ಬೆಂಗಳೂರು: ಗುರು ಪುಷ್ಯ ಯೋಗದ ಇಂದಿನ ದಿನ ಚಿನ್ನ, ಬೆಳ್ಳಿ ಖರೀದಿಗೆ, ಒಳ್ಳೆಯ ಕೆಲಸ ಕಾರ್ಯಗಳಿಗೆ ಉತ್ತಮ ದಿನ ಎಂಬುದು ಜನಜನಿತ. ಇಂದು 10 ಗ್ರಾಂಗೆ 22 ಕ್ಯಾರೆಟ್ ಚಿನ್ನ ₹ 43,750 ಇದೆ. ಹಾಗೂ ನಿನ್ನೆ 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ ₹ 43,850 ಇತ್ತು. ಇದೀಗ ನಿನ್ನೆಗಿಂತ ₹ 100 ಇಳಿಕೆಯತ್ತ ಸಾಗಿದೆ. ಅದೇ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹ 47,730 ಇದ್ದು, ನಿನ್ನೆ ಚಿನ್ನ ದರ ₹ 47,840 ಇತ್ತು. ಇದರಲ್ಲಿ ₹ 110 ವ್ಯತ್ಯಾಸ ಕಂಡಿದ್ದು, ದರದಲ್ಲಿ ಇಳಿಕೆ ಕಂಡು ಬಂದಿದೆ.
ಇಂದು ಗುರುಪುಷ್ಯ ಯೋಗ. ಚಿನ್ನ,ಬೆಳ್ಳಿ ಖರೀದಿಗೆ, ದಾನ-ಧರ್ಮ, ಮನೆಯಲ್ಲಿ ವಿಶೇಷ ಪೂಜೆಗೆ ಹೇಳಿ ಮಾಡಿಸಿರುವ ದಿನ. ಇಂದಿನ ದಿನ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಒಂದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಪುಷ್ಯ ನಕ್ಷತ್ರ ಬರುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದಲ್ಲಿ ಇಂದಿನ ಚಿನ್ನದ ದರ ಎಷ್ಟಿರಬಹುದು ಎಂಬುದರ ಮಾಹಿತಿ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ಮಾಹಿತಿ:
1 ಗ್ರಾಂ ಚಿನ್ನದ ದರ ನಿನ್ನೆ ₹ 4,385 ಇದ್ದು, ಇದೀಗ ₹ 4,375 ಗೆ ಇಳಿಕೆಯಾಗಿದೆ. ಅಂದರೆ 10 ರೂ. ವ್ಯತ್ಯಾಸ ಕಂಡಿದೆ. 8 ಗ್ರಾಂ ಚಿನ್ನ ದರ ನಿನ್ನೆ ₹ 35,080 ಇದ್ದು, ಇಂದು ₹ 35,000 ಆಗಿದೆ. ಹಾಗೆಯೇ ನಿನ್ನೆ 10 ಗ್ರಾಂ ಚಿನ್ನ ದರ ₹ 43,850 ಇದ್ದು, ಇಂದಿನ ದರ ₹ 43,750 ಇದೆ. ಹಾಗೂ 100 ಗ್ರಾ ಚಿನ್ನ ದರ ನಿನ್ನೆ ₹ 4,38,500 ಇದ್ದು, ಇಂದು ₹ 4,37,500 ಆಗಿದೆ.
24 ಕ್ಯಾರೆಟ್ ಚಿನ್ನ ದರದ ಮಾಹಿತಿ:
1 ಗ್ರಾಂ ಚಿನ್ನ ದರ ನಿನ್ನೆ ₹ 4,784 ಇದ್ದು, ಇಂದು ದರ ₹ 4,773 ಇದೆ. ಅಂದರೆ, 11 ರೂ. ವ್ಯತ್ಯಾಸ ಕಂಡು ಬಂದಿದೆ. ಹಾಗೂ 8 ಗ್ರಾಂ ಚಿನ್ನ ದರ ನಿನ್ನೆ ₹ 38,272 ಇದ್ದು, ಇಂದು ದರ ₹ 38,184 ಇದೆ. 10 ಗ್ರಾಂ ಚಿನ್ನ ದರ ನಿನ್ನೆ ₹ 47,840 ಇದ್ದು, ಇಂದು ದರ ₹ 47,730 ಇದೆ. ಹಾಗೂ 100 ಗ್ರಾಂ ಚಿನ್ನದ ದರ ನಿನ್ನೆ ₹ 4,78,400 ಆಗಿದ್ದು, ಇಂದಿನ ದರ ₹ 4,77,300 ಕ್ಕೆ ಇಳಿದಿದೆ. ದಿನದಿಂದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಅಥವಾ ಇಳಿಕೆ ಮುಖ ಮಾಡಿರುವುದನ್ನು ನಾವು ಕಾಣಬಹುದು.
ಬೆಳ್ಳಿ ದರ:
ಬೆಳ್ಳಿ ದರ ನಿನ್ನೆ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಇದೀಗ ಬೆಳ್ಳಿ ದರದಲ್ಲಿ ಕೊಂಚ ಬದಲಾವಣೆಯನ್ನು ಕಾಣಬಹುದು. ನಿನ್ನೆ ಬೆಳ್ಳಿ ದರ 1 ಗ್ರಾಂಗೆ ₹ 70 ಇದ್ದು, ಇಂದು ದರ ₹ 69.90 ಕ್ಕೆ ಇಳಿದಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ ₹ 560 ಇದ್ದು, ಇಂದು ದರ ₹ 559 ಇದೆ. 100 ಗ್ರಾಂ ಬೆಳ್ಳಿ ದರ ನಿನ್ನೆ ₹ 7,000 ಇದ್ದು ಇಂದು ಬೆಲೆ ₹ 6,990 ಇದೆ. ಹಾಗೂ 1 ಕೆಜಿ ಬೆಳ್ಳಿ ದರ ನಿನ್ನೆ ₹ 70,010 ಇದ್ದು, ಇಂದು ದರ ₹ 69,900 ಆಗಿದೆ. ಬೆಳ್ಳಿ ದರ ನಿನ್ನೆಗಿಂತ ಇಂದು ಸ್ವಲ್ಪ ಇಳಿಕೆ ಕಂಡಿದೆ.
ಇದನ್ನೂ ಓದಿ:Guru Pushya Yoga: ಫೆ.25ಕ್ಕೆ ಗುರು-ಪುಷ್ಯ ಯೋಗ, ಏನಿದರ ವಿಶೇಷ?
ಇದನ್ನೂ ಓದಿ: Gold – Silver Price: ಚಿನ್ನದ ದರ ಕೊಂಚ ಏರಿಕೆ; 24 ಕ್ಯಾರೆಟ್ ಚಿನ್ನ 10ಗ್ರಾಂಗೆ 47,840 ರೂಪಾಯಿ
Published On - 10:22 am, Thu, 25 February 21