ಮೈಸೂರು ಒಡೆಯರ ಸಮೃದ್ಧ ಕಾಲದಲ್ಲಿಯೂ ಚಲಾವಣೆಯಲ್ಲಿತ್ತು ಚಿನ್ನದ ನಾಣ್ಯ, ಅದೀಗ ಹೊನ್ನಾಳಿಯಲ್ಲಿ ಪತ್ತೆಯಾಯ್ತು!
ಈ ಬಂಗಾರ ನಾಣ್ಯಗಳು ಮೈಸೂರು ಸಂಸ್ಥಾನದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದ್ರೆ ಕ್ರಿ.ಶ. 1810-1868 ಚಲಾವಣೆಯಲ್ಲಿ ಇತ್ತು ಎಂದು ಗೊತ್ತಾಗಿದೆ. ನಾಣ್ಯದ ಒಂದು ಮುಖದಲ್ಲಿ ಶಿವ ಮತ್ತು ವಾರ್ವತಿ ಕುಳಿತಿರುವ ಮುದ್ರಿಕೆ ಇದೆ.
ದಾವಣಗೆರೆ: ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಅಂದ್ರೆ ಅದೊಂದು ಸಮೃದ್ಧ ಕಾಲ ಎಂದು ಹೇಳಲಾಗುತ್ತಿದೆ. ಕಾರಣ ಆ ಕಾಲದಲ್ಲಿ ಮುತ್ತು ರತ್ನಗಳನ್ನ ಬೀದಿ ಬೀದಿಗಳಲ್ಲಿ ಅಳೆಯಲಾಗುತ್ತಿತ್ತು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ. ಅದೇ ರೀತಿ ಮೈಸೂರು ಅರಸರ ಕಾಲದಲ್ಲಿಯೂ ಕೂಡಾ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿ ಇದ್ದವು ಎಂಬುದಾಗಿ ಗೊತ್ತಾಗುತ್ತದೆ.ಇಂತಹ ಚಿನ್ನದ ನಾಣ್ಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಪತ್ತೆಯಾಗಿದೆ. ಒಡೆಯರ ಹತ್ತೂರು ಗ್ರಾಮದ ಹೊಸಮನೆ ವಂಶಸ್ಥರಿಗೆ ಅರಸರಿಂದ ಪಾರಂಪರಿಕವಾಗಿ ಬಂದಿರುವ ನಾಣ್ಯ ಇದಾಗಿದೆ. ಈ ಚಿನ್ನದ ನಾಣ್ಯಕ್ಕೆ ಮನೆಯಲ್ಲಿ ಪೂಜೆ ಮಾಡಲಾಗುತ್ತಿದೆ.
ಈ ಬಂಗಾರ ನಾಣ್ಯಗಳು ಮೈಸೂರು ಸಂಸ್ಥಾನದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದ್ರೆ ಕ್ರಿ.ಶ. 1810-1868 ಚಲಾವಣೆಯಲ್ಲಿ ಇತ್ತು ಎಂದು ಗೊತ್ತಾಗಿದೆ. ನಾಣ್ಯದ ಒಂದು ಮುಖದಲ್ಲಿ ಶಿವ ಮತ್ತು ವಾರ್ವತಿ ಕುಳಿತಿರುವ ಮುದ್ರಿಕೆ ಇದೆ. ಇನ್ನೊಂದು ಮುಖದಲ್ಲಿ ದೇವನಾಗರಿಕ ಲಿಪಿಯಲ್ಲಿ ಶ್ರೀಕೃಷ್ಣ ರಾಜ ಎಂದು ಬರೆಯಲಾಗಿದೆ. 3.34 ಗ್ರಾಂ ತೂಕದ ಈ ನಾಣ್ಯ 12.02 ಮಿ.ಮೀ ಸುತ್ತಳತೆ ಹೊಂದಿದೆ. ಇತಿಹಾಸ ತಜ್ಞ ಪ್ರವೀಣ ದೊಡ್ಡಗೌಡ್ರ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ