‘BSY ಯಾಕೆ ಇಷ್ಟು ವೀಕ್ ಆಗಿದ್ದಾರೆಂದು ಚಿಂತೆ.. ಅವನೊಬ್ಬ ಹೇಳಿದ ಅಂತಾ ನೈಟ್​ ಕರ್ಫ್ಯೂಗೆ ಸಹಿ ಹಾಕಿದ್ರು’

BSY ಏಕೆ ಇಷ್ಟು ವೀಕ್ ಆಗಿದ್ದಾರೆಂದು ಚಿಂತೆ ನನಗೆ. ಅವನೊಬ್ಬ ಹೇಳಿದ ಅಂತಾ ನೈಟ್​ ಕರ್ಫ್ಯೂಗೆ ಸಹಿ ಹಾಕಿದ್ರು. ನಾವು ಹೇಳಿದ್ದಕ್ಕೆ ಮಾತ್ರವಲ್ಲ, ಅವರ ಸಚಿವರೂ ಉಗಿದಿದ್ದಾರೆ. ಅದಕ್ಕೆ ನೈಟ್​ ಕರ್ಫ್ಯೂ ವಾಪಸ್​​ ಪಡೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

‘BSY ಯಾಕೆ ಇಷ್ಟು ವೀಕ್ ಆಗಿದ್ದಾರೆಂದು ಚಿಂತೆ.. ಅವನೊಬ್ಬ ಹೇಳಿದ ಅಂತಾ ನೈಟ್​ ಕರ್ಫ್ಯೂಗೆ ಸಹಿ ಹಾಕಿದ್ರು’
ಡಿ.ಕೆ.ಶಿವಕುಮಾರ್ (ಎಡ); ಬಿ.ಎಸ್​.ಯಡಿಯೂರಪ್ಪ(ಬಲ)
KUSHAL V

|

Dec 25, 2020 | 12:39 PM

ಬೆಂಗಳೂರು: ನೈಟ್​ ಕರ್ಫ್ಯೂ ಕುರಿತು ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅದು, ಆರೋಗ್ಯ ಸಚಿವ ಕೆ.ಸುಧಾಕರ್ ತೆಗೆದುಕೊಂಡ ನಿರ್ಧಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

BSY ಏಕೆ ಇಷ್ಟು ವೀಕ್ ಆಗಿದ್ದಾರೆಂದು ಚಿಂತೆ ನನಗೆ. ಅವನೊಬ್ಬ ಹೇಳಿದ ಅಂತಾ ನೈಟ್​ ಕರ್ಫ್ಯೂಗೆ ಸಹಿ ಹಾಕಿದ್ರು. ನಾವು ಹೇಳಿದ್ದಕ್ಕೆ ಮಾತ್ರವಲ್ಲ, ಅವರ ಸಚಿವರೂ ಉಗಿದಿದ್ದಾರೆ. ಅದಕ್ಕೆ ನೈಟ್​ ಕರ್ಫ್ಯೂ ವಾಪಸ್​​ ಪಡೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

‘11 ಗಂಟೆ ಮೇಲೆ ಯಾರು ಓಡಡ್ತಾರೆ?’ 11 ಗಂಟೆ ಮೇಲೆ ಯಾರು ಓಡಡ್ತಾರೆ? ಯುವ ಪೀಳಿಗೆ ಕಷ್ಟವೋ ಸುಖವೋ ಏನೋ ಒಂದು ಮಾಡಿಕೊಳ್ಳಲಿ. ಯಾರ ಅಭಿಪ್ರಾಯವೂ ಪಡೆಯದೇ ಲಾಕ್​ಡೌನ್ ಮಾಡಿದ್ರೆ ಹೇಗೆ? ಯಾವುದಾದರೂ ದೊಡ್ಡ ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ರಾ? ಅಂಥವರ ಫೋಟೋ ಕೊಟ್ಟರೆ ಮನೆಯಲ್ಲಿ ಹಾಕಿಕೊಂಡು ಕೂರ್ತೀವಿ ಎಂದು ಶಿವಕುಮಾರ್​ ಟಾಂಗ್​ ಕೊಟ್ಟರು.

‘ಬೇಸಿಕ್ ಕಾಮನ್ ಸೆನ್ಸ್ ಇರಬೇಕು’ ಬೇಸಿಕ್ ಕಾಮನ್ ಸೆನ್ಸ್ ಇರಬೇಕು. ಮಾರ್ಕೆಟ್​ಗಳ ತುಂಬಾ ಜನ ಜಂಗುಳಿ ಇದೆ. ಔಷಧಿ ಒದಗಿಸುವುದು, ನೊಂದವರಿಗೆ ದುಡ್ಡು ಕೊಡುವಂಥದ್ದು ಮಾಡಬೇಕು. ಟ್ಯಾಕ್ಸ್ ಕಡಿಮೆ ಮಾಡಬೇಕು. ಉದ್ದಿಮೆದಾರರಿಗೆ ಸಾಲ ಮನ್ನಾ ಮಾಡೋದಿರಲಿ ಇಂಟರೆಸ್ಟ್ ಆದ್ರೂ ಕಡಿಮೆ‌ಮಾಡಿದ್ದಾರಾ? ಲಾರ್ಜರ್ ಇಂಟರೆಸ್ಟ್​ ನೋಡಬೇಕು. ಇಷ್ಟ ಬಂದಂಗೆ ಮಾಡೋದಲ್ಲ ಎಂದು ಶಿವಕುಮಾರ್​ ಹೇಳಿದರು.

ಜ್ಞಾನ ಇಲ್ಲದವರು ಮಾಡಿದ ತೀರ್ಮಾನವಿದು. ಏನು ಗೊತ್ತಿದೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಜೊತೆಗೆ, ಸಂಕ್ರಾಂತಿ ಬರಲಿ ನೋಡೋಣ ಏನೇನಾಗುತ್ತೆ. ಉತ್ತರಾಯಣ ದಕ್ಷಿಣಾಯಣ ಬದಲಾಗುತ್ತಲ್ಲಾ, ಗೊತ್ತಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಚಿವ ಡಾ.ಕೆ.ಸುಧಾಕರ್ ಏನು ಬೇಕಾದರೂ ಹೇಳಲಿ. ಎಲ್ಲದಕ್ಕೂ ನನ್ನನ್ನೆ ಹೊಣೆ ಮಾಡಲಿ, ಆದ್ರೆ ನಾವು ಜನಪರ. ಆದ್ರೆ ನಾವು ಯುವಕರು, ಸಾಮಾನ್ಯ ಜನರ ಪರವಾಗಿರ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada