Gold – Silver Price: ಗುರು ಪುಷ್ಯ ಯೋಗ; ಚಿನ್ನಕೊಳ್ಳಲು ಒಳ್ಳೆಯ ದಿನ!

Gold Silver Rate: ಇಂದು ಗುರುಪುಷ್ಯ ಯೋಗ ದಿನ. ಇಂದು ಆಭರಣದ ಖರೀದಿಗೆ ಒಳ್ಳೆಯ ದಿನ ಎಂಬುದು ನಂಬಿಕೆ. ನಿನ್ನೆಗಿಂತ ಇಂದು ಚಿನ್ನ ದರ ಮತ್ತೆ ಕೊಂಚ ಇಳಿಕೆ ಕಂಡಿದೆ. ಬೆಳ್ಳಿದರ ಕೂಡಾ ನಿನ್ನೆಗಿಂತ ಇಂದು ಕೊಂಚ ಇಳಿಕೆ ಕಂಡಿದೆ. ಹಾಗಿದ್ದಲ್ಲಿ ಚಿನ್ನ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Gold - Silver Price: ಗುರು ಪುಷ್ಯ ಯೋಗ; ಚಿನ್ನಕೊಳ್ಳಲು ಒಳ್ಳೆಯ ದಿನ!
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:Feb 25, 2021 | 10:28 AM

ಬೆಂಗಳೂರು: ಗುರು ಪುಷ್ಯ ಯೋಗದ ಇಂದಿನ ದಿನ ಚಿನ್ನ, ಬೆಳ್ಳಿ ಖರೀದಿಗೆ, ಒಳ್ಳೆಯ ಕೆಲಸ ಕಾರ್ಯಗಳಿಗೆ ಉತ್ತಮ ದಿನ ಎಂಬುದು ಜನಜನಿತ. ಇಂದು 10 ಗ್ರಾಂಗೆ 22 ಕ್ಯಾರೆಟ್ ಚಿನ್ನ ₹ 43,750 ಇದೆ. ಹಾಗೂ ನಿನ್ನೆ 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ ₹ 43,850 ಇತ್ತು. ಇದೀಗ ನಿನ್ನೆಗಿಂತ ₹ 100 ಇಳಿಕೆಯತ್ತ ಸಾಗಿದೆ. ಅದೇ 24 ಕ್ಯಾರೆಟ್​ ಚಿನ್ನ 10 ಗ್ರಾಂಗೆ ₹ 47,730 ಇದ್ದು, ನಿನ್ನೆ ಚಿನ್ನ ದರ ₹ 47,840 ಇತ್ತು. ಇದರಲ್ಲಿ ₹ 110 ವ್ಯತ್ಯಾಸ ಕಂಡಿದ್ದು, ದರದಲ್ಲಿ ಇಳಿಕೆ ಕಂಡು ಬಂದಿದೆ.

ಇಂದು ಗುರುಪುಷ್ಯ ಯೋಗ. ಚಿನ್ನ,ಬೆಳ್ಳಿ ಖರೀದಿಗೆ, ದಾನ-ಧರ್ಮ, ಮನೆಯಲ್ಲಿ ವಿಶೇಷ ಪೂಜೆಗೆ ಹೇಳಿ ಮಾಡಿಸಿರುವ ದಿನ. ಇಂದಿನ ದಿನ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಒಂದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಪುಷ್ಯ ನಕ್ಷತ್ರ ಬರುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದಲ್ಲಿ ಇಂದಿನ ಚಿನ್ನದ ದರ ಎಷ್ಟಿರಬಹುದು ಎಂಬುದರ ಮಾಹಿತಿ ಇಲ್ಲಿದೆ.

22 ಕ್ಯಾರೆಟ್ ಚಿನ್ನದ ಮಾಹಿತಿ: 1 ಗ್ರಾಂ ಚಿನ್ನದ ದರ ನಿನ್ನೆ ₹ 4,385 ಇದ್ದು, ಇದೀಗ ₹ 4,375 ಗೆ ಇಳಿಕೆಯಾಗಿದೆ. ಅಂದರೆ 10 ರೂ. ವ್ಯತ್ಯಾಸ ಕಂಡಿದೆ. 8 ಗ್ರಾಂ ಚಿನ್ನ ದರ ನಿನ್ನೆ ₹ 35,080 ಇದ್ದು, ಇಂದು ₹ 35,000 ಆಗಿದೆ. ಹಾಗೆಯೇ ನಿನ್ನೆ 10 ಗ್ರಾಂ ಚಿನ್ನ ದರ ₹ 43,850 ಇದ್ದು, ಇಂದಿನ ದರ ₹ 43,750 ಇದೆ. ಹಾಗೂ 100 ಗ್ರಾ ಚಿನ್ನ ದರ ನಿನ್ನೆ ₹ 4,38,500 ಇದ್ದು, ಇಂದು ₹ 4,37,500 ಆಗಿದೆ.

24 ಕ್ಯಾರೆಟ್ ಚಿನ್ನ ದರದ ಮಾಹಿತಿ: 1 ಗ್ರಾಂ ಚಿನ್ನ ದರ ನಿನ್ನೆ ₹ 4,784 ಇದ್ದು, ಇಂದು ದರ ₹ 4,773 ಇದೆ. ಅಂದರೆ, 11 ರೂ. ವ್ಯತ್ಯಾಸ ಕಂಡು ಬಂದಿದೆ. ಹಾಗೂ 8 ಗ್ರಾಂ ಚಿನ್ನ ದರ ನಿನ್ನೆ ₹ 38,272 ಇದ್ದು, ಇಂದು ದರ ₹ 38,184 ಇದೆ. 10 ಗ್ರಾಂ ಚಿನ್ನ ದರ ನಿನ್ನೆ ₹ 47,840 ಇದ್ದು, ಇಂದು ದರ ₹ 47,730 ಇದೆ. ಹಾಗೂ 100 ಗ್ರಾಂ ಚಿನ್ನದ ದರ ನಿನ್ನೆ ₹ 4,78,400 ಆಗಿದ್ದು, ಇಂದಿನ ದರ ₹ 4,77,300 ಕ್ಕೆ ಇಳಿದಿದೆ. ದಿನದಿಂದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಅಥವಾ ಇಳಿಕೆ ಮುಖ ಮಾಡಿರುವುದನ್ನು ನಾವು ಕಾಣಬಹುದು.

ಬೆಳ್ಳಿ ದರ: ಬೆಳ್ಳಿ ದರ ನಿನ್ನೆ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಇದೀಗ ಬೆಳ್ಳಿ ದರದಲ್ಲಿ ಕೊಂಚ ಬದಲಾವಣೆಯನ್ನು ಕಾಣಬಹುದು. ನಿನ್ನೆ ಬೆಳ್ಳಿ ದರ 1 ಗ್ರಾಂಗೆ ₹ 70 ಇದ್ದು, ಇಂದು ದರ ₹ 69.90 ಕ್ಕೆ ಇಳಿದಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ ₹ 560 ಇದ್ದು, ಇಂದು ದರ ₹ 559 ಇದೆ. 100 ಗ್ರಾಂ ಬೆಳ್ಳಿ ದರ ನಿನ್ನೆ ₹ 7,000 ಇದ್ದು ಇಂದು ಬೆಲೆ ₹ 6,990 ಇದೆ. ಹಾಗೂ 1 ಕೆಜಿ ಬೆಳ್ಳಿ ದರ ನಿನ್ನೆ ₹ 70,010 ಇದ್ದು, ಇಂದು ದರ ₹ 69,900 ಆಗಿದೆ. ಬೆಳ್ಳಿ ದರ ನಿನ್ನೆಗಿಂತ ಇಂದು ಸ್ವಲ್ಪ ಇಳಿಕೆ ಕಂಡಿದೆ.

ಇದನ್ನೂ ಓದಿ:Guru Pushya Yoga: ಫೆ.25ಕ್ಕೆ ಗುರು-ಪುಷ್ಯ ಯೋಗ, ಏನಿದರ ವಿಶೇಷ?

ಇದನ್ನೂ ಓದಿ: Gold – Silver Price: ಚಿನ್ನದ ದರ ಕೊಂಚ ಏರಿಕೆ; 24 ಕ್ಯಾರೆಟ್ ಚಿನ್ನ 10ಗ್ರಾಂಗೆ 47,840 ರೂಪಾಯಿ

Published On - 10:22 am, Thu, 25 February 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ