ಬಯಲು ಸೀಮೆ ಬೀದರ್​ ಜಿಲ್ಲೆಯಲ್ಲಿ ಹೆಚ್ಚಿದ ಬಿಸಿಲಿನ ಝಳ, ಜನತೆ ತತ್ತರ

ಬೀದರ್: ಬಿಸಿಲು.. ಬಿಸಿಲು.. ಬಿಸಿಲು.. ಕೆಂಡದಂತಾ ಬಿರು ಬಿಸಿಲಿಗೆ ಬೀದರ್​ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳು ಬಿಸಿಲಿನ ತಾಪಕ್ಕೆ ನಲುಗುವಂತಾಗಿದೆ. ಮಳೆಗಾಲ ಆರಂಭದಲ್ಲಿಯೇ ಬಿಸಿಲ ಝಳ ಜಾಸ್ತಿಯಾಗಿದ್ದು, ಜನರು ಹೊರಗಡೆಗೆ ಕಾಲಿಡದಷ್ಟೂ ಬಿಸಿಲಿನ ಭೀಕರತೆ ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ನಗರದಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಬಿಸಿಲಿನ ಝಳಕ್ಕೆ ಇಲ್ಲಿನ ಜನರು ತತ್ತರಿಸುವಂತಾಗಿದೆ. ಮಳೆಗಾಲ ಆರಂಭದ ದಿಗಳಲ್ಲಿಯೇ ಬಿಸಿಲಿನ ತಾಪ ಇನ್ನಿಲ್ಲದಂತೆ ಕಾಣಿಸಿಕೊಂಡಿದ್ದು […]

ಬಯಲು ಸೀಮೆ ಬೀದರ್​ ಜಿಲ್ಲೆಯಲ್ಲಿ ಹೆಚ್ಚಿದ ಬಿಸಿಲಿನ ಝಳ, ಜನತೆ ತತ್ತರ
Follow us
ಸಾಧು ಶ್ರೀನಾಥ್​
| Updated By:

Updated on:May 24, 2020 | 2:53 PM

ಬೀದರ್: ಬಿಸಿಲು.. ಬಿಸಿಲು.. ಬಿಸಿಲು.. ಕೆಂಡದಂತಾ ಬಿರು ಬಿಸಿಲಿಗೆ ಬೀದರ್​ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳು ಬಿಸಿಲಿನ ತಾಪಕ್ಕೆ ನಲುಗುವಂತಾಗಿದೆ. ಮಳೆಗಾಲ ಆರಂಭದಲ್ಲಿಯೇ ಬಿಸಿಲ ಝಳ ಜಾಸ್ತಿಯಾಗಿದ್ದು, ಜನರು ಹೊರಗಡೆಗೆ ಕಾಲಿಡದಷ್ಟೂ ಬಿಸಿಲಿನ ಭೀಕರತೆ ಹೆಚ್ಚಾಗಿದೆ.

ಮೇ ತಿಂಗಳಿನಲ್ಲಿ ನಗರದಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಬಿಸಿಲಿನ ಝಳಕ್ಕೆ ಇಲ್ಲಿನ ಜನರು ತತ್ತರಿಸುವಂತಾಗಿದೆ. ಮಳೆಗಾಲ ಆರಂಭದ ದಿಗಳಲ್ಲಿಯೇ ಬಿಸಿಲಿನ ತಾಪ ಇನ್ನಿಲ್ಲದಂತೆ ಕಾಣಿಸಿಕೊಂಡಿದ್ದು ಕಳೆದ 50 ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಿಸಿಲು ಜನರಿಗೆ ಚುರುಕು ಮೂಡಿಸಿದೆ.

ಕಾದು ಕೆಂಡದಂತಾಗಿರುವ ಭೂಮಿ: ಜಿಲ್ಲೆಯಲ್ಲೀಗ ಭೂಮಿ ಕಾದು ಕೆಂಡದಂತಾಗಿದ್ದು ರೈತರು ಜಮೀನಿಗೆ ಹೋಗದಂತಾ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರದ ಸಮಸ್ಯೆಯುಂಟಾಗಿದ್ದು, ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಿಗಳು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದು ಬಿಸಿಲಿನಲ್ಲಿ ಕೆಲಸಕ್ಕೂ ಹೋಗದಂತಾ ಸ್ಥಿತಿ ನಿರ್ಮಾಣವಾಗಿದೆ.

ಹಲವು ಕಾಯಿಲೆ ಬರುವ ಸಾಧ್ಯತೆ: ಸೂರ್ಯನ ಪ್ರಖರತೆ ಹೆಚ್ಚಾದಂತೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಸದಾಕಾಲ ಬರಗಾಲವನ್ನೇ ಹಾಸಿ ಹೊದ್ದು ಮಲಗುವ ಇಲ್ಲಿನ ಜನರಿಗೆ ಉರಿ ಬಿಸಿಲು ಹೊಸ ಅನುಭವವೇನಲ್ಲ. ಕಡು ಬೇಸಿಗೆಯಲ್ಲಿಯೂ ಬರಿಗಾಲಿನಲ್ಲಿ ನಡೆದುಕೊಂಡು ಹೋಗುವ ಇಲ್ಲಿನ ಜನರು ಬಿಸಿಲಿಗೆ ಹೆದರುವ ಜನರಲ್ಲ.

ಆದರೂ ಕೂಡ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಜನರು ಮನೆಯಿಂದ ಹೊರಗಡೆ ಬರುವುದಕ್ಕೆ ಹೆದರುತ್ತಿದ್ದಾರೆ. ಇನ್ನೊಂದು ಕಡೆ ರಸ್ತೆಯಲ್ಲಿ ಜನರು ಓಡಾಟ ಕಡಿಮೆಯಾದ ಕಾರಣ ರಸ್ತೆಯಲ್ಲಿ ಜನರು ಕಾಣಿಸುತ್ತಿಲ್ಲ. ಹಗಲಿಡಿ ಸೂರ್ಯನ ಪ್ರಖರತೆಗೆ ಕಾದು ಕಬ್ಬಿಣದಂತಾಗುವ ಆರ್​ಸಿಸಿ ಮನೆಗಳು ರಾತ್ರಿ 12 ಗಂಟೆಯ ವರೆಗೂ ಬಿಸಿಯನ್ನ ಹೊರಸೂಸುವುದರಿಂದ ಮನೆಯಲ್ಲಿ ನೆಮ್ಮಂದಿಯಿಂದ ನಿದ್ದೆ ಮಾಡದಂತಾ ಸ್ಥಿತಿ ನಿರ್ಮಾಣವಾಗಿದೆ.

ಮುಂಜಾನೆ 8 ಗಂಟೆಯಿಂದ ಆರಂಭವಾಗುವ ಬಿಸಿಲಿನ ಝಳ ಸಾಯಂಕಾಲ 5 ಗಂಟೆವರೆಗೂ ಇರುವುದರಿಂದ ಜನರು ಕಂಗಾಲಾಗಿದ್ದಾರೆ. ಎಪ್ರಿಲ್​, ಮೇ ತಿಂಗಳಿನಲ್ಲಿ 42 ಡಿಗ್ರಿಯಷ್ಟು ಬಿಸಿಲು ದಾಖಲಾಗಿದೆ.

Published On - 1:50 pm, Sun, 24 May 20

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ