‘CD ಬೆಳವಣಿಗೆ ಡೈವರ್ಟ್ ಮಾಡಲು ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇವರೇ ಸೃಷ್ಟಿಸಿದಂತಿದೆ’

ರಮೇಶ್​ ಜಾರಕಿಹೊಳಿ CD ಬೆಳವಣಿಗೆಯನ್ನು ಡೈವರ್ಟ್ ಮಾಡಲು ಬೆಳಗಾವಿ ನಗರ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇವರೇ ಸೃಷ್ಟಿಸಿದಂತಿದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು. ಜೊತೆಗೆ, CD ಹಿಂದೆ ಮಹಾನಾಯಕರ ಕೈವಾಡವಿದೆ ಎಂದು ನಾನು ಹೇಳಿಲ್ಲ. ಮಹಾನಾಯಕರ ಕೈವಾಡವಿದೆ ಎಂದು ರಮೇಶ್​ ಆರೋಪಿಸಿದ್ರು.

‘CD ಬೆಳವಣಿಗೆ ಡೈವರ್ಟ್ ಮಾಡಲು ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇವರೇ ಸೃಷ್ಟಿಸಿದಂತಿದೆ’
‘CD ಬೆಳವಣಿಗೆ ಡೈವರ್ಟ್ ಮಾಡಲು ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇವರೇ ಸೃಷ್ಟಿಸಿದಂತಿದೆ’
Follow us
KUSHAL V
|

Updated on: Mar 15, 2021 | 7:51 PM

ಕೋಲಾರ: ರಮೇಶ್​ ಜಾರಕಿಹೊಳಿ CD ಬೆಳವಣಿಗೆಯನ್ನು ಡೈವರ್ಟ್ ಮಾಡಲು ಬೆಳಗಾವಿ ನಗರ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇವರೇ ಸೃಷ್ಟಿಸಿದಂತಿದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು. ಜೊತೆಗೆ, CD ಹಿಂದೆ ಮಹಾನಾಯಕರ ಕೈವಾಡವಿದೆ ಎಂದು ನಾನು ಹೇಳಿಲ್ಲ. ಮಹಾನಾಯಕರ ಕೈವಾಡವಿದೆ ಎಂದು ರಮೇಶ್​ ಆರೋಪಿಸಿದ್ರು. ಪ್ರಕರಣದಲ್ಲಿ ಎಸ್​ಐಟಿ ತನಿಖೆ ಮಾಡಿದಂತೆ ಸಾರಿಸುತ್ತಾರೆ. ಅದರಿಂದ ಏನೂ ಆಗಲ್ಲ. ಯಾರಿಂದ ಯಾರಿಗೆ ಅನ್ಯಾಯವಾಗಿದೆ ಎಂದು ಹೇಳಬೇಕು. ವಿಶೇಷ ತನಿಖಾ ತಂಡದವರೇ ಹೇಳಬೇಕು, ನಾನೇಳಲಾಗಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

‘ಕಾಂಗ್ರೆಸ್​ ಪಕ್ಷದ ಜೊತೆ ಜೆಡಿಎಸ್​ ಮೈತ್ರಿ ಪ್ರಶ್ನೆಯೇ ಇಲ್ಲ’ ಕಾಂಗ್ರೆಸ್​ ಪಕ್ಷದ ಜೊತೆ ಜೆಡಿಎಸ್​ ಮೈತ್ರಿ ಪ್ರಶ್ನೆಯೇ ಇಲ್ಲ. ನಾನು ಅವ್ರ ಮನೆ ಬಾಗಿಲಿಗೆ ಅರ್ಜಿ ಹಾಕಿಕೊಂಡು ಹೋಗಿಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

ನನ್ನ ಕಾರ್ಯಕರ್ತರ ದುಡಿಮೆಯಿಂದ ಪಕ್ಷ ಬಲವರ್ಧನೆ ಆಗಿದೆ. ಅವರ ಮನೆ ಬಾಗಿಲಿಗೆ ಹೋಗೋ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೆಚ್​​ಡಿಕೆ ಹೇಳಿದರು. ಮೈತ್ರಿ ಬೇಕೆಂದು ಬಂದಿದ್ದು, ಕೈಕೊಟ್ಟಿದ್ದು ಕಾಂಗ್ರೆಸ್​ನವರು ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ SIT ನೋಟಿಸ್