ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ
2021ರ ಫೆಬ್ರವರಿಯಲ್ಲಿ ಒಟ್ಟು 1,13,143 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದೆ. ಜನವರಿ ತಿಂಗಳಲ್ಲಿ ಇದರ ಪ್ರಮಾಣ 1.19 ಲಕ್ಷ ಕೋಟಿ ಇತ್ತು.
ನವದೆಹಲಿ: ಕೊರೊನಾ ಸೋಂಕಿನ ಅಬ್ಬರ ಕಡಿಮೆ ಆಗುತ್ತಿದೆ. ದೇಶಾದ್ಯಂತ ಕೊರೊನಾ ಲಸಿಕೆ ಕೂಡ ನೀಡಲಾಗುತ್ತಿದೆ. ಇದರ ಜತೆ ಜತೆಗೆ ಎಲ್ಲಾ ಆರ್ಥಿಕ ಚಟುವಟಿಕೆಗಳು ರೀ-ಓಪನ್ ಆಗಿದೆ. ಹೀಗಾಗಿ, ಜಿಎಸ್ಟಿ ಸಂಗ್ರಹ ಹೆಚ್ಚುತ್ತಿದೆ. ಅಕ್ಟೋಬರ್ ತಿಂಗಳಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 1 ಲಕ್ಷ ಕೋಟಿಗೂ ಮೀರಿ ಜಿಎಸ್ಟಿ ಸಂಗ್ರಹವಾಗುತ್ತಿದೆ. ಅಂತೆಯೇ ಫೆಬ್ರವರಿ ತಿಂಗಳಲ್ಲೂ ಜಿಎಸ್ಟಿ ಸಂಗ್ರಹಣೆ 1.13 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತ ಇದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
2021ರ ಫೆಬ್ರವರಿಯಲ್ಲಿ ಒಟ್ಟು 1,13,143 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದೆ. ಜನವರಿ ತಿಂಗಳಲ್ಲಿ ಇದರ ಪ್ರಮಾಣ 1.19 ಲಕ್ಷ ಕೋಟಿ ಇತ್ತು. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಜಿಎಸ್ಟಿ ಸಂಗ್ರಗ ಕೊಂಚ ಇಳಿಕೆ ಆಗಿದೆ.
ಕೊರೊನಾ ವೈರಸ್, ನಕಲಿ ಬಿಲ್ಗಳು ಸೇರಿದಂತೆ ಅನೇಕ ಕಾರಣಗಳಿಂದ ಜಿಎಸ್ಟಿ ಸಂಗ್ರಹದಲ್ಲಿ ಕುಸಿತ ಕಂಡಿತ್ತು. ಆದರೆ, ಜಿಎಸ್ಟಿ ಪ್ರಕ್ರಿಯೆಲ್ಲಿ ಸರ್ಕಾರ ಸಾಕಷ್ಟು ಬದಲಾವಣೆ ತಂದಿತ್ತು. ಹೀಗಾಗಿ, ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಕಂಡಿದೆ ಹಣಕಾಸು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
2017ರ ಜುಲೈನಲ್ಲಿ ಜಿಎಸ್ಟಿ ಜಾರಿಗೆ ಬಂದಿತ್ತು. ಜನವರಿ 2021ರಲ್ಲಿ ಜಿಎಸ್ಟಿ ಸಂಗ್ರಹಣೆ ಅತ್ಯಂತ ಹೆಚ್ಚಿನ ಸಂಗ್ರಹಣೆ ಆಗಿತ್ತು. ಡಿಸೆಂಬರ್ನಲ್ಲಿ 1.15 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಇದು ಇತಿಹಾಸದಲ್ಲೇ ಅತ್ಯಧಿಕ ಜಿಎಸ್ಟಿ ಕಲೆಕ್ಷನ್ ಆಗಿದೆ. ಕಳೆದ ಏಪ್ರಿಲ್ನಲ್ಲಿ ಕೇವಲ 32 ಸಾವಿರ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು.
ಇದನ್ನೂ ಓದಿ: GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್ ಆಗಿರೋದು!