AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ; ಚಿನ್ನಾಭರಣದ ಬೆಲೆ ಎಷ್ಟಿದೆ ಗೊತ್ತಾ?

10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,300 ರೂಪಾಯಿ ಇದೆ. 2020ರ ಸಮಯದಲ್ಲಿ ಆಗಸ್ಟ್‌ ತಿಂಗಳಿನಲ್ಲಿ 10 ಗ್ರಾಂ ಚಿನ್ನದ ಬೆಲೆ 56,200 ರೂಪಾಯಿ ಆಗಿತ್ತು.

Gold Silver Price: ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ; ಚಿನ್ನಾಭರಣದ ಬೆಲೆ ಎಷ್ಟಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
shruti hegde
| Updated By: ಪೃಥ್ವಿಶಂಕರ|

Updated on: Mar 05, 2021 | 8:35 AM

Share

ಬೆಂಗಳೂರು: ನಿನ್ನೆಯ ಚಿನ್ನ ದರವನ್ನು ಗಮನಿಸಿದರೆ, ಇಂದು ದರದಲ್ಲಿ ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ ದರ 42,450 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನ ನಿನ್ನೆ 46,300 ರೂಪಾಯಿ ಇದ್ದು, ಇಂದಿನ ದರ 45,600 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 700 ರೂಪಾಯಿಯಷ್ಟು ಇಳಿಕೆ ಕಂಡಿದೆ. ಇನ್ನು, ಬೆಳ್ಳಿ ದರದಲ್ಲಿ ಯಾವುದೇ ದರ ಬದಲಾವಣೆ ಕಂಡುಬಂದಿಲ್ಲ. ಸತತ ಎರಡು ದಿನಗಳಿಂದ ಬೆಳ್ಳಿ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ.

ದೇಶದಲ್ಲಿ ದಿನೇದಿನೇ ಚಿನ್ನದ ಬೆಲೆ ಇಳಿಕೆಯತ್ತ ಸಾಗುತ್ತಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,300 ರೂಪಾಯಿ ಇದೆ. 2020ರ ಸಮಯದಲ್ಲಿ ಆಗಸ್ಟ್‌ ತಿಂಗಳಿನಲ್ಲಿ 10 ಗ್ರಾಂ ಚಿನ್ನದ ಬೆಲೆ 56,200 ರೂಪಾಯಿ ಆಗಿತ್ತು.‌ ಕಳೆದ ವರ್ಷಕ್ಕೆ ಹೋಲಿಸಿದರೆ ದರ ಇಳಿಕೆಯ ಹಾದಿ ಕಂಡಿದೆ. ಈ ಕುರಿತಂತೆ ಚಿನ್ನ ಖರೀದಿಗೆ ಇದು ಸಕಾಲ ಎಂದು ಹೂಡಿಕೆ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಚಿನ್ನ ದರ ಈ ವರ್ಷ ಇಳಿಕೆ ಕಂಡು ಬಂದಿದ್ದು, ಗ್ರಾಹಕರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ತಮ ಸಮಯವಿದು. ಅದೆಷ್ಟೋ ದಿನಗಳ ಕಾಲ ಕೂಡಿಟ್ಟ ಹಣವನ್ನು ಚಿನ್ನಕ್ಕಾಗಿ ವ್ಯಯಿಸಲು ಇದು ಒಳ್ಳೆಯ ಸಮಯ. ಚಿನ್ನ ದರ ಕುಸಿತ ಕಂಡಿದ್ದು ಚಿನ್ನ‌ಪ್ರಿಯರಿಗೆ ಬಂಪರ್ ಸಿಕ್ಕಂತಾಗಿದೆ.

ನಿನ್ನೆ ಮತ್ತು ಇಂದು 22 ಕ್ಯಾರೆಟ್ ಚಿನ್ನ ದರದ ಮಾಹಿತಿ 1ಗ್ರಾಂ ಚಿನ್ನ ದರ ನಿನ್ನೆ 4,245 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರದಲ್ಲಿ 65 ರೂಪಾಯಿಯಷ್ಟು ಇಳಿಕೆ ಕಂಡಿದ್ದು, ಇಂದಿನ ದರ 4,180 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,960 ರೂಪಾಯಿ ಇದ್ದು, ಇಂದಿನ ದರ 33,440 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 520 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,450 ರೂಪಾಯಿ ಇದ್ದು, ದೈನಂದಿನ ದರ ಬದಲಾವಣೆಯಲ್ಲಿ 650 ರೂಪಾಯಿ ಇಳಿಕೆ ಕಂಡಿದೆ. ಇಂದಿನ ದರ 41,800 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,24,500 ರೂಪಾಯಿಯಾಗಿದ್ದು ಇಂದಿನ ದರ 4,18,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 6,500 ರೂಪಾಯಿಯಷ್ಟು ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರದ ಸಂಪೂರ್ಣ ಮಾಹಿತಿ 1ಗ್ರಾಂ ಚಿನ್ನ ದರ ನಿನ್ನೆ 4,630 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,560 ರೂಪಾಯಿ ಇದೆ. 8 ಗ್ರಾಂ ಚಿನ್ನ ದರ ನಿನ್ನೆ 37,040 ರೂಪಾಯಿ ಇದ್ದು ಇಂದಿನ ದರ 36,480 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 560 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನ ದರ ನಿನ್ನೆ 46,300 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,600 ರೂಪಾಯಿಯಾಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,63,000 ರೂಪಾಯಿ ಇದ್ದು, ಇಂದಿನ ದರ 4,56,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 7,000 ರೂಪಾಯಿ ಇಳಿಕೆ ಕಂಡಿದೆ.

ಬೆಳ್ಳಿ ದರ: ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ, ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸತತ ಎರಡು ದಿನಗಳಿಂದ ಬೆಳ್ಳಿ ದರ ಸ್ಥಿರತೆ ಕಾಪಾಡಿಕೊಂಡಿದೆ. ಹಾಗಿದ್ದಲ್ಲಿ ಬೆಳ್ಳಿ ದರ ಎಷ್ಟಿರಬಹುದು ಎಂಬುದರ ಮಾಹಿತಿ ಇಲ್ಲಿದೆ.

1ಗ್ರಾಂ ಬೆಳ್ಳಿ ದರ 67.70 ರೂಪಾಯಿ. 8 ಗ್ರಾಂ ಬೆಳ್ಳಿ ದರ 540.80 ರೂಪಾಯಿ. 10 ಗ್ರಾಂ ಬೆಳ್ಳಿ ದರ 676 ರೂಪಾಯಿ. 100 ಗ್ರಾಂ ಬೆಳ್ಳಿ ದರ 6,760 ರೂಪಾಯಿ ಹಾಗೂ 1ಕೆ.ಜಿ ಬೆಳ್ಳಿ ದರ 67,600 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?

ಇದನ್ನೂ ಓದಿ: Gold Silver Price: ಚಿನ್ನ ಪ್ರಿಯರಿಗೆ ಚಿನ್ನದಂಥ ಸುದ್ದಿ; ಮತ್ತೆ ಬಂಗಾರದ ಬೆಲೆ ಇಳಿಕೆ!

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್