ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನ ಜಂಗುಳಿ: ಕೊವಿಡ್ ನಿಯಮ ಉಲ್ಲಂಘನೆ, ಮಾರ್ಷಲ್‌ಗಳು ನಾಪತ್ತೆ
ಬೆಂಗಳೂರು: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ನಗರದಲ್ಲಿ ಕೊರೊನಾ ಮಾಯವಾಗಿದೆ. ಮಾರುಕಟ್ಟೆಗಳು ಕೊರೊನಾ ಮುಕ್ತವಾದಂತೆ ಕಂಡು ಬರುತ್ತಿವೆ. ರಾಜಧಾನಿ ಜನ ಕೊರೊನಾವನ್ನು ಮರೆತು ದೈಹಿಕ ಅಂತರ, ಮಾಸ್ಕ್ ಹಾಕದೆ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. K.R.ಮಾರ್ಕೆಟ್‌ನಲ್ಲಿ ಕೊವಿಡ್ ನಿಯಮ ಪಾಲಿಸದೆ. ಮಣ್ಣಿನ ಹಣತೆ, ಹೂ, ಹಣ್ಣು, ಬಾಳೆಕಂದು, ಬೂದಗುಂಬಳ, ನಿಂಬೆ, ಮಾವಿನ ಸೊಪ್ಪು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದು ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಕಂಡು ಬರುವ ದೃಶ್ಯ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಆಪತ್ತನ್ನು […]

ಬೆಂಗಳೂರು: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ನಗರದಲ್ಲಿ ಕೊರೊನಾ ಮಾಯವಾಗಿದೆ. ಮಾರುಕಟ್ಟೆಗಳು ಕೊರೊನಾ ಮುಕ್ತವಾದಂತೆ ಕಂಡು ಬರುತ್ತಿವೆ. ರಾಜಧಾನಿ ಜನ ಕೊರೊನಾವನ್ನು ಮರೆತು ದೈಹಿಕ ಅಂತರ, ಮಾಸ್ಕ್ ಹಾಕದೆ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
K.R.ಮಾರ್ಕೆಟ್‌ನಲ್ಲಿ ಕೊವಿಡ್ ನಿಯಮ ಪಾಲಿಸದೆ. ಮಣ್ಣಿನ ಹಣತೆ, ಹೂ, ಹಣ್ಣು, ಬಾಳೆಕಂದು, ಬೂದಗುಂಬಳ, ನಿಂಬೆ, ಮಾವಿನ ಸೊಪ್ಪು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದು ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಕಂಡು ಬರುವ ದೃಶ್ಯ.
ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಆಪತ್ತನ್ನು ಮರೆತು ಹಬ್ಬದ ಸಂಭ್ರಮದಲ್ಲಿರುತ್ತಾರೆ. ಆದ್ರೆ ಇಲ್ಲಿ ಸೇರಿರುವ ಜನ ಜಂಗುಳಿಯನ್ನು ನಿಯಂತ್ರಿಸಲು ಬಿಬಿಎಂಪಿ ಮಾರ್ಷಲ್‌ಗಳಿಂದಲೂ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಇಷ್ಟೆಲ್ಲಾ ಆದ್ರೂ ಮಾರ್ಷಲ್‌ಗಳು ಮಾರ್ಕೆಟ್‌ನತ್ತ ತಲೆ ಹಾಕಿಲ್ಲ.





