ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 

| Updated By: ಆಯೇಷಾ ಬಾನು

Updated on: Mar 12, 2021 | 6:46 AM

ವಾಷಿಂಗ್ಟನ್​​ ವಿಶ್ವವಿದ್ಯಾಲಯವು ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿದೆ ಮತ್ತು ಅದಕ್ಕೆ ಕಾರಣವನ್ನೂ ನೀಡಿದೆ.

ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 
ಸಾಂದರ್ಭಿಕ ಚಿತ್ರ
Follow us on

ಜಾಬ್​ಗೆ ಸೇರಿದ ಮೇಲೆ ಜೀವನವೇ ಮುಗಿಯಿತು ಎಂಬುದು ಅನೇಕರ ಭಾವನೆ. ಕೆಲವರ ಪಾಲಿಗೆ ಇದು ನಿಜವೂ ಹೌದು. ಏಕೆಂದರೆ, ಕೆಲಸಕ್ಕೆ ಸೇರಿದ ಮೇಲೆ ಬಾಸ್​ ಹೇಳಿದಂತೆ ಕೇಳಬೇಕು. ರಾತ್ರಿ ಪಾಳಿಗೆ ಬರುವಂತೆ ಹೇಳಿದರೆ ಮರುಮಾತನಾಡದೆ ಬರಬೇಕು. ಆದರೆ, ಇನ್ನುಮುಂದೆ ನೈಟ್​ ಶಿಫ್ಟ್​ಗೆ ಓಕೆ ಎನ್ನುವ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಿ. ಏಕೆಂದರೆ, ನಿರಂತರ ರಾತ್ರಿ ಪಾಳಿಯಿಂದ ನಿಮ್ಮ ಆರೋಗ್ಯ ಸಂಪೂರ್ಣವಾಗಿ ಹದಗೆಡಬಹುದಂತೆ! ಹೀಗೊಂದು ಎಚ್ಚರಿಕೆಯನ್ನು ಹೊಸ ಅಧ್ಯಯನ ನೀಡಿದೆ.

ವಾಷಿಂಗ್ಟನ್​​ ವಿಶ್ವವಿದ್ಯಾಲಯ ಈ ಆತಂಕಕಾರಿ ಮಾಹಿತಿ ಹೊರ ಹಾಕಿದೆ. ಅಷ್ಟೇ ಅಲ್ಲ, ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿ,  ಅದಕ್ಕೆ ಕಾರಣವನ್ನೂ ನೀಡಿದೆ. ಈ ಅಧ್ಯಯನ ಹೇಳುವ ಪ್ರಕಾರ ದೀರ್ಘಕಾಲ ರಾತ್ರಿ ಪಾಳಿ ಮಾಡಿದರೆ ಕ್ಯಾನ್ಸರ್​ ವಕ್ಕರಿಸಬಹುದಂತೆ!

ಪ್ರತಿ ವ್ಯಕ್ತಿ ರಾತ್ರಿ ಹೊತ್ತು ನಿದ್ರಿಸಬೇಕು ಮತ್ತು ಮುಂಜಾನೆ ಏಳಬೇಕು. ಆದರೆ, ರಾತ್ರಿ ಪಾಳಿಯಿಂದ ಇದು ತಲೆಕೆಳಗಾಗುತ್ತದೆ. ನೈಟ್​ ಶಿಫ್ಟ್​ ಮಾಡುವ ವ್ಯಕ್ತಿ ಹಗಲು ನಿದ್ರಿಸಿ ರಾತ್ರಿ ಎಚ್ಚರ ಇರುತ್ತಾನೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು, ಈ ಪದ್ಧತಿ ರೂಢಿಸಿಕೊಳ್ಳುವುದರಿಂದ ಡಿಎನ್​ಎ ಕೂಡ ಹಾನಿಗೆ ತುತ್ತಾಗುತ್ತದೆ. ಇದು ಕ್ಯಾನ್ಸರ್​​ಗೆ ಎಡೆಮಾಡಿಕೊಡಬಹುದು ಎನ್ನುತ್ತಿದೆ ಅಧ್ಯಯನ.

ಈ ರೀತಿ ರಾತ್ರಿ ಪಾಳಿ ಮಾಡುವವರನ್ನು ತಜ್ಞರ ತಂಡ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಅವರಲ್ಲಿ ಕ್ಯಾನ್ಸರ್​ ಕಾಣಿಸಿಕೊಂಡವರ ಪ್ರಮಾಣ ಹೆಚ್ಚಿದೆಯಂತೆ. ನಿದ್ರೆಯ ಅಸಮತೋಲನವೇ ಇದಕ್ಕೆ ನೇರ ಕಾರಣ ಎಂದು ಅಧ್ಯಯನ ತಿಳಿಸಿದೆ. ಇದರ ಜತೆಗೆ ಇನ್ನೂ ಅನೇಕ ಅಸಮತೋಲನಗಳು ನೈಟ್​ಶಿಫ್ಟ್​ನಿಂದ ಉಂಟಾಗಬಹುದು ಎಂದು ಅಧ್ಯಯನ ತಿಳಿಸಿದೆ.

ಹಗಲು ನಿದ್ರೆ ಮಾಡುವುದರಿಂದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದಿಲ್ಲ. ಹೀಗಾದಾಗ, ವಿಟಮಿನ್​ ಕೊರತೆ ಕೂಡ ಉಂಟಾಗಲಿದ್ದು, ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:
ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ

ಬೆಳಗೆದ್ದು ಗ್ರೀನ್​ ಟೀ ಅಥವಾ ಬ್ಲಾಕ್​ ಟೀ ಕುಡಿತೀರಾ? ಹಾಗಿದ್ರೆ ಈ ರೋಗಗಳು ನಿಮ್ಮ ಬಳಿ ಸುಳಿಯಲ್ಲ