ಮಾತಿನ ಭರದಲ್ಲಿ ‘ಯಾವನ್ರೀ ಅವನು ಡಿಸಿ?’ ಅಂದುಬಿಟ್ಟರು ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ

ಮಾತಿನ ಭರದಲ್ಲಿ ‘ಯಾವನ್ರೀ ಅವನು ಡಿಸಿ?’ ಅಂದುಬಿಟ್ಟರು ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 13, 2022 | 1:37 PM

ಕವಿತಾ ಮಾಡುತ್ತಿರುವ ಕೆಲಸದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುವ ಹೊರಟ್ಟಿ ಮಾತಿನ ಭರದಲ್ಲಿ, ‘ಯಾವನ್ರೀ ಅವನು ಡಿಸಿ?’ ಅನ್ನುತ್ತಾರೆ. ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಹೊರಟ್ಟಿ ಅವರಿಂದ ಕನ್ನಡಿಗರು ಇಂಥ ವರ್ತನೆ ನಿರೀಕ್ಷಿಸಲಾರರು.

Dharwad: ಇತ್ತೀಚಿಗೆ ಬಿಜೆಪಿ ಸೇರಿದ ಮಾಜಿ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ (Basavaraj Horatti) ಅವರು ನಮ್ಮ ನಾಡಿನ ಹಿರಿಯ ರಾಜಕಾರಣಿಗಳಲ್ಲೊಬ್ಬರು. ಅದರೆ ಧಾರವಾಡದಲ್ಲಿ ಪಶ್ಚಿಮ ಶಿಕ್ಷಕರ ಮತದಾನ (polling) ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಯೂ ಆಗಿರುವ ಹೊರಟ್ಟಿ ಅವರು ಕರ್ತವ್ಯನಿರತ (on-duty) ಸರ್ಕಾರೀ ಅಧಿಕಾರಿಗಳ ಮೇಲೆ ರೇಗಿದ ಪ್ರಸಂಗ ನಡೆದಿದೆ. ಮತದಾನ ನಡೆಯುತ್ತಿರುವ ಕೇಂದ್ರದಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು 200 ಮೀಟರ್ ದೂರ ಇರಬೇಕೆಂಬ ನಿಯಮವನ್ನು ಜಿಲ್ಲಾಧಿಕಾರಿಗಳ ಅದೇಶದ ಮೇರೆಗೆ ಕವಿತಾ ಹೆಸರಿನ ಪೊಲೀಸ್ ಇನ್ಸ್ಪೆಕ್ಟರ್ ಕಟ್ಟುನಿಟ್ಟಾಗಿ ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ಕವಿತಾ ಮಾಡುತ್ತಿರುವ ಕೆಲಸದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುವ ಹೊರಟ್ಟಿ ಮಾತಿನ ಭರದಲ್ಲಿ, ‘ಯಾವನ್ರೀ ಅವನು ಡಿಸಿ?’ ಅನ್ನುತ್ತಾರೆ. ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಹೊರಟ್ಟಿ ಅವರಿಂದ ಕನ್ನಡಿಗರು ಇಂಥ ವರ್ತನೆ ನಿರೀಕ್ಷಿಸಲಾರರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.