AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ!

ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಚಾರಣೆ ನಡೆಸುತ್ತಿರುವ ನಿರೂಪಕಿ–ನಟಿ ಅನುಶ್ರೀ ಪ್ರಕರಣಕ್ಕೆ ಇವತ್ತು ರೋಚಕ ತಿರುವು ಸಿಕ್ಕಿದೆ. ಸಿಸಿಬಿ ತಮಗೆ ನೊಟೀಸು ಜಾರಿ ಮಾಡಿದಾಕ್ಷಣ ಅನುಶ್ರೀ ಕೆಲವು ಪ್ರಭಾವಿ ರಾಜಕೀಯ ನಾಯಕರಿಗೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡ ವಿಷಯ ಶುಕ್ರವಾರದಂದು ಮಾಧ್ಯಮಗಳಿಗೆ ಸಿಕ್ಕಿತ್ತು. ಅದರೆ ಆ ಪ್ರಭಾವಿ ನಾಯಕರ ಹೆಸರುಗಳು ಬಹಿರಂಗಗೊಂಡಿರಲಿಲ್ಲ. ಆದರೆ, ಎರೆಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಇಂದು ತಾವಾಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅನುಶ್ರೀ ಯಾರಿಗೆ ಫೋನ್ ಮಾಡಿದ್ದು ಅಂತ ಕೇಳಿದರು. […]

ಅನುಶ್ರೀ ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 03, 2020 | 9:06 PM

Share

ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಚಾರಣೆ ನಡೆಸುತ್ತಿರುವ ನಿರೂಪಕಿ–ನಟಿ ಅನುಶ್ರೀ ಪ್ರಕರಣಕ್ಕೆ ಇವತ್ತು ರೋಚಕ ತಿರುವು ಸಿಕ್ಕಿದೆ. ಸಿಸಿಬಿ ತಮಗೆ ನೊಟೀಸು ಜಾರಿ ಮಾಡಿದಾಕ್ಷಣ ಅನುಶ್ರೀ ಕೆಲವು ಪ್ರಭಾವಿ ರಾಜಕೀಯ ನಾಯಕರಿಗೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡ ವಿಷಯ ಶುಕ್ರವಾರದಂದು ಮಾಧ್ಯಮಗಳಿಗೆ ಸಿಕ್ಕಿತ್ತು. ಅದರೆ ಆ ಪ್ರಭಾವಿ ನಾಯಕರ ಹೆಸರುಗಳು ಬಹಿರಂಗಗೊಂಡಿರಲಿಲ್ಲ.

ಆದರೆ, ಎರೆಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಇಂದು ತಾವಾಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅನುಶ್ರೀ ಯಾರಿಗೆ ಫೋನ್ ಮಾಡಿದ್ದು ಅಂತ ಕೇಳಿದರು. ಆ ಮುಖ್ಯಮಂತ್ರಿ, ಮುಖ್ಯಮಂತ್ರಿಯ ಮಗ ಮತ್ತು ಸಂಸದನ ಹೆಸರುಗಳ್ಯಾಕೆ ಬಹಿರಂಗಗೊಂಡಿಲ್ಲವೆಂದು ಪ್ರಶ್ನಿಸಿದರು. ಕುಮಾರಸ್ವಾಮಿ ಹಾಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಇದುವರೆಗೆ ಕೇವಲ ನಟ–ನಟಿಯರಿಗೆ ಮಾತ್ರ ಸೀಮಿತವಾಗಿದ್ದ ಸ್ಯಾಂಡಲ್​ವುಡ್ ಡ್ರಗ್ಸ್ ಜಾಲದ ಪ್ರಕರಣ ರಾಜಕೀಯ ತಿರುವು ಸಹ ಪಡೆದುಕೊಂಡಿತು.

ಸಿಸಿಬಿ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಅನುಶ್ರೀ ತಮಗೆ ನೋಟಿಸ್ ಬಂದ ತಕ್ಷಣ ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಮತ್ತು ರಾಜ್ಯದಲ್ಲಿ ಎರಡು ಬಾರಿ ಸಿಎಂ ಆದವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಹೇಳಲಾಗಿತ್ತು.

ಸಿಸಿಬಿ ಮೂಲಗಳಿಂದ ಲಭ್ಯವಾದ ಮಾಹಿತಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ, ಸುದ್ದಿಗಾರರೊಂದಿಗೆ ಮಾತಾಡಿ ಮಾಜಿ ಮುಖ್ಯಮಂತ್ರಿಗಳ ಹೆಸರುಗಳನ್ನೆಲ್ಲ ಉಲ್ಲೇಖಿಸಿದರಲ್ಲದೆ ಎರಡು ಬಾರಿ ಮುಖ್ಯಮಂತ್ರಿ ಆದವರಲ್ಲಿ ಜೀವಂತವಾಗಿರುವುದು ತಾನೊಬ್ಬನೇ, ಅನುಶ್ರೀ ಕಾಲ್​ ಲಿಸ್ಟ್​ನಲ್ಲಿರುವ ಆ ಮುಖ್ಯಮಂತ್ರಿಗಳು ಯಾರು ಅನ್ನವುದು ಹೊರ ಬರಬೇಕು, ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಅವರ ಮಾತಿನ ತಾತ್ಪರ್ಯ ಮಾಧ್ಯಮಗಳು ಸುದ್ದಿಗಳ ಮೂಲಗಳನ್ನು ಆಧರಿಸಿ ವರದಿ ಮಾಡುವುದು ತಪ್ಪು ಅನ್ನುವುದಾಗಿತ್ತು.

ಆದರೆ ವಾಸ್ತವ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿಯೇನೆಂದರೆ, ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​ ಆಗಲಿ, ಕಿರುತೆರೆ ಮಾದಕ ವಸ್ತು ನಂಟಿನ ವಿಚಾರವೇ ಆಗಲಿ, ಮಾಧ್ಯಮಗಳಿಗೆ ತಮ್ಮದೇ ಆದ ಸುದ್ದಿ ಮೂಲಗಳಿರುತ್ತವೆ. ಆ ಮೂಲಗಳು ನೀಡಿದ ವರದಿಯನ್ನು ಮಾತ್ರ ಅವು ಬಿತ್ತರಿಸುತ್ತವೆ. ಅನುಶ್ರೀ ವಿಚಾರದಲ್ಲೂ ಅಷ್ಟೇ. ಪೊಲೀಸ್ ಮೂಲಗಳು ನೀಡಿದ ಮಾಹಿತಿಯನ್ನು ಮಾತ್ರ ವರದಿ ಮಾಡಲಾಗಿದೆ  

ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಇಂದು ಸಿಸಿಬಿ ಸುದ್ದಿ ಮೂಲವನ್ನೇ ಪ್ರಶ್ನಿಸಿದ್ದಾರೆ!

ಅನುಶ್ರೀಯವರನ್ನೊಳಗೊಂಡ ಪ್ರಕರಣದ ಸಂಪೂರ್ಣ ತನಿಖೆ ನಡೆಸಿದರೆ ಕಾಲ್​ ಲಿಸ್ಟಿನ ಸತ್ಯ ಹೊರಗೆ ಬಂದೇ ಬರುತ್ತದೆ. ಆಗ ಮಾಜಿ ಮುಖ್ಯಮಂತ್ರಿ ಯಾರು, ಮಾಜಿ ಮುಖ್ಯಮಂತ್ರಿಯ ಮಗ ಯಾರು, ಪ್ರಭಾವಿ ಸಂಸದನ್ಯಾರು ಅನ್ನವುದು ಖಂಡಿತ ಗೊತ್ತಾಗುತ್ತದೆ.

ಆದರೆ, ಕನ್ನಡಿಗರ ಮುಂದಿರುವ ಅತಿ ದೊಡ್ಡ ಪ್ರಶ್ನೆಯೆಂದರೆ ತನಿಖೆ ನಿಜವಾಗಿಯೂ ಅಗುತ್ತದೆಯೋ ಎನ್ನುವುದು. ತನಿಖೆಯಾಗುವ ಮೊದಲೇ ಕುಮಾರಸ್ವಾಮಿ ಸ್ವಯಂಪ್ರೇರಿತರಾಗಿ ಪ್ರತಿಕ್ರಿಯೆ ನೀಡಿರುವುದು ಡ್ರಗ್ಸ್​ ಕೇಸ್​ಗೆ ರಾಜಕೀಯ ತಿರುವು ಸಿಕ್ಕಿದೆ.

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.