ಬೆಂಗಳೂರು: ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ ಎರಡು ದಿನಗಳಿಂದ ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ಹಾಗೆಯೇ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಕೂಡಾ ಇಂದು ಇಳಿಕೆ ಕಂಡಿದೆ. ಹಾಗಿದ್ದಲ್ಲಿ ಎಷ್ಟಿದೆ ದರ ಎಂಬುದರ ಮಾಹಿತಿ ತಿಳಿದುಕೊಳ್ಳಬೇಕು ಅಂತಾದರೆ ಇಲ್ಲಿದೆ ಮಾಹಿತಿ.
22 ಕ್ಯಾರೆಟ್ 10ಗ್ರಾಂ ಚಿನ್ನ ದರ 42,050 ರೂಪಾಯಿಯಿಂದ 41,900 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,880 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,700 ರೂಪಾಯಿಗೆ ಇಳಿದಿದೆ. ದರ ಬದಲಾವಣೆಯಲ್ಲಿ 180 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ ಬೆಳ್ಳಿ ದರದಲ್ಲೂ ಇಳಿಕೆ ಕಂಡಿದ್ದು ಇಂದು 1ಕೆಜಿ ಬೆಳ್ಳಿ ದರ 66,500 ರೂಪಾಯಿ ಇದೆ. 1,000 ರೂಪಾಯಿಯಷ್ಟು ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನ ದರ
1ಗ್ರಾಂ ಚಿನ್ನ ದರ ನಿನ್ನೆ 4,205ರೂಪಾಯಿಗೆ ಮಾರಾಟವಾಗಿದೆ. ಇಂದು 4,190 ರೂಪಾಯಿಗೆ ಕುಸಿದಿದೆ. 8 ಗ್ರಾಂ ಚಿನ್ನ 33,640 ರೂಪಾಯಿಯಿಂದ 33,520 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ ಚಿನ್ನ 42,050 ರೂಪಾಯಿಯಿಂದ 41,900 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನ 4,20,500 ರೂಪಾಯಿಂದ 4,19,000 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ಗ್ರಾಂ ಚಿನ್ನ 1,500 ರೂಪಾಯಿಯಷ್ಟು ಇಳಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನ ದರ
1 ಗ್ರಾಂ ಚಿನ್ನ 4,588 ರೂಪಾಯಿಯಿಂದ 4,570 ರೂಪಾಯಿಗೆ ಇಳಿಕೆ ಕಂಡಿದೆ. 8 ಗ್ರಾಂ ಚಿನ್ನ 36,704 ರೂಪಾಯಿಯಿಂದ 36,560 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನ 45,880 ರೂಪಾಯಿಯಿಂದ 45,700 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 100 ರೂಪಾಯಿ ಚಿನ್ನ ದರ ನಿನ್ನೆ 4,58,800 ರೂಪಾಯಿಯಿಂದ 4,57,000 ರೂಪಾಯಿಗೆ ಕುಸಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ಗ್ರಾಂ ಚಿನ್ನ 1,800 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಏರಿಕಯತ್ತವೂ ಸಾಗಬಹುದು. ಇಲ್ಲವೇ ಇಳಿಕೆಯನ್ನೂ ಕಾಣಬಹುದು. ಚಿನ್ನ ಕೊಳ್ಳುವಾಗ ದರ ಗಮನದಲ್ಲಿರಿಸಿ. ಹಾಗೂ ಎಲ್ಲಿ ಚಿನ್ನ ಕೊಳ್ಳುತ್ತಿದ್ದೀರಿ ಎಂಬುದರ ಅರಿವಿರಲಿ. ಅಷ್ಟೊಂದು ಹಣ ಕೊಟ್ಟು ಚಿನ್ನ ಖರೀದಿಸುತ್ತಿರುವಾಗ ಒಳ್ಳೆಯ ಅಂಗಡಿಗಳಲ್ಲಿ ಚಿನ್ನ ಕೊಂಡುಕೊಳ್ಳಿ.
ಬೆಳ್ಳಿ ದರ
ಬೆಳ್ಳಿ ದರ ಎರಡು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿತ್ತು. ಹಾಗೂ ಇದೀಗ ಬೆಳ್ಳಿ ದರದಲ್ಲಿ ಬದಲಾವಣೆ ಕಂಡು ಬಂದಿದ್ದು ಕುಸಿತದತ್ತ ಸಾಗಿದೆ. 1 ಗ್ರಾಂ ಬೆಳ್ಳಿ ದರ 66 ರೂಪಾಯಿ ಇದೆ. ಹಾಗೆಯೇ 8 ಗ್ರಾಂ ಬೆಳ್ಳಿ ದರ 540 ರೂಪಾಯಿಯಿಂದ 532 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ 665 ರೂಪಾಯಿಯಿಂದ 675 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ 6,750 ರೂಪಾಯಿಗೆ ನಿನ್ನೆ ಮಾರಾಟವಾಗಿದ್ದು, ಇಂದು ದರ 6,650 ರೂಪಾಯಿ ಇದೆ. 1ಕೆಜಿ ಬೆಳ್ಳಿ ದರ ನಿನ್ನೆ 67,500 ರೂಪಾಯಿ ಇದ್ದು, ಇಂದು ದರ 66,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ಇಳಿಕೆ ಕಂಡು ಬಂದಿದೆ.
ಇದನ್ನೂ ಓದಿ: Gold Silver Price: ಚಿನ್ನ ದರ ಕುಸಿತ.. ಕೊರೊನಾ ಹೆಚ್ಚಾಗುತ್ತಿದ್ದು ಚಿನ್ನ ದರ ಏರಿಕೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ
Gold Silver Price: ಚಿನ್ನಾಭರಣ ದರ ಇಳಿಕೆ; ಬೆಳ್ಳಿ ದರ ಕೊಂಚ ಏರಿಕೆ! ಇಂದಿನ ದರ ಎಷ್ಟಿದೆ?