AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿದ್ದರಾಮಯ್ಯಗೆ BSY ತನಗಿಂತ ಚೆನ್ನಾಗಿ ಬಜೆಟ್ ಮಂಡಿಸ್ತಾರೆ ಅನ್ನೋ ಭಯವಿತ್ತು.. ಅದಕ್ಕೇ ಸಭಾತ್ಯಾಗ ಮಾಡಿದರು’

ಯಾರೊಬ್ಬರೂ ಸಿದ್ದರಾಮಯ್ಯನವರಷ್ಟು ಬಜೆಟ್ ಮಂಡಿಸಿಲ್ಲ. ಅವರಿಗೆ ತನಗಿಂತ ಸಿಎಂ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಬಜೆಟ್ ಮಂಡಿಸುತ್ತಾರೆನ್ನುವ ಭಯವಿತ್ತು. ಹಾಗಾಗಿ, ಬಜೆಟ್ ಮಂಡನೆಗೆ ಮುನ್ನ ಸಭಾತ್ಯಾಗ ಮಾಡಿದ್ದಾರೆ. ಕಾಂಗ್ರೆಸ್​ ಸದಸ್ಯರ ಜೊತೆ ಸಿದ್ದರಾಮಯ್ಯ ಸಭಾತ್ಯಾಗಮಾಡಿದ್ರು ಎಂದು ಬಜೆಟ್​ ವೇಳೆ ಕಾಂಗ್ರೆಸ್ ಸಭಾತ್ಯಾಗಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯಗೆ BSY ತನಗಿಂತ ಚೆನ್ನಾಗಿ ಬಜೆಟ್ ಮಂಡಿಸ್ತಾರೆ ಅನ್ನೋ ಭಯವಿತ್ತು.. ಅದಕ್ಕೇ ಸಭಾತ್ಯಾಗ ಮಾಡಿದರು’
ಸಿದ್ದರಾಮಯ್ಯ (ಎಡ); ಸದಾನಂದ ಗೌಡ(ಬಲ)
KUSHAL V
|

Updated on: Mar 08, 2021 | 7:25 PM

Share

ದೆಹಲಿ: ಯಾರೊಬ್ಬರೂ ಸಿದ್ದರಾಮಯ್ಯನವರಷ್ಟು ಬಜೆಟ್ ಮಂಡಿಸಿಲ್ಲ. ಅವರಿಗೆ ತನಗಿಂತ ಸಿಎಂ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಬಜೆಟ್ ಮಂಡಿಸುತ್ತಾರೆನ್ನುವ ಭಯವಿತ್ತು. ಹಾಗಾಗಿ, ಬಜೆಟ್ ಮಂಡನೆಗೆ ಮುನ್ನ ಸಭಾತ್ಯಾಗ ಮಾಡಿದ್ದಾರೆ. ಕಾಂಗ್ರೆಸ್​ ಸದಸ್ಯರ ಜೊತೆ ಸಿದ್ದರಾಮಯ್ಯ ಸಭಾತ್ಯಾಗಮಾಡಿದ್ರು ಎಂದು ಬಜೆಟ್​ ವೇಳೆ ಕಾಂಗ್ರೆಸ್ ಸಭಾತ್ಯಾಗಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

‘ಇದು ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್​’ ಇದು ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್​. ಕೊರೊನಾ ಗೊಂದಲದಲ್ಲಿ ಇದೊಂದು ವಿಕಾಸ ಪತ್ರ. ಇಂತಹ ಸವಾಲು ಯಾರಿಗೂ ಸಿಕ್ಕಿರಲಿಲ್ಲ ಎಂದು ಸದಾನಂದಗೌಡ ಹೇಳಿದರು.

ಸಮತೋಲನ ಬಜೆಟ್ ಮಂಡಿಸಿ ಎಲ್ಲರನ್ನೂ ತಲುಪಿದ್ದಾರೆ. ವಲಯವಾರು ವಿಂಗಡಣೆ ಅದ್ಭುತವಾತ ಕಾನ್ಸೆಪ್ಟ್ ಆಗಿದೆ. ಆಡಳಿತ ಸುಧಾರಣೆಗೆ ಯಡಿಯೂರಪ್ಪ ಒತ್ತುಕೊಟ್ಟಿದ್ದಾರೆ. ಯಾವುದೇ ಹೊಸ ತೆರಿಗೆ ಇಲ್ಲದೆ ಒಳ್ಳೆ ಬಜೆಟ್​ ನೀಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಅಂದ ಹಾಗೆ, ಈ ಹಿಂದೆ ಬಜೆಟ್​ ಬಗ್ಗೆ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅನೈತಿಕ ಸರ್ಕಾರದ ಬಜೆಟ್​ ಕೇಳಬಾರದೆಂಬ ನಿರ್ಣಯ ಮಾಡಿದ್ವಿ. ಹಾಗಾಗಿ, ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದೆವು. ಬಜೆಟ್​ ಮಂಡನೆ ನಂತರ ಆಯವ್ಯಯ ಪುಸ್ತಕ ನೋಡಿದೆ. ಇದು ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಎಂದು ಹೇಳಿದರು.

ಈ ಬಜೆಟ್​ಗೆ ಯಾವುದೇ ಗೊತ್ತು ಗುರಿ ಅನ್ನುವುದೇ ಇಲ್ಲ. ಇದೊಂದು ಟೊಳ್ಳು ಬಜೆಟ್​ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಾವು ಮಂಡಿಸುತ್ತಿದ್ದ ಬಜೆಟ್​ ಪಾರದರ್ಶಕವಾಗಿರುತ್ತಿತ್ತು. ಹಿಂದೆ ಏನಾಗಿತ್ತು, ಮುಂದೆ ಏನಾಗುತ್ತೆ ಎಂದು ಹೇಳುತ್ತಿದ್ದೆವು. ಅಂಕಿ ಅಂಶಗಳನ್ನು ಜನರಿಗೆ ಅರ್ಥವಾಗುವಂತೆ ಹೇಳುತ್ತಿದ್ದೆವು. ಸಿಎಂ ಯಡಿಯೂರಪ್ಪ ರಾಜ್ಯವನ್ನು 6 ವಲಯ ಮಾಡಿದ್ದಾರೆ. ಹಿಂದೆ ಎಷ್ಟು ಖರ್ಚಾಗಿದೆ, ಮುಂದೆ ಎಷ್ಟು ಖರ್ಚಾಗುತ್ತೆ ಇದ್ಯಾವುದರ ಬಗ್ಗೆಯೂ ಆಯವ್ಯಯದಲ್ಲಿ ಉಲ್ಲೇಖಿಸಿಲ್ಲ. ಬಿಚ್ಚಿಡುವುದಕ್ಕಿಂತ ಬಚ್ಚಿಡುವುದು ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಈಗಿನ ಸರ್ಕಾರ ಹಣಕಾಸಿನ ಪರಿಸ್ಥಿತಿ ಬಗ್ಗೆ ಮುಚ್ಚಿಡುತ್ತಿದೆ. ಬಜೆಟ್​ನಲ್ಲಿ ಅಂಕಿ ಸಂಖ್ಯೆ ಜನಸಾಮಾನ್ಯರ ಮುಂದಿಡಬೇಕು. ಈ ಬಜೆಟ್​ನಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ. ವಿಧಾನಸಭೆ, ಜನರಿಗೆ ಸರ್ಕಾರ ಉತ್ತರದಾಯಿಯಾಗಿರುತ್ತದೆ. ಕಳೆದ 5 ವರ್ಷಗಳಲ್ಲಿ ಆದಾಯ ಕೊರತೆ ಎಂಬುದೇ ಇರಲಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಸಾಲ ಹೆಚ್ಚಳವಾಗಿದೆ. ನಮ್ಮ ಅವಧಿಯಲ್ಲಿ ಆದಾಯದ ಕೊರತೆ ಉಂಟಾಗಿರಲಿಲ್ಲ.

‘ಒಟ್ಟಾರೆ ಬಿಜೆಪಿಯವರು ಸಾಲದಲ್ಲಿ ಸರ್ಕಾರ ನಡೆಸುತ್ತಿದ್ದಾರೆ’ ಮೊದಲು 52,000 ಕೋಟಿ ಸಾಲ ಪಡೆಯುತ್ತೇವೆಂದಿದ್ದರು. ಈಗ 71,323 ಕೋಟಿ ಸಾಲ ಪಡೆಯುತ್ತೇವೆನ್ನುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆದಾಯಕ್ಕಿಂತ ಸಾಲ ಹೆಚ್ಚಳವಾಗಿದೆ. ಪ್ರಸಕ್ತ ವರ್ಷ ರಾಜ್ಯದ ಸಾಲದ ಮೊತ್ತ ₹3,97,680 ಕೋಟಿ. ಮುಂದಿನ ಸಾಲಿನಲ್ಲಿ 4,57,889 ಕೋಟಿ ರೂ. ಸಾಲವಾಗುತ್ತೆ. ಒಟ್ಟಾರೆ ಬಿಜೆಪಿಯವರು ಸಾಲದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಮೊದಲ ಬಜೆಟ್ ವೇಳೆ 1,36,000 ಕೋಟಿ ಸಾಲವಿತ್ತು. ಕಾಂಗ್ರೆಸ್​ ಅವಧಿಯಲ್ಲಿ 1,36,000 ಕೋಟಿ ಸಾಲವಿತ್ತು. ನನ್ನ ಕೊನೇ ಬಜೆಟ್​ ವೇಳೆ 2,42,420 ಕೋಟಿ ಸಾಲವಿತ್ತು. ಪ್ರಸ್ತುತ ರಾಜ್ಯದ ಸಾಲದ ಮೊತ್ತ 3,97,680 ಕೋಟಿ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.