AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಚಿನ್ನಾಭರಣ ದರ ಇಳಿಕೆ; ಬೆಳ್ಳಿ ದರ ಕೊಂಚ ಏರಿಕೆ! ಇಂದಿನ ದರ ಎಷ್ಟಿದೆ?

Gold Silver Rate in Bengaluru: ಚಿನ್ನದರ ನಿನ್ನೆಗಿಂತ ಇಂದು ಇಳಿಕೆ ಕಂಡಿದೆ. ಬೆಳ್ಳಿ ದರ ಏರಿಕೆಯತ್ತ ಸಾಗಿದೆ. ಎಷ್ಟಿರಬಹುದು ದರ ಎಂಬುದರ ಮಾಹಿತಿ ಇಲ್ಲಿದೆ.

Gold Silver Price: ಚಿನ್ನಾಭರಣ ದರ ಇಳಿಕೆ; ಬೆಳ್ಳಿ ದರ ಕೊಂಚ ಏರಿಕೆ! ಇಂದಿನ ದರ ಎಷ್ಟಿದೆ?
ಚಿನ್ನದ ಆಭರಣ
shruti hegde
| Edited By: |

Updated on:Mar 10, 2021 | 9:13 AM

Share

ಬೆಂಗಳೂರು: ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ನಿನ್ನೆಗೆ ಇಂದಿನ ಚಿನ್ನ ದರ ಹೋಲಿಸಿದರೆ ಕೊಂಚ ಇಳಿಕೆ ಕಂಡಿರುವುದಂತು ಸತ್ಯ. 10 ಗ್ರಾಂ 22 ಕ್ಯಾರೆಟ್ ಚಿನ್ನ ನಿನ್ನೆ 42,000 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 41,650 ರೂಪಾಯಿಗೆ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 350 ರೂಪಾಯಿ ಇಳಿಕೆ ಕಂಡಿದೆ. ಹಾಗೂ 24 ಕ್ಯಾರೆಟ್ ಚಿನ್ನ ದರ ನಿನ್ನೆ 10 ಗ್ರಾಂಗೆ 45,820 ರೂಪಾಯಿ ಇದ್ದು, ಇಂದಿನ ದರ 45,440 ರೂಪಾಯಿಗೆ ನಿಗದಿಯಾಗಿದೆ. ಅಂದರೆ ದರ ಬದಲಾವಣೆಯಲ್ಲಿ 380 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಬೆಳ್ಳಿ ದರವನ್ನು ಗಮನಿಸಿದಾಗ, ನಿನ್ನೆ 1ಕೆ.ಜಿ ಬೆಳ್ಳಿ ದರ 66,500 ರೂಪಾಯಿ ಇದ್ದು, ಇಂದು 66,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಏರಿಕೆ ಕಂಡಿದ್ದು 200 ರೂಪಾಯಿ ಏರಿಕೆಯತ್ತ ಸಾಗಿದೆ.

22 ಕ್ಯಾರೆಟ್ ಚಿನ್ನ ದರ: 1ಗ್ರಾಂ ಚಿನ್ನ ದರ ನಿನ್ನೆ 4,200 ರೂಪಾಯಿ ಇದ್ದು, ಇಂದಿನ ದರ 4,156 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,600 ರೂಪಾಯಿ ಇದ್ದು, ಇಂದಿನ ದರ 33,320 ರೂಪಾಯಿ. 10 ಗ್ರಾಂ ಚಿನ್ನ ದರ ನಿನ್ನೆ 42,000 ರೂಪಾಯಿ ಇದ್ದು, ಇಂದಿನ ದರ 41,650 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 350 ರೂಪಾಯಿಯಷ್ಟು ಇಳಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,20,000 ರೂಪಾಯಿ ಇದ್ದು, ಇಂದಿನ ದರ 4,16,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಚಿನ್ನವನ್ನು ಹಳದಿ ಲೋಹವೆಂದೂ ಕರೆಯುತ್ತಾರೆ. ಬಂಗಾರ ಎಂಬ ಬದಲಿ ಹೆಸರನ್ನೂ ಬಳಸುತ್ತಾರೆ. ಕರೆಯಲು ಸುಲಭವಾಗಿ ಚಿನ್ನ ಎನ್ನಬಹುದು. ಕೊಂಡುಕೊಳ್ಳಲು ಹೋದರೆ ಅಷ್ಟೇ ದುಬಾರಿ ವಸ್ತು. ಚಿನ್ನಾಭರಣ ಕೊಳ್ಳುವಾಗ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಹೊರಟಾಗ ಗೊಂದಲವಾಗುವುದು ಸಹಜ. ಚಿನ್ನ ಖರೀದಿಸಲು ಇದು ಸರಿಯಾದ ಸಮಯವೇ? ಇನ್ನೊಂದೆರಡು ದಿನ ಕಳೆದರೆ ದರ ಇಳಿಕೆಯತ್ತ ಸಾಗಬಹುದೇನೋ ಎಂಬೆಲ್ಲಾ ಗೊಂದಲಗಳು ಸಾಮಾನ್ಯ. ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಲು ಸರಿ ಎನಿಸಿದರೆ, ಕೊಳ್ಳುವುದು ಉತ್ತಮ. ಏಕೆಂದರೆ ಚಿನ್ನ ದರ ಏರಿಕೆ-ಇಳಿಕೆಯನ್ನು ಊಹಿಸಲು ಬಲು ಕಷ್ಟ.

24 ಕ್ಯಾರೆಟ್ ಚಿನ್ನ ದರ 1 ಗ್ರಾಂ ಚಿನ್ನ ದರ ನಿನ್ನೆ 4,582 ರೂಪಾಯಿ ಇದ್ದು, ಇಂದಿನ ದರ 4,544 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,656 ರೂಪಾಯಿ ಇದ್ದು, ಇಂದಿನ ದರ 36,352 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 304 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,820 ರೂಪಾಯಿ ಇದ್ದು, ದೈನಂದಿನ ದರ ಬದಲಾವಣೆಯಲ್ಲಿ 380 ರೂಪಾಯಿ ಇಳಿಕೆ ಕಂಡಿದೆ. ಅಂದರೆ ಇಂದಿನ ದರ 45,440 ರೂಪಾಯಿ. 100 ಗ್ರಾಂ ಚಿನ್ನ ದರ ನಿನ್ನೆ 4,58,200 ರೂಪಾಯಿ ಇದ್ದು, ಇಂದು ದರ 4,54,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 3,800 ರೂಪಾಯಿ ಇಳಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ

1 ಗ್ರಾಂ ಬೆಳ್ಳಿ ದರ ನಿನ್ನೆ 66.50 ರೂಪಾಯಿ ಇದ್ದು, ಇಂದಿನ ದರ 66.70 ರೂಪಾಯಿ ಆಗಿದೆ. 8ಗ್ರಾಂ ಬೆಳ್ಳಿ ದರ ನಿನ್ನೆ 533.60 ರೂಪಾಯಿದ್ದು, ಇಂದಿನ ದರ 533.20 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 665 ರೂಪಾಯಿ ಇದ್ದು, ಇಂದಿನ ದರ 667 ರೂಪಾಯಿ ನಿಗದಿಯಾಗಿದೆ. ಹಾಗೂ 100 ಗ್ರಾಂ ಬೆಳ್ಳಿ ದರ ನಿನ್ನೆ 6,650 ರೂಪಾಯಿ ಇದ್ದು, ಇಂದಿನ ದರ 6,670 ರೂಪಾಯಿ ಆಗಿದೆ. 1ಕೆ.ಜಿ ಬೆಳ್ಳಿ ದರ ನಿನ್ನೆ 66,500 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 66,700 ರೂಪಾಯಿ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡಿದೆ.

ಇದನ್ನು ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?

ಇದನ್ನೂ ಓದಿ: Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..

Published On - 8:32 am, Wed, 10 March 21

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ