ಬೆಳಗಾವಿ: ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ಫಾಲ್ಸ್ನಲ್ಲಿ ಜಲ ವೈಭವ ಗೋಚರಿಸಿದೆ.
ಧುಮುಕಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಭಾರತದ ನಯಾಗರ!
ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಒಂದು ಕಡೆ ಪ್ರವಾಹ ಭೀತಿ ಮತ್ತೊಂದು ಕಡೆ ಜಲಪಾತದಲ್ಲಿ ರುದ್ರ ರಮಣೀಯ ದೃಶ್ಯ ಸೃಷ್ಟಿಯಾಗಿದೆ.
120 ಅಡಿ ಎತ್ತರದಿಂದ ಧುಮುಕುತ್ತಿರುವ ಘಟಪ್ರಭೆ ಹಾಲಿನ ನೊರೆಯಂತೆ ರಭಸವಾಗಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಈ ದೃಶ್ಯ ಆಕರ್ಷಣೀಯವಾಗಿದ್ದು, ರಮ್ಯ ಮನೋಹರವಾಗಿದೆ.