Horoscope ದಿನ ಭವಿಷ್ಯ | ಮಹತ್ವದ ಕೆಲಸಕ್ಕೆ ವಿಘ್ನ ಉಂಟಾಗುವ ಸಾಧ್ಯತೆ ಇದೆ ಈ ರಾಶಿಯವರಿಗೆ

Today Horoscope ಮಾರ್ಚ್ 22, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope ದಿನ ಭವಿಷ್ಯ | ಮಹತ್ವದ ಕೆಲಸಕ್ಕೆ ವಿಘ್ನ ಉಂಟಾಗುವ ಸಾಧ್ಯತೆ ಇದೆ ಈ ರಾಶಿಯವರಿಗೆ
ದಿನ ಭವಿಷ್ಯ
ಆಯೇಷಾ ಬಾನು

Updated on: Mar 22, 2021 | 6:27 AM

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಸೋಮವಾರ, ಮಾರ್ಚ್ 22, 2021. ಆರ್ದ್ರೆ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 7.49 ರಿಂದ ಇಂದು ಬೆಳಿಗ್ಗೆ 9.20ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.18. ಸೂರ್ಯಾಸ್ತ: ಸಂಜೆ 6.27.

ತಾ.22-03-2021 ರ ಸೋಮವಾರದ ರಾಶಿಭವಿಷ್ಯ

ಮೇಷ: ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ. ಶುಭ ಸಂಖ್ಯೆ: 3

ವೃಷಭ: ಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವುದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 9

ಮಿಥುನ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 4

ಕರ್ಕ: ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸೌಖ್ಯಯ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು. ಶುಭ ಸಂಖ್ಯೆ: 6

ಸಿಂಹ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 1

ಕನ್ಯಾ: ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವುದು. ಸಮತೋಲಿತ ಜೀವನವಿರುವುದು. ಶುಭ ಸಂಖ್ಯೆ: 5

ತುಲಾ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 7

ವೃಶ್ಚಿಕ: ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವುದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಯೆಗಳು ಪರಿಹಾರವಾಗುವವು. ಶುಭ ಸಂಖ್ಯೆ: 4

ಧನು: ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಶುಭ ಸಂಖ್ಯೆ: 1

ಮಕರ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ: 2

ಕುಂಭ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 8

ಮೀನ: ಯುವಕರಿಗೆ ನವಿರಾದ ಮಾತುಗಳಿಂದ ಸಂಗಾತಿಗಳನ್ನು ಗೆಲ್ಲುವ ಛಾತಿ. ಆಕರ್ಷಕ ನಿರ್ಧಾರಗಳಿಂದ ಮನ್ನಣೆ. ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ. ಶುಭ ಸಂಖ್ಯೆ: 3

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us