Updated on: Dec 30, 2022 | 3:55 PM
ಹೊಸ ವರ್ಷದ ಸಡಗರದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಬಯಸಿದ್ದೀರಾ? ಹಾಗಿದ್ದರೆ ಕ್ರಿಯೇಟಿವ್ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ.
ಟೇಬಲ್ ಕ್ಯಾಲೆಂಡರ್: ನಿಮ್ಮ ಪ್ರೀತಿ ಪಾತ್ರರೊಂದಿಗಿನ ಸುಂದರ ಫೋಟೋಗಳನ್ನು ಹೊಂದಿರುವ ಟೇಬಲ್ ಕ್ಯಾಲೆಂಡರ್ನ್ನು ಗಿಫ್ಟ್ ಕೊಡಿ. 2023ರ ವರ್ಷ ಪೂರ್ತಿ ನಿಮ್ಮನ್ನು ನೆನೆಯುವಂತೆ ಮಾಡುತ್ತದೆ.
ಲೈಟ್ ವಿತ್ ಬಾಟಲ್: ಬಾಟಲ್ ಒಳಗೆ ನಿಮ್ಮ ಸ್ನೇಹಿತರೊಂದಿಗಿನ ಭಾವ ಚಿತ್ರವನ್ನು ಇರಿಸಿ. ಇದು ಗಾಜಿನ ಒಳಗೆ ಎಲ್ಇಡಿ ಸ್ಟ್ರಿಂಗ್ ಲೈಟ್ನೊಂದಿಗೆ ಹೊಳೆಯುವಂತೆ ಮಾಡುತ್ತದೆ. ಇದು ನಿಮ್ಮಿಬ್ಬರ ನಡುವಿನ ಸುಂದರಕ್ಷಣಗಳನ್ನು ಮತ್ತೇ ಮತ್ತೇ ನೆನಪಿಸುವಂತೆ ಮಾಡುತ್ತದೆ.
ಮಿನಿ ಪ್ರೊಜೆಕ್ಟರ್: ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಹೊಸ ವರ್ಷದ ಸಂಭ್ರಮದಲ್ಲಿ ಮಿನಿ ಪ್ರೊಜೆಕ್ಟರ್ ಗಿಫ್ಟ್ ಕೊಡಿ. ಹೊಸ ಹೊಸ ಸಿನಿಮಾಗಳನ್ನು ನೋಡಲು ಬಿಗ್ ಸ್ಕ್ರೀನ್ನಲ್ಲಿ ನೋಡಲು ಸಹಾಯ ಮಾಡುತ್ತದೆ.
ಕಾಫಿ ಮೇಕರ್: ಬಹುತೇಕ ಎಲ್ಲರೂ ಕಾಫಿ ಕುಡಿಯುವ ಸ್ನೇಹಿತರನ್ನು ಹೊಂದಿರುತ್ತಾರೆ. ದಿನಕ್ಕೆ ಎರಡು ಮೂರು ಬಾರಿ ಕಾಫಿ ಶಾಪ್ಗಳಲ್ಲಿ ಹಣ ಖರ್ಚು ಮಾಡುವ ಬದಲಾಗಿ, ಸುಲಭವಾಗಿ ಕಾಫಿ ತಯಾರಿಸಬಹುದಾಗಿದೆ.
ಏರ್ ಪ್ಯೂರಿಫೈಯರ್ : ನಗರ ಪ್ರದೇಶದಲ್ಲಿನ ಅಧಿಕ ಜನದಟ್ಟನೆ, ಧೂಳು, ಮಾಲಿನ್ಯಗಳಿಂದ ಹೊರಬರಲು ಹಾಗೂ ಆರಾಮದಾಯಕವಾಗಿರಲು ನಿಮ್ಮ ಸ್ನೇಹಿತರಿಗೆ ಏರ್ ಪ್ಯೂರಿಫೈಯರ್ನ್ನು ಉಡುಗೊರೆಯಾಗಿ ನೀಡಿ.