಗೆ ಕೇಳ್ತಿದ್ದಾರೆ. ಅವರು ಅವರ ಮೀಸಲಾತಿ ಪ್ರಮಾಣವನ್ನ ಇಳಿಸಿ ಅಂತಿದ್ದಾರೆ. ಹಾಗಾದ್ರೆ, ಒಕ್ಕಲಿಗರು 10% ಏರಿಕೆ ಮಾಡಿಕೊಳ್ಳೋದ್ದಕ್ಕೆ ಎಲ್ಲಿ ಶಿಫ್ಟ್ ಆಗಬೇಕು? ನಮ್ಮ ಸಮಯದಾಯದ ಸ್ವಾಮೀಜಿ ಜೊತೆ ಕೆಲ ಮುಖಂಡರು ಮನವಿ ಮಾಡಿದ್ದಾರೆ. ನೋಡೋಣ ಸರ್ಕಾರ ಏನ್ ಮಾಡುತ್ತೆ ಅಂತಾ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

‘ಜಿ.ಟಿ.ದೇವೇಗೌಡ ಮುಂದಿನ 2 ವರ್ಷ JDSನಲ್ಲೇ ಇರುತ್ತಾರೆ’ ಜಿ.ಟಿ.ದೇವೇಗೌಡ ಮುಂದಿನ 2 ವರ್ಷ JDSನಲ್ಲೇ ಇರುತ್ತಾರೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಂತರವೂ ಮನಪರಿವರ್ತನೆಯಾಗಿ ಪಕ್ಷದಲ್ಲೇ ಇರಬಹುದು. ನಾಳೆಯ ಪಾಲಿಕೆ ಚುನಾವಣೆಯಲ್ಲೂ JDS‌ ಪರವೇ ಜಿಟಿಡಿ ಮತ ಹಾಕುತ್ತಾರೆಂಬ ವಿಶ್ವಾಸವಿದೆ. JDS‌ ಪಕ್ಷ ತ್ಯಜಿಸಿದ್ದೇನೆಂದು ಜಿಟಿಡಿ ಎಲ್ಲಿಯೂ ಹೇಳಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಕಾಂಗ್ರೆಸ್, ಬಿಜೆಪಿ ನಮ್ಮನ್ನ ಹೀನಾಯವಾಗಿ ನಡೆಸಿಕೊಂಡಿವೆ’ ಮೈಸೂರು ಮೇಯರ್, ಉಪ‌ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ತಟಸ್ಥವಾಗಿ ಇರೋಣ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ನಾಳೆ ಬೆಳಗ್ಗೆ ಅಂತಿಮ ನಿರ್ಧಾರ ಹೇಳುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್, ಬಿಜೆಪಿ ನಮ್ಮನ್ನ ಹೀನಾಯವಾಗಿ ನಡೆಸಿಕೊಂಡಿವೆ. ಈ ಬಗ್ಗೆ ನಮ್ಮ ಪಾಲಿಕೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಸದಸ್ಯರು ತಟಸ್ಥವಾಗಿರೋಣವೆಂಬ ಮಾಹಿತಿ ನೀಡಿದ್ದಾರೆ. ಅದನ್ನು ಪರಿಗಣಿಸಿ ಸದ್ಯಕ್ಕೆ ತಟಸ್ಥ ನಿಲುವಿಗೆ ಬಂದಿದ್ದೇವೆ ಎಂದು ಹೇಳಿದರು.

ನಾಳೆ ಬೆಳಗ್ಗೆ 7 ಗಂಟೆಯೊಳಗೆ ನಮ್ಮ ನಿಲುವು ತಿಳಿಸುತ್ತೇವೆ. ದೇವೇಗೌಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸ್ತೇನೆ. ದೇವೇಗೌಡರ ಜತೆ ಮಾತುಕತೆ ಬಳಿಕ ಅಂತಿಮ ನಿರ್ಧಾರ. ನಮಗೆ ಎರಡೂ ಪಕ್ಷಗಳ ಮೇಲೂ ಒಲವಿಲ್ಲ ಅಂತಾ ಹೇಳಿದರು. ಮೈಸೂರಿನಿಂದ ಜೆಡಿಎಸ್​​​ ಹೊಸ ಸಂದೇಶ ರವಾನಿಸುತ್ತೆ. ಅದಕ್ಕಾಗಿಯೇ ನಾನೇ ಈ ಬಗ್ಗೆ ಮುತುವರ್ಜಿ ವಹಿಸಿದ್ದೇನೆ. ಎಂದು H.D.ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ‘ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ ಸಂಸತ್‌ನಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳ್ತಾರೆ’

Published On - 8:01 pm, Tue, 23 February 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು