AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಸುದ್ದಿಗೋಷ್ಠಿ ಕರೆದಿರುವ ರಮೇಶ್ ಜಾರಕಿಹೊಳಿ

ಸಿಡಿ ಬಹಿರಂಗ ಪ್ರಕರಣದ ಬಳಿಕ ಮಾಧ್ಯಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ಮೊದಲ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ. ರಮೇಶ್ ಜಾರಕಿಹೊಳಿ ನಾಳೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.

ನಾಳೆ ಸುದ್ದಿಗೋಷ್ಠಿ ಕರೆದಿರುವ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
KUSHAL V
|

Updated on:Mar 08, 2021 | 8:18 PM

Share

ಬೆಂಗಳೂರು: ಸಿಡಿ ಬಹಿರಂಗ ಪ್ರಕರಣದ ಬಳಿಕ ಮಾಧ್ಯಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ಮೊದಲ ಸುದ್ದಿಗೋಷ್ಠಿ ನಡೆಸಲಿದ್ದಾರೆ. ರಮೇಶ್ ಜಾರಕಿಹೊಳಿ ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.  ಸದ್ಯ, ಸಿಡಿ ಪ್ರಕರಣದ ನಂತರ ಮೊದಲ ಬಾರಿ ಮಾಧ್ಯಮಗಳ ಮುಂದೆ ಕಾಣಿಸಲಿರುವ ಮಾಜಿ ಸಚಿವರ ಸುದ್ದಿಗೋಷ್ಠಿ ಸಾಕಷ್ಟು ಕುತೂಹಲ ಕೆರಳಿಸಿದೆ. ರಮೇಶ್ ಜಾರಕಿಹೊಳಿ ತಮ್ಮ ಸದಾಶಿವನಗರ ನಿವಾಸದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಸಿಡಿ ಬಹಿರಂಗವಾದ ಬಳಿಕ ರಾಜೀನಾಮೆ ನೀಡಿದ್ದ ರಮೇಶ್‌ ನಂತರ ಮಾಧ್ಯಮಗಳಿಂದ ದೂರ ಉಳಿದಿದ್ದರು. ನಿನ್ನೆ ರಮೇಶ್ ಸೋದರ ಬಾಲಚಂದ್ರ ಸುದ್ದಿಗೋಷ್ಠಿ ನಡೆಸಿದ್ರು. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಈ ಹಿಂದೆ ಮಾತನಾಡಿದ್ದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ವಿರುದ್ಧದ ವಿಡಿಯೋವನ್ನು ಪೊಲೀಸರಿಗೆ ತಿಳಿಸುವ ಮೊದಲೇ ರಷ್ಯಾದಲ್ಲಿ ಯುಟ್ಯೂಬ್​ಗೆ ಅಪ್​ಲೋಡ್ ಆಗಿತ್ತು. 17 ಸರ್ವರ್ ಬುಕ್ ಮಾಡಿದ್ದರು. ಅದಕ್ಕಾಗಿ 10 ರಿಂದ 15 ಕೋಟಿ ಖರ್ಚು ಮಾಡಿದ್ದರು. ಗಂಭೀರ ಷಡ್ಯಂತ್ರವನ್ನು ನನ್ನ ಅಣ್ಣನ ವಿರುದ್ಧ ನಡೆಸಲಾಗಿತ್ತು. ದಯವಿಟ್ಟು ಮಾಧ್ಯಮಗಳಲ್ಲಿ ಆ ಮಹಿಳೆಗೆ ಸಂತ್ರಸ್ತ ಮಹಿಳೆ ಎಂಬ ಪದ ಬಳಸಬೇಡಿ. 15 ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿ ಮಂತ್ರಿಗಿರಿ ತಪ್ಪಿಸಲು ಈ ಕೆಲಸ ಮಾಡಿದ್ದಾರೆ. ಸಿಡಿ ಕಟ್​ ಮಾಡಿ ಎಡಿಟ್ ಮಾಡಿ ಹಾಕಿದ್ದಾರೆ. ಷಡ್ಯಂತ್ರ ಹೊರಗೆ ಬರಲು ಸಮಗ್ರ ತನಿಖೆ ಆಗಬೇಕು. ರಮೇಶ್ ಜಾರಕಿಹೊಳಿ ಮನೆಯಿಂದ ಹೊರಗೆ ಬಂದು ದೂರು ಕೊಡಬೇಕು ಎಂದು ಹೇಳಿದ್ದರು.

ಮಹಿಳೆಗೆ ‘ನೀನು ಹೆದರಬೇಡ, 50 ಲಕ್ಷ ಹಣ, ದುಬೈನಲ್ಲಿ ಕೆಲಸ ಕೊಡಿಸ್ತೀವಿ’ ಅಂತ ಆಕೆಗೆ ಭರವಸೆ ಕೊಟ್ಟು ಈ ಕೆಲಸ ಮಾಡಿಸಿದ್ದಾರೆ ಆಂತ ನಮ್ಮ ಸೋರ್ಸ್​ ಹೇಳುತ್ತದೆ. ನಾಳೆ ಒಂದು ದಿನ ಬಿಟ್ಟು ನಮ್ಮ ಸೋರ್ಸ್​ ಮೂಲಕ ನಾವು ಕೆಲಸ ಮಾಡ್ತೀವಿ. ಮರ್ಯಾದೆ ಗೌರವ ಹೋದರೆ ಕಷ್ಟವಾಗುತ್ತೆ. ನಾವೂ ಈ ಕೇಸ್​ ಫಾಲೊ ಮಾಡ್ತೀವಿ. ನಮ್ಮ ಸೋರ್ಸ್ ಮೂಲಕ ಕೆಲಸ ಮಾಡುತ್ತೇವೆ. ಇದು ಹನಿಟ್ರ್ಯಾಪ್ ಆಗಿದೆ. ಪ್ರಶ್ನೆಗಳನ್ನು ಯಾರೋ ಬರೆದುಕೊಟ್ಟಿದ್ದಾರೆ. ಅದನ್ನು ಆಕೆ ಕೇಳಿದ್ದಾಳೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೀತಿದೆ. ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ಕೆಲಸ ಮಾಡಿದ್ದಾರೆ’ ಎಂದು ಅವರು ಆರೋಪಿಸಿದ್ದರು.

ಇವತ್ತು ನಾನೇ ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡ್ತೀನಿ. ಧೈರ್ಯವಾಗಿ ಹೊರಗೆ ಬರಲು ಮನವೊಲಿಸ್ತೀನಿ. ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ನಂತರ ಯೋಚಿಸ್ತೀವಿ. ಲಾಯರ್ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತಗೊಳ್ತೀವಿ ಎಂದು ಬಾಲಚಂದ್ರ ಜಾರಕಿಹೊಳಿ ಮುಂದಿನ ತಮ್ಮ ನಡೆಗಳ ಬಗ್ಗೆ ಸುಳಿವು ನೀಡಿದ್ದರು.

‘ನಾನು ವಿಡಿಯೋ ನೋಡಿಲ್ಲ’ ವಿಡಿಯೊ ನಾನು ಈವರೆಗೆ ನೋಡಿಲ್ಲ. ಇದು ಹನಿಟ್ರ್ಯಾಪ್ ಇರಬಹುದು ಅಥವಾ ಫೇಕ್ ಇರಬಹುದು. ನನ್ನ ಪ್ರಕಾರ ಇದು ಫೇಕ್ ವಿಡಿಯೊ. ಹನಿಟ್ರ್ಯಾಪ್​ಗೆ ಪ್ರಯತ್ನ ಪಟ್ಟಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ದಿನೇಶ್ ಕಲ್ಲಹಳ್ಳಿ ಮಿಸ್​ಗೈಡ್ ಆಗಿರಬಹುದು’ ದಿನೇಶ್ ಕಲ್ಲಹಳ್ಳಿಯೂ ಇದರಲ್ಲಿ ಮಿಸ್​ಗೈಡ್ ಆಗಿರಬಹುದು. ಅವರಿಗೆ ಸಂಪೂರ್ಣ ಮಾಹಿತಿ ಕೊಡದೇ ದಾರಿತಪ್ಪಿಸಿದ್ದಾರೆ ಆಂತ ನನಗೆ ಅನ್ನಿಸುತ್ತೆ. ದಿನೇಶ್ ಕಲ್ಲಹಳ್ಳಿಯನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರಬಹುದು.

ರಮೇಶ್ ಜಾರಕಿಹೊಳಿ ಅವರು ದೂರು ಕೊಡೋಕೆ ಆಗದಿದ್ದರೆ ನಮಗೆ ಹೇಳಲಿ. ನಾವು ದೂರು ಕೊಡ್ತೀವಿ. ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಸಿಬಿಐ ತನಿಖೆ ಆಗಬೇಕು. ಕಾಣದ ಕೈಗಳು ಹೊರಗೆಬರಬೇಕು. ಸಂತ್ರಸ್ತೆ ಮಹಿಳೆ ಅಂತ ನೀವು ಹೇಳ್ತಿದ್ದೀರಿ. ಬಹಳ ದಿನಗಳಿಂದ ಈ ಬಗ್ಗೆ ಚರ್ಚೆ ಆಗಿದೆ. ನನ್ನ ಸೋರ್ಸ್​ ಮೂಲಕ ನಾನೂ ಪರಿಶೀಲಿಸಿದೆ.ನಮ್ಮ ಸೋರ್ಸ್​ ಮೂಲಕ ತಿಳಿದ ಮಾಹಿತಿಯಿದು’ ಎಂದು ಅವರು ಹೇಳಿದರು. ನಮ್ಮ ಕುಟುಂಬ, ಬಿಜೆಪಿಗೆ ಮುಜುಗರ ತರಲೆಂದು ಈ ಕೆಲಸ ಮಾಡಿದ್ದಾರೆ. ರಾಜಕೀಯ ಪಕ್ಷದವರು ಮಾತ್ರವೇ ಅಲ್ಲ, ಬೇರೆಯವರೂ ಇದರಲ್ಲಿ ಇದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೋಲ್ಕತ್ತಾದ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಹಲವರು ಸಿಲುಕಿರುವ ಶಂಕೆ

Published On - 8:06 pm, Mon, 8 March 21

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು