AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸಚಿವರ ಊರಲ್ಲೇ ವ್ಹೀಲ್ ಚೇರ್​ ಇಲ್ಲ! ಹೆಗಲ ಮೇಲೆ ಹೊತ್ತೊಯ್ದು ಮಗಳಿಗೆ ಚಿಕಿತ್ಸೆ

ಬಳ್ಳಾರಿ: ವೀಲ್ ಚೇರ್ ನೀಡದ ಕಾರಣ ಹುಷಾರಿಲ್ಲದ ಮಗಳನ್ನು ತಂದೆ ಹೆಗಲ ಮೇಲೆ ಹೊತ್ತೊಯ್ದ ಘಟನೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ಮಗಳನ್ನು ಸಾಗಿಸಲು ವ್ಹೀಲ್ ಚೇರ್ ನೀಡಿಲ್ಲ. ಹೀಗಾಗಿ ತಂದೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ಯಬೇಕಾಯಿತು. ಆರೋಗ್ಯ ಸಚಿವರ ಊರಲ್ಲೇ ವ್ಹೀಲ್ ಚೇರ್​ ಇಲ್ಲ! ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ಗಂಭೀರ ಕಾಯಿಲೆಗೆ ತುತ್ತಾಗಿದ್ದ ತಮ್ಮ ಮಗಳಾದ ಶ್ರೀಂತಾಜ್ […]

ಆರೋಗ್ಯ ಸಚಿವರ ಊರಲ್ಲೇ ವ್ಹೀಲ್ ಚೇರ್​ ಇಲ್ಲ! ಹೆಗಲ ಮೇಲೆ ಹೊತ್ತೊಯ್ದು ಮಗಳಿಗೆ ಚಿಕಿತ್ಸೆ
ಸಾಧು ಶ್ರೀನಾಥ್​
|

Updated on:Jan 23, 2020 | 11:38 AM

Share

ಬಳ್ಳಾರಿ: ವೀಲ್ ಚೇರ್ ನೀಡದ ಕಾರಣ ಹುಷಾರಿಲ್ಲದ ಮಗಳನ್ನು ತಂದೆ ಹೆಗಲ ಮೇಲೆ ಹೊತ್ತೊಯ್ದ ಘಟನೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ಮಗಳನ್ನು ಸಾಗಿಸಲು ವ್ಹೀಲ್ ಚೇರ್ ನೀಡಿಲ್ಲ. ಹೀಗಾಗಿ ತಂದೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ಯಬೇಕಾಯಿತು.

ಆರೋಗ್ಯ ಸಚಿವರ ಊರಲ್ಲೇ ವ್ಹೀಲ್ ಚೇರ್​ ಇಲ್ಲ! ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ಗಂಭೀರ ಕಾಯಿಲೆಗೆ ತುತ್ತಾಗಿದ್ದ ತಮ್ಮ ಮಗಳಾದ ಶ್ರೀಂತಾಜ್ ಅವರಿಗೆ ಚಿಕಿತ್ಸೆ ಕೊಡಿಸಲು ಆ್ಯಂಬುಲೆನ್ಸ್ ವಾಹನದಲ್ಲಿ‌ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು‌ ಬಂದಿದ್ದಾರೆ. ಆ ವಾಹನವು ತುರ್ತು ನಿಗಾಘಟಕಕ್ಕೆ ಇಳಿಸಿ ಮುಂದೆ ಹೋಗಿದೆ.

ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ.‌ ನೀನು ಬೇರೊಂದು ಘಟಕಕ್ಕೆ ತೆರಳುವಂತೆ ಸೂಚಿಸಿದ್ದಾರೆ.‌ ಮಗಳನ್ನು ಬೇರೊಂದು ಘಟಕಕ್ಕೆ ಕರೆದುಕೊಂಡು ಹೋಗಲು ವ್ಹೀಲ್ ಚೇರ್ ನೀಡುವಂತೆ ಕೋರಿದ್ದಾರೆ. ‌ಆದರೆ ಆಸ್ಪತ್ರೆ ಸಿಬ್ಬಂದಿ ಇದು ನಮ್ಮ ಘಟಕದ್ದು. ನೀನು‌ ಹೋಗುವ ಘಟಕಕ್ಕೆ ಮಾಹಿತಿ‌ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ತಂದೆಗೆ ತಾಕೀತು‌ ಮಾಡಿದ್ದಾರೆ. ಆದರೆ ಇವರಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಇನ್ನೂ ಹೀಗೆ ಕಾಲಹರಣ ಮಾಡಿದರೆ ಮಗಳಿಗೆ ಚಿಕಿತ್ಸೆ ತಡವಾಗಬಹುದು ಎಂದು ಮೊದಲೇ ಆತಂಕದಲ್ಲಿದ್ದ ತಂದೆ ತಾನೇ ಹೆಗಲ‌ ಮೇಲೆ ಹೊತ್ತು ಕೊಂಡು ಹೋಗೋದಾಗಿ ತಿಳಿಸಿ, ಮಗಳನ್ನ ತನ್ನ ಹೆಗಲ ಮೇಲೆ ಹೊತ್ತುಕೊಂಡು‌ ಹೋಗಿದ್ದಾರೆ.

Published On - 7:58 am, Thu, 23 January 20